
ಮಡಿಕೇರಿ ಸೆ.19 NEWS DESK : 66/11ಕೆ.ವಿ ಮಡಿಕೇರಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಹಾಗೂ ಎಫ್11 ಗಾಳಿಬೀಡು ಫೀಡರ್‍ನಲ್ಲಿ ಸೆಪ್ಟೆಂಬರ್, 20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ದಸರಾ ಹಬ್ಬದ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಂಪಿಗೆ ಕಟ್ಟೆ, ಕನ್ನಂಡಬಾಣೆ, ಎ.ವಿ ಶಾಲೆ, ಗದ್ದಿಗೆ, ಉಕ್ಕುಡ, ಅಜಾದ್ ನಗರ, ತ್ಯಾಗರಾಜ ಕಾಲೋನಿ, ಅಬ್ಬಿಫಾಲ್ಸ್ ರಸ್ತೆ, ಭಗವತಿ ನಗರ, ಮಲ್ಲಿಕಾರ್ಜುನ ನಗರ, ರಾಣಿಪೇಟೆ, ಮಾರ್ಕೇಟ್, ಮಹದೇವಪೇಟೆ, ಕಾನ್ವೆಂಟ್ ಜಂಕ್ಷನ್, ಕೂರ್ಗ್ ಇಂಟರ್ ನ್ಯಾಷನಲ್, ಐ.ಟಿಐ ಹಿಂಭಾಗ, ಕಾವೇರಿ ಬಡಾವಣೆ, ಟಿಜಾನ್ ಬಡಾವಣೆ, ಅಬ್ದುಲ್ ಕಲಾಂ ಬಡಾವಣೆ, ಹೆಬ್ಬೆಟ್ಟಗೇರಿ, ದೇವಸ್ತೂರು, ಕೆ.ಬಾಡಗ, ಗಾಳಿಬೀಡು, ಕಾಲೂರು, ಸಿದ್ದಿಕಾಡು, ವಣಚಲು, ಕೆ.ನಿಡುಗಣೆ, ಕುಂಡಾಮೇಸ್ತ್ರಿ, ಕುಡಿಯುವ ನೀರು, ಕೂಟುಹೊಳೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.








