
ನಾಪೋಕ್ಲು ಅ.20 NEWS DESK : ಇಂಡೋನೇಷ್ಯಾದ ನೇಗೇರಿ ಸಮರಂಗ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಜುರೈಜ್ ನೂರಾನಿ ಕುಂಜಿಲ ಪ್ರಬಂಧ ಮಂಡನೆಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಅರ್ಥಶಾಸ್ತ್ರ ಮೈಕ್ರೋ ಫೈನಾನ್ಸ್ ನಲ್ಲಿ ತನ್ನ ಸಂಶೋಧನಾ ಪ್ರಬಂಧಗಳನ್ನು ಬ್ರಿಟನ್ ನ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ನಾಲೆಜ್ ಸಿಟಿಯ ಅಂತಾರಾಷ್ಟ್ರೀಯ ಕಾಲೇಜಿನ ಪಿ.ಜಿ ವಿದ್ಯಾರ್ಥಿಯಾಗಿದ್ದು ಹಲವು ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸಿದ್ದರು. ಇವರು ಕುಂಜಿಲದ ಅಜೀಜ್ ಮಾಸ್ಟರ್ ಹಾಗೂ ಸುಮಯ್ಯ ದಂಪತಿಗಳ ಪುತ್ರ.
ವರದಿ : ದುಗ್ಗಳ ಸದಾನಂದ.








