
ನಾಪೋಕ್ಲು ಅ.9 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮವು ಏ.17 ರಿಂದ 24ರ ವರೆಗೆ ನಡೆಯಲಿದೆ. ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಮರ್ಕಜ್ ಸಂಸ್ಥೆಯಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಹಾಗೂ ಕೊಡಗು ಜಿಲ್ಲಾ ಖಾಜಿಗಳಾದ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾಯತ್ ಅಧ್ಯಕ್ಷರಾದ ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷರಾದ ಅಬೂಬಕರ್, ಕೆ.ಎಸ್.ಮಜೀದ್, ಹನಿಫಾ, ಸಿ.ಎಂ.ಅಶ್ರಫ್, ಹ್ಯಾರಿಸ್, ಯೂಸುಫ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









