
ಮಡಿಕೇರಿ ಅ.27 NEWS DESK : ಕೊಡಗು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಫಾತಿಮಾ ಪ್ರೌಢಶಾಲೆ ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಪ್ರದೀಪ್ ಯಶ್ವಂತ್, ಮನು ಪಿ.ಡಿ ಕಿಶೋರ್, ಕುಮಾರ್ ಜೆ.ಯಂ, ಸುರೇಶ ಜೆ.ಯಂ, ಸುನೀತ್ ಟಿ.ಯಂ, ಸೃಜನ್ ಜಿ.ಅರ್, ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಇಬ್ಬರು ಬಾಲಕರಾದ ಮನೋಜ್, ರಾಕೇಶ್ ವಿಜಯಲಕ್ಷ್ಮಿ ಪ್ರೌಢ ಶಾಲಾ ತಂಡದ ಪರವಾಗಿ ವಿರಾಜಪೇಟೆ ಶೈಕ್ಷಣಿಕ ತಾಲ್ಲೂಕು ತಂಡವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದರು. ತರಬೇತುದಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಪಡಿಞರಂಡ ಪ್ರಭು ಕುಮಾರ್ ಭಾಗವಹಿಸಿದ್ದಾರೆಂದು ವಿಜಯಲಕ್ಷ್ಮಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ತಿಳಿಸಿದ್ದಾರೆ.









