
ನಾಪೋಕ್ಲು ಅ.17 NEWS DESK : ಗುಜರಾತಿನ ಸೂರತ್‍ನಲ್ಲಿ ಜರುಗಿದ ನಾಲ್ಕನೇ ರಾಷ್ಟ್ರೀಯ ವೆಂಟ್ರನ್ಸ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಚಾಂಪಿಯನ್‌ಶಿಪ್- 2025 ಕ್ರೀಡಾಕೂಟದಲ್ಲಿ ಕೊಡಗಿನ ಮೂರು ಕ್ರೀಡಾಪಟುಗಳು ಭಾಗವಹಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ನಾಂಗಾಲ ಬಿಟ್ಟಂಗಾಲ ಗ್ರಾಮದ ಚೇಮೀರ ಸೀತಮ್ಮ ಪ್ರೇಮ ಬಾರದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ತಟ್ಟೆ ಎಸೆತದಲ್ಲಿ ಪ್ರಥಮ ಸ್ಥಾನ, ಜಾವಲಿನ್ ಎಸೆತದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಬಾಲೆಳೆಯ ಕೊಟ್ಟಗೇರಿ ಗ್ರಾಮದ ಅರಮನೆಮಾಡ ಮಮತಾ ಮನು ಭಾರದ ಗುಂಡು ಎಸೆತದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ ಹಾಗೂ ಜಾವಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಚೇಲಾವರ ಗ್ರಾಮದ ಪಟ್ಟಚೆರುವಂಡ ಗಗನ ಮೇದಪ್ಪ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. 110 ಹರಡಲ್ಸ್ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ, 400 ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









