
ವಿರಾಜಪೇಟೆ ಅ.30 NEWS DESK : ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿ ಪಿ.ಬೆಳ್ಯಪ್ಪ ಅವರು ವಿರಾಜಪೇಟೆ ನಗರದ ಮೂರ್ನಾಡು ಜಂಕ್ಷನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಒಂದು ಬ್ಯಾಗ್ ಬಿದ್ದು ಸಿಕ್ಕಿದ್ದು ಅದರಲ್ಲಿದ್ದ ಫೋನ್ ಮತ್ತು 10 ಸಾವಿರ ಹಣವನ್ನು ಅದರ ವಾರಸುದಾರರನ್ನು ಪತ್ತೆ ಹಚ್ಚಿ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ವಾರಸುದಾರರಾದ ಮೀನುಪೇಟೆ ನಿವಾಸಿ ಮೀನಾ ಅವರು ಪೋಲಿಸ್ ಇಲಾಖೆಯ ಪ್ರಾಮಾಣಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









