


ಮಡಿಕೇರಿ ನ.19 NEWS DESK : ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಅತ್ಯಧಿಕ ಮತಗಳನ್ನು ಗಳಿಸಿ ಸಂಘದ ಮಾಜಿ ಅಧ್ಯಕ್ಷ ಸಿ.ವಿ.ನಾಗೇಶ್ ಅವರ ನೇತೃತ್ವದ 9 ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾನದಿಂದ ಸಿ.ವಿ.ನಾಗೇಶ್, ಎ.ಜೇಕಬ್, ಬಿ.ಹೆಚ್.ಪ್ರದೀಪ್ ಕುಮಾರ್, ಮಹಿಳಾ ಮೀಸಲು ಸ್ಥಾನದಿಂದ ಪಿ.ಎನ್.ಅಶ್ವಿನಿ, ಲತಾಮಣಿ ಆರ್.ಸಿ. ಹಿಂದುಳಿದ ಪ್ರವರ್ಗ “ಎ” ಸ್ಥಾನದಿಂದ ಜಿ.ಸಿ.ಜಗದೀಶ್, ಹಿಂದುಳಿದ ಪ್ರವರ್ಗ “ಬಿ” ಸ್ಥಾನದಿಂದ ಬಿ.ಸಿ.ಜಾನಕಿ ಹಾಗೂ ಸದಸ್ಯ ಸಹಕಾರ ಸಂಘದಿಂದ ಆಶಾ ಚಿಣ್ಣಪ್ಪ, ಎಸ್.ವಿ.ಲೋಕಪ್ರಾಕಾಶ್ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ರಶ್ಮಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ 5 ವರ್ಷಗಳ ಕಾಲ ಅಧ್ಯಕ್ಷರಾಗಿ ಸಿ.ವಿ.ನಾಗೇಶ್ ಅವರು ಕಾರ್ಯನಿರ್ವಹಿಸಿದ್ದರು.










