
ವಿರಾಜಪೇಟೆ ನ.21 NEWS DESK : ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ ತಾಲೂಕು ಘಟಕ ಹಾಗೂ ಸಂತ ಅನ್ನಮ್ಮ ದೇವಾಲಯದ ಸಹಯೋಗದೊಂದಿಗೆ ಕ್ರಿಸ್ಮಸ್ ಗಾನ ತರಂಗ-2025 ಕ್ರಿಸ್ಮಸ್ ಗಾಯನ ಸ್ಪರ್ಧೆಯನ್ನು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಆಂಟೋನಿ ರಾಬಿನ್ ಹೇಳಿದರು. ವಿರಾಜಪೇಟೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.7 ರಂದು ಬೆಳಿಗ್ಗೆ 10 ಗಂಟೆಗೆ ಸ್ಫರ್ದೆ ಪ್ರಾರಂಭವಾಗಲಿದೆ. ಗಾಯನ ಸ್ಫರ್ಧೇಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 20,000 ಹಾಗೂ ಟ್ರೋಫಿ, ದ್ವಿತೀಯ 15,000 ಹಾಗೂ ಟ್ರೋಫಿ, ತೃತೀಯ 10000 ಹಾಗೂ ಟ್ರೋಫಿ ನೀಡಲಾಗುತ್ತದೆ. ಚಿತ್ರಕಲಾ ಸ್ಪರ್ಧೇಯಲ್ಲಿ ವಿಜೇತ ತಂಡಕ್ಕೆ ಕ್ರಮವಾಗಿ 3000,2000,1000 ರೂ ಹಾಗೂ ಟ್ರೋಫಿ ನೀಡಲಾಗುತ್ತದೆ. ನೋಂದಾವಣೆಗೆ ಡಿ.5 ಕೊನೆಯ ದಿನ ಎಂದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ಮಾತನಾಡಿ,ಪ್ರತಿ ತಂಡಕ್ಕೆ ನೋಂದಣಿ ಶುಲ್ಕ ರೂ 500 ಇದ್ದು, ಒಂದು ಧರ್ಮ ಕೇಂದ್ರದಿಂದ ಹಾಗೂ ಒಂದು ವಿದ್ಯಾ ಕೇಂದ್ರದಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದೆ. ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಗಾಯನ ಸ್ಪರ್ಧೆಗಳಲ್ಲಿ ಕನಿಷ್ಠ 5 ಸದಸ್ಯರು ಗರಿಷ್ಠ 20 ಸದಸ್ಯರು ಇರಬಹುದು ತಂಡದಲ್ಲಿ ಒಬ್ಬರೇ ವ್ಯವಸ್ಥಾಪಕರು ಇರಬೇಕು ಒಂದು ಕೀಬೋರ್ಡ್ ಹಾಗೂ ಒಂದು ಗಿಟಾರ್ ವಾದ್ಯಗಳಿಗೆ ಅವಕಾಶವಿದೆ ಟ್ರ್ಯಾಕ್ ಮತ್ತು ಕರೋಕೆ ಬಳಸುವಂತಿಲ್ಲ. ಸ್ಪಧೆರ್üಯಲ್ಲಿ ಕ್ಯಾಥೋಲಿಕ್ ಕ್ರೈಸ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾ ಸಂಘಟನಾ ಕಾರ್ಯದರ್ಶೀ ಮರ್ವಿನ್ ಲೋಬೋ ಮಾತನಾಡಿ ಗಾಯನ ಸ್ಫರ್ಧೆಯಲ್ಲಿ ಹಾಡುಗಳು ಕ್ರಿಸ್ಮಸ್‍ಗೆ ಸಂಬಂಧಿಸಿದ ಕನ್ನಡ ಭಾಷೆಯದಾಗಿರಬೇಕು. ಸ್ಪರ್ಧೆ 30 ಅಂಕಗಳಿಗೆ ಸೀಮಿತವಾಗಿರುತ್ತದೆ. ಸಾಹಿತ್ಯ ಸಂಗೀತ ಹಾಗೂ ಅಭಿನಯ ಪ್ರದರ್ಶನದ ಆಧಾರದ ಮೇಲೆ ತೀರ್ಪು ನೀಡಲಾಗುವುದು. ಕಾರ್ಯಕ್ರಮ 7 ರಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದ್ದು, ಎಲ್ಲಾ ತಂಡವು 30 ನಿಮಿಷಗಳ ಮುಂಚಿತವಾಗಿ ಹಾಜರಿರಬೇಕು ಎಂದರು. ತಾಲ್ಲೂಕು ಉಪಾಧ್ಯಕ್ಷ ಅಂಥೋನಿ ಜೋಸೆಫ್ ಮಾತನಾಡಿ, ಪ್ರತಿ ತಂಡಕ್ಕೆ ಹಾಡಲು 10 ನಿಮಿಷಗಳ ಅವಕಾಶ ಮಾತ್ರ ಕಲ್ಪಿಸಲಾಗಿದೆ. ಚಿತ್ರಕಲಾ ಸ್ಪರ್ಧೆಗೆ ಯಾವುದೇ ನೊಂದಣಿ ಶುಲ್ಕ ಇರುವುದಿಲ್ಲ. ರೋಮನ್ ಕ್ಯಾಥೋಲಿಕ್ ಮಕ್ಕಳಿಗೆ ಮಾತ್ರ ಅವಕಾಶ. 6 ವರ್ಷದೊಳಗಿನ ವಿಭಾಗ ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ಸ್ಟಾರ್, 6-10 ವರ್ಷದ ವರೆಗಿನ ವಿಭಾಗ ಸಾಂತಾಕ್ಲಾಸ್ ಚಿತ್ರ ವಿಷಯವಾಗಿರುತ್ತದೆ. ಚಿತ್ರಕಲಾ ಸ್ಪರ್ಧೆಗೆ ಡ್ರಾಯಿಂಗ್ ಹಳೆ ಕ್ರೇಯಾನ್ ಮತ್ತು ಪೆನ್ಸಿಲ್ ನೀಡಲಾಗುವುದು ಎಂದರು. ಕಾರ್ಯದರ್ಶಿ ಸ್ಟಾಲಿನ್ ಮಾತನಾಡಿ ಸ್ಪರ್ಧಿಗಳು ತಮ್ಮ ಸ್ವಂತ ಧರ್ಮ ಕೇಂದ್ರ ಅಥವಾ ಶಿಕ್ಷಣ ಸಂಸ್ಥೆಗೆ ಮಾತ್ರವೇ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಒಂದಕ್ಕಿಂತ ಹೆಚ್ಚು ತಂಡದಲ್ಲಿ ನೋಂದಾಯಿಸಿಕೊಳ್ಳುವುದು ನಿಷೇಧಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ತಂಡವನ್ನು ಅಮಾನತುಗೊಳಿಸಿ ಸ್ಪರ್ಧೆಯಿಂದ ಹೊರಹಾಕಲಾಗುತ್ತದೆ. ಹೆಚ್ಚಿನ ವಿವರಗಳಿಗೆ 991278304, 9880202025, 7676854674 ಸಂಖ್ಯೆಗೆ ಸಂರ್ಪಕಿಸುವಂತೆ ಕೋರಲಾಗಿದೆ.










