
ವಿರಾಜಪೇಟೆ ಅ.9 NEWS DESK : ಅಖಿಲ ಭಾರತ ಎಸ್.ಎನ್.ಡಿ.ಪಿ ಯೋಗಂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಉದ್ಯಮಿಗಳಾದ ವೆಲ್ಲಪಳ್ಳಿ ನಟೇಶನ್ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಗೋಲ್ಡನ್ ಬೀನ್ಸ್ ಹೋಂ ಸ್ಟೇ ಗೆ ಖಾಸಗಿ ಭೇಟಿಯನ್ನು ನೀಡಿದರು. ಭೇಟಿ ಸಂದರ್ಭದಲ್ಲಿ ಎಸ್ ಎನ್ ಡಿ ಪಿ ಯ ಪಧಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಎಸ್ ಎನ್ ಡಿ ಪಿ ಸಂಘಟನೆಯ ವಿರಾಜಪೇಟೆ, ಸಿದ್ದಾಪುರ ಹಾಗೂ ಹೆಗ್ಗಳ ದ ಪದಾಧಿಕಾರಿಗಳು ಭೇಟಿಯಾಗಿ ಸಂಘಟನೆಯ ಕುರಿತು ಚರ್ಚೆ ನಡೆಸಿದರು. ಮಾತ್ರವಲ್ಲದೆ ಉಭಯ ಕುಶಲೋಪರಿಯನ್ನು ನಡೆಸಿದರು. ಎಸ್ ಎನ್ ಡಿ ಪಿ ಸಂಘಟನೆ ಹಾಗೂ ಹೆಗ್ಗಳದ ಗೋಲ್ಡನ್ ರಾಕ್ಸ್ ನ ವತಿಯಿಂದ ವೆಲ್ಲಪಳ್ಳಿ ನಟೇಶನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಹೆಗ್ಗಳ ಗ್ರಾಮದ ಗೋಲ್ಡನ್ ರಾಕ್ಸ್ ಹಾಗೂ ಗೋಲ್ಡನ್ ಬೀನ್ಸ್ ನ ಮಾಲೀಕರು, ಉದ್ಯಮಿಗಳಾದ ಸಜೇಶ್ ಭರತನ್, ಪತ್ನಿ ಪೂಜಾ ಸಜೇಶ್, ವಿರಾಜಪೇಟೆ ಪುರಸಭಾ ಸದಸ್ಯ ಪೃಥ್ವಿನಾಥ್, ವಿರಾಜಪೇಟೆ ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಶೀಬಾ ಪೃಥ್ವಿನಾಥ್, ಎಸ್ ಎನ್ ಡಿ.ಪಿ ಸಂಘಟನೆಯ ಸಿದ್ದಾಪುರ ವಿಭಾಗದ ಅಧ್ಯಕ್ಷರಾದ ಯೋಗೇಶ್, ವಿರಾಜಪೇಟೆ, ಸಿದ್ದಾಪುರ ಹಾಗೂ ಹೆಗ್ಗಳ ಭಾಗದ ಎಸ್ ಎನ್ ಡಿ ಪಿ ಸಂಘಟನೆಯ ಪಧಾಧಿಕಾರಿಗಳು, ಹಿಂದೂ ಮಲಯಾಳಿ ಅಸೋಸಿಯೇಷನ್ ನ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.









