
ಮಡಿಕೇರಿ ನ.15 NEWS DESK : ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ಲಾಂಗ್ ಜಂಪ್ ವಿಭಾಗದಲ್ಲಿ ಕೀರ್ತನ ಹೆಚ್.ಆರ್. ದ್ವಿತೀಯ, ಬಾಲಕರ ವಿಭಾಗದ ಲಾಂಗ್ ಜಂಪ್ ನಲ್ಲಿ ಆಶಿಕ್ ಸುನಿಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರೌಢಶಾಲೆ ವಿಭಾಗದ ಬಾಲಕಿಯರ 3000 ಮೀಟರ್ ಸ್ಪರ್ಧೆಯಲ್ಲಿ ಜಿ.ಎಂ.ಧನ್ಯ ತೃತಿಯ, ತ್ರಿಪಲ್ ಜಂಪ್ ನಲ್ಲಿ ಪವನ್ ಪೊನ್ನಣ್ಣ ಪ್ರಥಮ ಸ್ಥಾನ ಮತ್ತು ಹುರ್ಡಲ್ ನಲ್ಲಿ ತೃತಿಯ ಸ್ಥಾನ, ಧ್ಯಾನ್.ಡಿ.ಈ. 110 ಮೀಟರ್ ಹುರ್ಡಲ್ ನಲ್ಲಿ ಪ್ರಥಮ ಮತ್ತು 1500 ಮೀಟರ್ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್ ಸಾಗರ್ ಸಂತೋಷ ವ್ಯಕ್ತಪಡಿಸಿದರು.









