
ಮಡಿಕೇರಿ ನ.15 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನ.23ರಿಂದ 29ರವರೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ ಡೈಮಂಡ್ ಜ್ಯೂಬಿಲಿ ಜಂಬೂರಿ ಹಾಗೂ 19ನೇ ರಾಷ್ಟ್ರೀಯ ಜಂಬೂರಿಗೆ ನಾಪೋಕ್ಲುವಿನ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ನಾಪೋಕ್ಲುವಿನ ಅಂಕೂರ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಮಹೇಶ್ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಸಂಪಾಜೆಯ ಅಧ್ಯಕ್ಷ ಧನಂಜಯ ಎಂ. ಹಾಗೂ ಕಾರ್ಯದರ್ಶಿ ಉಷಾರಾಣಿ ಕೆ.ಬಿ ಅವರು ಅಭಿನಂದಿಸಿದರು.
ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಅಂಕೂರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರತ್ನ ಚರ್ಮಣ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









