
ಮಡಿಕೇರಿ ನ.15 NEWS DESK : ಎ.ಎಲ್.ಜಿ ಕ್ರೆಸೆಂಟ್ ಶಾಲೆಯಲ್ಲಿ “ಯಂಗ್ ಮೈಂಡ್ಸ್ ಫುಡ್ ಫೆಸ್ಟ್-2025″ ಉತ್ಸವ ನಡೆಯಿತು. ಕೊಡಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಉತ್ಸಾಹ, ವಿವಿಧ ಹೋಟೆಲ್‍ಗಳ ಪರಿಕಲ್ಪನೆ, ವಿದ್ಯಾರ್ಥಿಗಳು ತಯಾರಿಸಿದ ರುಚಿಕರ ಖಾದ್ಯಗಳು ಹಾಗೂ ಪೋಷಕರು ಮತ್ತು ಶಿಕ್ಷಕರ ಶ್ರಮ ಅಭಿನಂದನಾರ್ಹ ಎಂದರು. ಮುಖ್ಯ ಅಥಿತಿಯಾಗಿ ಡೆಪ್ಯುಟಿ ಪ್ರಾಜೆಕ್ಟ್ ಕೋಆರ್ಡಿನೇಟರ್ ಎ.ಸೌಮ್ಯ ಪೊನ್ನಪ್ಪ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. “ಕ್ರೆಸೆಂಟ್ ಶಾಲೆಯ ಆಹಾರ ಮೇಳ ಮಕ್ಕಳ ಸೃಜನಶೀಲತೆ, ರುಚಿ, ಅರಿವು ಮತ್ತು ತಂಡಭಾವವನ್ನು ಒಟ್ಟಾಗಿ ಪ್ರದರ್ಶಿಸಿದ ರುಚಿಕರ ಉತ್ಸವವಾಗಿದೆ. ವಿದ್ಯಾರ್ಥಿಗಳ ಆತಿಥ್ಯ ಸತ್ಕಾರ ಎಲ್ಲರ ಮನ ಗೆದ್ದಿದೆ,” ಎಂದರು. ಶಾಲೆಯ ಪ್ರಾಂಶುಪಾಲರಾದ ಜೋಯಿಸಿ ಮಾತನಾಡಿ ಪೋಷಕರ ಸಹಕಾರ ಮತ್ತು ಮಕ್ಕಳ ಉತ್ಸಾಹ ಈ ಆಹಾರ ಉತ್ಸವವನ್ನು ವಿಶೇಷವಾಗಿ ಮಧುರವಾಗಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಕಾರಣಕರ್ತರಾದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದಕ್ಕೆ ಅಭಿನಂದನೆಗಳನ್ನು ಅರ್ಪಿಸಿದರು’. ವಿದ್ಯಾರ್ಥಿಗಳು ಹಬ್ಬಿಬ್ಬಾಸ್ ತಟ್ಟುಕಡ, ಜೆಸ್ಟೋರಾ ಮಿಲ್ಸ್, ಫೈವು ಸ್ಟಾರ್ಸ್, ಉಸ್ತಾದ್ ಹೊಟೇಲ್, ಕ್ರೇವ್ ಸ್ಟೇಷನ್, ಡಿಲಿಶಿಯಸ್ ವಿಲ್ಲ, ಬಿಗ್ ಬೈಟ್, ದಿ ಹಿಡನ್ ಟೇಸ್ಟ್, ಪೈರೇಟ್ ಕಿಚನ್, ಗ್ಯದರ್ ಎಂಡ್ ಗ್ರೇಸ್, ಅಡಿಪೋಲಿ ಕಿಚನ್, ಈಟ್ ರಿಪೀಟ್ ರೆಸ್ಟೋರೆಂಟ್, ದಿ ರಾಯಲ್ ಎಂಬರ್, ಸ್ಮೋಕಿ ಫುಡ್ ರೆಸ್ಟೋರೆಂಟ್ ಮುಂತಾದ ಹೆಸರಿನ ಮಿನಿ ಹೋಟೆಲ್‍ಗಳ ಮೂಲಕ ಗ್ರಾಹಕರಿಗೆ ರುಚಿಕರ ಖಾದ್ಯಗಳನ್ನು ಬಡಿಸಿದರು. ಈ ಹೋಟೆಲ್‍ಗಳಲ್ಲಿ ಮಂದಿ ಬಿರಿಯಾನಿ, ಪರೋಟ, ಪಲಾವ್, ಜಾಮೂನ್, ಪುಡ್ಡಿಂಗ್, ಬಾಳೆಬಜ್ಜಿ, ಗೋಳಿ ಬಜ್ಜಿ, ವಡೆ, ಫ್ರೆಶ್ ಜ್ಯೂಸ್, ಪಾಯಸ, ಕಬಾಬ್, ಚಿಕನ್ ಲಾಲಿಪಾಪ್, ಪಾನಿ ಪುರಿ, ಮಸಾಲೆ ಪುರಿ, ಕೇಕ್ ಮೊದಲಾದ ವೈವಿಧ್ಯಮಯ ಆಹಾರಗಳನ್ನು ಮನೋಜ್ಞವಾಗಿ ಸವಿಯಲು ಅವಕಾಶ ಕಲ್ಪಿಸಲಾಯಿತು.









