
ನಾಪೋಕ್ಲು ಅ.29 NEWS DESK : ಬೆಂಗಳೂರಿನಲ್ಲಿ ಸಹಾಯಕ ಸಬ್ ಇನ್ಸ್‍ಪೆಕ್ಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಪಾಜೆಯ ಉದಯ ಕುಮಾರ್ ಹನಿಯಡ್ಕ(56) ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಲ್ಲಿ ಸಹಾಯಕ ಇನ್ಸ್ ಪೆಕ್ಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿ ಉದಯ ಹನಿಯಡ್ಕ ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಹನಿಯಡ್ಕ ಕುಟುಂಬದ ದಿವಂಗತ ಆನಂದ ಗೌಡ ಹಾಗೂ ರುಕ್ಕಿಣಿ ದಂಪತಿಗಳ ಪುತ್ರರಾಗಿದ್ದು. ಸುಮಾರು 30 ವರ್ಷದಿಂದ ಬೆಂಗಳೂರಿನಲ್ಲಿ ಸಹಾಯಕ ಸಬ್‍ಇನ್ಸ್ ಪೆಕ್ಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ಪತ್ನಿ ರುಕ್ಮಿಣಿ ಮಕ್ಕಳಾದ ಡಿಂಪಲ್, ದರ್ಶನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ನೆರವೇರಿಸಲಾಯಿತು.
ವರದಿ : ದುಗ್ಗಳ ಸದಾನಂದ.








