
ನಾಪೋಕ್ಲು ಅ.24 NEWS DESK : ಕೊಣಂಜಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಗಾಗಿ ತೆರವಳುವ ರಸ್ತೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು. ಪಾರಾಣೆ ಬೇತ್ರಿ ಸಂಪರ್ಕ ರಸ್ತೆಯಿಂದ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಗಾಗಿ ಬಲಮುರಿಯ ನಾಲ್ಕು ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ದುರಸ್ತಿ ಕಾಣದೆ ತೀವ್ರ ಹದಗೆಟ್ಟಿದ್ದು, ಇತ್ತ ಯಾರು ಗಮನ ಹರಿಸದ ಗ್ರಾಮಸ್ಥರೆ ಶ್ರಮದಾನದ ಮೂಲಕ ದುರಸ್ತಿ ಕೈಗೊಂಡರು. ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಗಳಾಗಿದ್ದು ಸಂಚಾರ ಕಷ್ಟಕರವಾಗಿತ್ತು. ಗ್ರಾಮಸ್ಥರು ಸೇರಿ ರಸ್ತೆ ಬದಿಯಲ್ಲಿ ಆವರಿಸಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಿ, ಗುಂಡಿಮುಚ್ಚಿದರು. ಗ್ರಾಮಸ್ಥರಾದ ಬೈರಿಕುಂದಿರ ಅಯ್ಯಪ್ಪ, ಸೋಮಯ್ಯ, ಮನು, ವಿನು ಮಳ್ಳಡ ಚಿಣ್ಣಪ್ಪ, ಸುಬ್ಬಯ್ಯ, ತಿಮ್ಮಯ್ಯ, ಗಣೇಶ, ಪೊನ್ನಚ್ಚನ ಸೋಮಣ್ಣ, ಹರೀಶ್, ರೋಹನ್ ಇತರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ









