
ಮಡಿಕೇರಿ ಅ.24 NEWS DESK : ವಿಶ್ವ ಪೋಲಿಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ನ ವತಿಯಿಂದ ನಗರದ ಹಲವಾರು ಕಡೆಗಳಲ್ಲಿ ಪೋಲಿಯೊ ನಿಮೂ೯ಲನ ಸಂದೇಶದ ಪೋಸ್ಟರಗಳನ್ನು ಅಳವಡಿಸಲಾಯಿತು. ನಗರಸಭಾಧ್ಯಕ್ಷೆ ಕಲಾವತಿ ಈ ಅಭಿಯಾನಕ್ಕೆ ನಗರಸಭೆ ಮುಂಬದಿ ಚಾಲನೆ ನೀಡಿದರು. ಪ್ರತೀ ಮನೆಯಲ್ಲಿಯೂ ಎರಡರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳುವಂತೆ ಕಲಾವತಿ ಮನವಿ ಮಾಡಿದರು. ರೋಟರಿ ವುಡ್ಸ್ ವತಿಯಿಂದ ಸಾವ೯ಜನಿಕರಲ್ಲಿ ಜಾಗ್ರತಿ ಉಂಟು ಮಾಡುವ ಈ ವಿನೂತನ ಅಭಿಯಾನವನ್ನು ಅವರು ಶ್ಲಾಘಿಸಿದರು. ವಿಶ್ವದಾದ್ಯಂತ ಪೊಲಿಯೋ ನಿಮೂ೯ಲನೆಯಲ್ಲಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಲಕ್ಷಾಂತರ ಮಕ್ಕಳು ವಿಶೇಷಚೇತನರಾಗುವುದನ್ನು ಪೊಲಿಯೋ ನಿರೋಧಕ ಲಸಿಕೆ ಮೂಲಕ ರೋಟರಿ ತಪ್ಪಿಸಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾಹಿತಿ ನೀಡಿದರು. ಜನರಲ್ಲಿ ಜಾಗ್ರತಿ ಉಂಟು ಮಾಡುವ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ನಗರವ್ಯಾಪ್ತಿಯಲ್ಲಿ ಜಾಗೖತಿ ಸಂದೇಶದ ಪೋಸ್ಟರ್, ಬ್ಯಾನರ್ ಅಳವಡಿಸಲಾಗಿದೆ ಎಂದೂ ಕಿರಣ್ ಹೇಳಿದರು. ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ, ನಿದೇ೯ಶಕರಾದ ಕೆ. ವಸಂತ್ ಕುಮಾರ್, ಧನಂಜಯ ಶಾಸ್ತ್ರಿ,ರವಿ ಪಿ ಸೇರಿದಂತೆ ಸದಸ್ಯರು ಹಾಜರಿದ್ದರು.









