
ನಾಪೋಕ್ಲು ಅ.30 NEWS DESK : ಮೂರ್ನಾಡು ಮಾರುತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಬಿ.ಸಿ.ಅನುಶಿಕ ಬೋಜಮ್ಮ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಗೋಣಿಕೊಪ್ಪ ಕಾಪ್ಸ್ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪ ಮತ್ತು ಪೆÇನ್ನಂಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಿ.ಸಿ.ಅನುಶಿಕ ಬೋಜಮ್ಮ ಎತ್ತರ ಜಿಗಿತ (High jump) ನಲ್ಲಿ ಪ್ರಥಮ ಸ್ಥಾನ ಮತ್ತು ಜಾವಲಿನ್ ಎಸೆತ (Javelin Throw) ದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ವಿದ್ಯಾ ಸಂಸ್ಥೆ ಗೆ ಕೀರ್ತಿ ತಂದಿದ್ದಾಳೆ. ಅನುಶಿಕ ಬೋಜಮ್ಮ ಮೂರ್ನಾಡಿನ ಬಡುವಂಡ ಚಂಗಪ್ಪ-ಸುಶೀಲ ಚಂಗಪ್ಪ ದಂಪತಿಯ ಪುತ್ರಿ.
ವರದಿ : ದುಗ್ಗಳ ಸದಾನಂದ.









