Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಚ್1-ಎನ್1 : ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ*
  • *ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*
  • *ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*
  • ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ
  • *ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*
  • *ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*
  • *ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*
  • *ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*
  • *ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವ : ಜ.2 ರಿಂದ ವಾಸವಿ ಸಪ್ತಾಹ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವ : ಜ.2 ರಿಂದ ವಾಸವಿ ಸಪ್ತಾಹ*

ಡಿಸೆಂಬರ್ 27, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಡಿ.27 NEWS DESK : ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವದ ಅಂಗವಾಗಿ ‘ವಾಸವಿ ಸಪ್ತಾಹ-2026’ ಜ.2 ರಿಂದ 8ರವರೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿ, 1947ರಲ್ಲಿ ಶ್ರೀ ಮೈಲಾರ ಶೆಟ್ಟರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಾನಪನೆಗೊಂಡ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯ 2014ರಲ್ಲಿ ನಡೆಯಿತು. ಪುನರ್ ಪ್ರತಿಷ್ಠಾಪನೆಗೊಂಡ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ನಡೆಯಬೇಕಾದ ಪೂಜಾ ಕಾರ್ಯಗಳು, ಕುಂಬಾಭಿಷೇಕ, ಬ್ರಹ್ಮ ಕಳಶೋತ್ಸವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜ.29 ರಿಂದ 2ರವರೆಗೆ ಜರುಗಲಿದೆಯೆಂದು ತಿಳಿಸಿದರು. :: ವಾಸವಿ ಸಪ್ತಾಹ :: ಬ್ರಹ್ಮ ಕಳಶೋತ್ಸವದ ಹಿನ್ನೆಲೆಯಲ್ಲಿ ‘ವಾಸವಿ ಸಪ್ತಾಹ’ವನ್ನು ಕುಶಾಲನಗರದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಸಪ್ತಾಹದ ಆರಂಭಿಕ ದಿನವಾದ ಜ.2 ರಂದು ಬೆಳಿಗ್ಗೆ ‘ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ’ಕ್ಕಾಗಿ ವಾಕಥಾನ್ ಮತ್ತು ಸೈಕಥಾನ್‍ಗಳನ್ನು ಆಯೋಜಿಸಲಾಗಿದೆ. ಇದು ಬೆಳಗ್ಗೆ 7 ಗಂಟೆಗೆ ಹೋಟೆಲ್ ಅತಿಥಿ ಕಂಫಟ್ರ್ಸ್ ಮುಂಭಾಗದಿಂದ ಆರಂಭಗೊಳ್ಳಲಿದೆ. ಅದೇ ದಿನ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹೋಟೆಲ್ ಕನ್ನಿಕಾ  ಇಂಟರ್‌ನ್ಯಾಷನಲ್ ನ ಕನ್ನಿಕಾ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ನಡೆಯಲಿದೆಯೆಂದು ಮಾಹಿತಿ ನೀಡಿದರು. ಜ.3 ರಂದು ಆರ್ಯವೈಶ್ಯ ಮಹಿಳಾ ಮಂಡಳಿಯ ಸಹಕಾರದೊಂದಿಗೆ ಬೆಳಿಗ್ಗೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ, ಮಧ್ಯಾಹ್ನ ಕೂಡಿಗೆಯ ಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಅದೇ ದಿನ ಸಂಜೆ ಕಾವೇರಿ ಮಹಾ ಆರತಿ ಬಳಗದ ಸಹಯೋಗದೊಂದಿಗೆ ಕಾವೇರಿಗೆ 181ನೇ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವರ್ಷದ ಅಂಗವಾಗಿ ಮಾತರಂ ಗೀತ ಗಾಯನ ಮತ್ತು ಭಜನೆ ನಡೆಯಲಿದೆಯೆಂದು ವಿವರಗಳನ್ನಿತ್ತರು. ಜ.4 ರಂದು ರಾಜ್ಯಮಟ್ಟದ ವಾಸವಿ ಬ್ಯಾಡ್ಮಿಂಟನ್ ಪಂದ್ಯಾವಳಿ ಕುಶಾಲನಗರದ ಜಂಪ್ ಸ್ಮ್ಯಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. :: 114 ವೃಕ್ಷಾರೋಪಣ :: ಜ.5 ರಂದು 114 ವರ್ಷಗಳ ಕಾಲ ನಮ್ಮೊಂದಿಗಿದ್ದ ಸಾಲುಮರದ ತಿಮ್ಮಕ್ಕನವರ ಸ್ಮರಣೆಯಲ್ಲಿ 114 ಗಿಡಗಳನ್ನು ನೆಡುವ ಮೂಲಕ, ‘ಲಕ್ಷ ವೃಕ್ಷ’ ಗಿಡ ನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದೆಂದರು. ಜ.6 ರಂದು ವಾಸವಿ ಯುವತಿಯರ ಸಂಘದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಮತ್ತು ಸ್ವಯಂ ರಕ್ಷಣೆ ಜಾಗೃತಿ ಮೂಡಿಸುವ ಶಿಬಿರ ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪಪೂ ಕಾಲೇಜಿನಲ್ಲಿ ನಡೆಯಲಿದೆಯೆಂದು ಮಾಹಿತಿ ನೀಡಿದರು. ಜ.7 ರಂದು ವಾಸವಿ ಕ್ಲಬ್‍ನ ಸಹಯೋಗದೊಂದಿಗೆ ಯುವ ಸಮೂಹಕ್ಕೆ ಉಪಯುಕ್ತವಾದ ಎಂಎಸ್‍ಎಂಇ ಕಾರ್ಯಾಗಾರ ನಗರದ ಪಾಳ್ಯಂ ಎಮರಾಲ್ಡ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.ಜ.8 ರಂದು ಸದೃಢ ಭಾರತಕ್ಕಾಗಿ ವಿದ್ಯಾರ್ಥಿಗಳ ಪಾತ್ರ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಮತ್ತು ಹಳ್ಳಿ ಜೀವನ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ಪಾಳ್ಯಂ ಎಮರಾಲ್ಡ್‍ನಲ್ಲಿ ಹಮ್ಮಿಕೊಳ್ಳಲಾಗಿದೆಯೆಂದರು. ಗೋಷ್ಠಿಯಲ್ಲಿ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಕೆ.ಪ್ರವೀಣ್, ಖಜಾಂಚಿ ಪಿ. ಎಸ್.ಪ್ರಶಾಂತ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಅಮೃತ್ ರಾಜ್, ವಾಸವಿ ಸಪ್ತಾಹ ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಎ.ಎಸ್.ಕುಮಾರ್ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಚ್1-ಎನ್1 : ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ*

ಆಗಷ್ಟ್ 29, 2026

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಆ.29 NEWS DESK : ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟು, ವ್ಯಾಕರಣದ ಶಿಸ್ತನ್ನು ರೂಢಿಸಿದವರು ಭಾಷಾ ವಿಜ್ಞಾನಿ ಡಾ.…

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ

ಆಗಷ್ಟ್ 29, 2026

*ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*

ಆಗಷ್ಟ್ 29, 2026

*ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*

ಆಗಷ್ಟ್ 29, 2026

*ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 29, 2026

*ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*

ಆಗಷ್ಟ್ 29, 2026

*ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*

ಆಗಷ್ಟ್ 29, 2026

*ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*

ಆಗಷ್ಟ್ 29, 2026

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*

ಆಗಷ್ಟ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.