Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*
  • *ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*
  • *ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*
  • *ಕ.ಸಾ.ಪ ದತ್ತಿ ಕಾರ್ಯಕ್ರಮ : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ : ಮಧೋಶ್ ಪೂವಯ್ಯ*
  • *ಪಂಜರಪೇಟೆ ಕೊಡವ ಕೇರಿಯಿಂದ ವೃದ್ಧಾಶ್ರಮಕ್ಕೆ ಭೇಟಿ*
  • *ಕೊಡವ ಕೂಟಾಳಿಯಡ ಕೂಟದಿಂದ ಸಾಧಕ ಮಹಿಳೆಯರಿಗೆ ಸನ್ಮಾನ*
  • *ಆಫ್ ರೋಡ್ ಚಾಲೆಂಜರ್ಸ್ ಸ್ಪರ್ಧೆ : ಮಡಿಕೇರಿಯ ಜತೀನ್ ಕರ್ಕೆರ ಹಾಗೂ ಹಾರ್ಧಿಕ್ ಕರ್ಕೆರ ದ್ವಿತೀಯ*
  • *ಸೋಮವಾರಪೇಟೆಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ*
  • *ಕಾಡಾನೆ ದಾಳಿಗೆ ಗ್ರಾ.ಪಂ ಮಾಜಿ ಸದಸ್ಯೆ ಬಲಿ*
  • *ಅನಾರೋಗ್ಯದಿಂದ ಅಭಿ ಸಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನೂತನ ವರ್ಷದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಗುರಿ : ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನೂತನ ವರ್ಷದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಗುರಿ : ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದನೆ*

ಜನವರಿ 1, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜ.1 : ಮೂಲನಿವಾಸಿ ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಬುಡಕಟ್ಟು ಜನಾಂಗಕ್ಕೆ ವಿಶ್ವರಾಷ್ಟ್ರ ಸಂಸ್ಥೆಯ ಮಾನ್ಯತೆಯನ್ನು ಒಳಗೊಂಡAತೆ ಹತ್ತು ಗೌರವಾನ್ವಿತ ಗುರಿಗಳು ಮತ್ತು ಸಂವಿಧಾನಿಕ ಆಶಯಗಳನ್ನು ಈಡೇರಿಸಲು ಸುದೀರ್ಘ ಪಯಣವನ್ನು ಮುಂದುವರೆಸಿರುವ ಕೊಡವ ನ್ಯಾಷನಲ್ ಸಂಘಟನೆ ನೂತನ ವರ್ಷದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆಂತರಿಕ ರಾಜಕೀಯ ಸ್ವ-ನಿರ್ಣಯ ಮತ್ತು ಸ್ವ-ಆಡಳಿತದ ಹಕ್ಕು ಸೇರಿದಂತೆ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ತನ್ನ ಗುರಿಯನ್ನು ಪ್ರತಿಪಾದಿಸಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಿಂದ ಎಲ್ಲರಿಗೂ ಜಾಗತಿಕ ಹೊಸ ವರ್ಷದ ಪ್ರಯುಕ್ತ ಸಿಎನ್‌ಸಿ ಸರ್ವರಿಗೂ ಸಮೃದ್ಧ, ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಹಾರೈಸುವುದರೊಂದಿಗೆ 2026 ರ ಸದಾಶಯವನ್ನು ಕೋರುತ್ತದೆ. ಕೊಡವ ಪಂಚಾಂಗದ ಪ್ರಕಾರ ಆದಿವಾಸಿ ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಏಪ್ರಿಲ್ 14 ರಂದು “ಎಡ್ಮ್ಯಾರ್ ಒಂದ್” ಎಂಬ ಹೊಸ ವರ್ಷವನ್ನು ಆಚರಿಸುತ್ತದೆ. ಸಿಎನ್‌ಸಿ ಇದರ ಪ್ರಮುಖ ರೂವಾರಿಯಾಗಿದೆ. ಆದರೆ ಜನವರಿ 1 ರಂದು ಜಾಗತಿಕ ಸಮುದಾಯದ ಹೊಸ ವರ್ಷ ಆಚರಣೆಯನ್ನು ಕೂಡ ಸಂಭ್ರಮಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ. ಕೊಡವ ಹೆಗ್ಗುರುತನ್ನು ಉಳಿಸಿಕೊಳ್ಳಲು ಬಲವಾಗಿ ಪ್ರತಿಪಾದಿಸುವಾಗ, ಅದು ಮುಕ್ತತೆ ಮತ್ತು ವಿಶ್ವದಾದ್ಯಂತ ವೈವಿಧ್ಯಮಯ ಸಾಂಸ್ಕೃತಿಕ ಸಂಪ್ರದಾಯಗಳ ಆಚರಣೆಯನ್ನು ಉತ್ತೇಜಿಸುತ್ತದೆ. ಭಾರತ ರಾಷ್ಟ್ರೀಯ ದೃಷ್ಟಿಕೋನ ಮತ್ತು ಜಾಗತಿಕ ದರ್ಶನದೊಂದಿಗೆ ಅದರ ಪ್ರಾದೇಶಿಕ ಆದಿಮಸಂಜಾತ ಕೊಡವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಎಲ್ಲರಿಗೂ ಜಾಗತಿಕ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತದೆ. ಜನವರಿ 1 ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಹೊಸ ವರ್ಷ. ವಿಶ್ವರಾಷ್ಟ್ರ ಸಂಸ್ಥೆ ಮತ್ತು ಅದರ 193 ಮಾನ್ಯತೆ ಪಡೆದ ದೇಶಗಳಿಂದ ಹಿಡಿದು ನಮ್ಮ ಭಾರತೀಯ ರಾಜ್ಯ ಸರ್ಕಾರಗಳವರೆಗೆ, ಜನವರಿ 1 ಅನ್ನು ಅಧಿಕೃತವಾಗಿ ಜಾಗತಿಕ ಹೊಸ ವರ್ಷವೆಂದು ಸ್ವೀಕರಿಸಲಾಗಿದೆ. ಭಾರತವು ಸಹ ಇದನ್ನು ನಿರ್ಬಂಧಿತ ರಜಾದಿನವೆಂದು ಘೋಷಿಸುವ ಮೂಲಕ ಮತ್ತು ಅದಕ್ಕೆ ಅನುಗುಣವಾಗಿ ಆಚರಿಸುವ ಮೂಲಕ ಜಾಗತಿಕ ಹೊಸ ವರ್ಷದ ದಿನವೆಂದು ಸ್ವೀಕರಿಸಿದೆ. ಸೌರಮಾನ ಕ್ಯಾಲೆಂಡರ್ ಅಥವಾ ಚಂದ್ರಮಾನ ಕ್ಯಾಲೆಂಡರ್ ಅನ್ನು ಅನುಸರಿಸಿ ಪ್ರಪಂಚದಾದ್ಯಂತ ಹಲವಾರು ಧಾರ್ಮಿಕ-ನಂಬಿಕೆಗಳು ಮತ್ತು ಜನಾಂಗೀಯ-ರಾಷ್ಟ್ರೀಯ ಗುಂಪುಗಳು ತಮ್ಮದೇ ಆದ ಹೊಸ ವರ್ಷವನ್ನು ಆಚರಿಸುತ್ತವೆ. ನವರೂಜ್‌ನಿಂದ ಹಿಡಿದು ನವರೋಜ್ ತನಕ, ರೋಶ್ ಹಶಾನಾ ಹಿಡಿದು ಹಿಜ್ರಿಯ ವರೆಗೆ, ಪರ್ಯುಷಣ ಪರ್ವದಿಂದ ಮಹಾಯಾನದ ವರೆಗೆ, ಬೈಸಾಖಿಯಿಂದ ಹಿಡಿದು ಎಡ್ಮ್ಯಾರ್ ವರೆಗೆ, ಕಾರ್ಸೇನಾ ಸೋರ್‌ನಿಂದ ಹಿಡಿದು ಲೋಸರ್ ತನಕ, ಬಿಹುನಿಂದ ಯುಗಾದಿ ತನಕ, ಪೊಂಗಲ್ ನಿಂದ ಹಿಡಿದು ಬಿಸು ವರೆಗೆ ಆಚರಿಸುವ ವೈವಿಧ್ಯ ಜನರು ಯಾವುದೇ ವಿರೋಧವಿಲ್ಲದೆ, ಎಲ್ಲರೂ ಜನವರಿ 1 ರಂದು “ಗ್ರೆಗೋರಿಯನ್ ಕ್ಯಾಲೆಂಡರ್”ನ ಹೊಸ ವರ್ಷವನ್ನು ಸ್ವೀಕರಿಸಿದ್ದಾರೆ. ಕೊಡವ ಹೊಸ ವರ್ಷವು ಏಪ್ರಿಲ್ 14 ರಂದು ಪ್ರಾರಂಭವಾಗುತ್ತದೆ, ಇದನ್ನು ಸೌರಮಾನ ಕ್ಯಾಲೆಂಡರ್ ಪ್ರಕಾರ, 31 ವರ್ಷಗಳ ಹಿಂದೆ ಸಿಎನ್‌ಸಿ ಪುನರುಜ್ಜೀವನಗೊಳಿಸಿತು ಮತ್ತು ಪ್ರತಿಧ್ವನಿಸಿತು, ಇದನ್ನು ಸಾರ್ವಜನಿಕವಾಗಿ ಮತ್ತು ವಾರ್ಷಿಕವಾಗಿ ಸಾಂಸ್ಕೃತಿಕ ಉತ್ಸಾಹದಿಂದ ಆಚರಿಸುವ ಮೂಲಕ ಪ್ರತಿವರ್ಷ ಕೊಡವರ ಅಪೂರ್ವ ಜನಪದ, ಪರಂಪರೆ, ಆ್ಯನಿಮಿಸ್ಟಿಕ್ ನಂಬಿಕೆಯ ಜೀವನ ಕ್ರಮ, ಕೊಡವರದೇ ಪಂಚಾಂಗ ಮತ್ತು ಅವರದ್ದೆ ಜನ್ಮ ಭೂಮಿಯನ್ನು ಸಾಕ್ಷಿಕರಿಸಲು ಎಡಮ್ಯಾರ್ ಸೇರಿದಂತೆ ಕೊಡವರ ಎಲ್ಲಾ ಶಾಸ್ತಿçÃಯ ಮತ್ತು ಜನಪದೀಯ ಹಬ್ಬಗಳನ್ನು ಸಿಎನ್‌ಸಿ ಸಾರ್ವತ್ರಿಕವಾಗಿ ಸಾಕ್ಷಿಕರಿಸುತ್ತಾ ಬಂದಿದೆ. ಆದಾಗ್ಯೂ, ನಾವು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ನಿರ್ಲಕ್ಷಿಸಬೇಕು ಅಥವಾ ತಾತ್ಸರದಿಂದ ನೋಡಬೇಕು ಎಂದು ಅರ್ಥವಲ್ಲ. ನಾವು ಸಂಕುಚಿತರಾಗಬಾರದು. ನಾವು ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸೋಣ, ಗ್ರೆಗೋರಿಯನ್ ಕ್ಯಾಲೆಂಡರ್‌ನ ಹೊಸ ವರ್ಷದ ಮುನ್ನಾದಿನ ಮತ್ತು ದಿನದ ಬಗ್ಗೆಯೂ ಸಂತೋಷಪಡೋಣ ಮತ್ತು ಕೊಡವ ಹೊಸ ವರ್ಷದ ದಿನ ಎಡ್ಮ್ಯಾರ್ ಒಂದನ್ನು ಆಚರಿಸುವಲ್ಲಿ ನಾವು ಅಷ್ಟೇ ಸಂತೋಷಪಡೋಣ ಮತ್ತು ಸಂಭ್ರಮಿಸೋಣ. ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ನಂಬಿಕೆಯ ಕೊಡವ ಬುಡಕಟ್ಟು ಜನಾಂಗದ ಪರವಾಗಿ, ಸಿಎನ್‌ಸಿ ವಿಶ್ವದಲ್ಲಿರುವ ಎಲ್ಲರಿಗೂ ಸಂತೋಷದಾಯಕ ಮತ್ತು ಸಮೃದ್ಧವಾದ ಹೊಸ ವರ್ಷವನ್ನು ಹಾರೈಸುತ್ತದೆ. 2026 ರ ಹೊಸ ವರ್ಷವು ಜಗತ್ತಿಗೆ ಶಾಂತಿಯನ್ನು ತರಲಿ. ಎಲ್ಲಾ ರೀತಿಯ ಪೂರ್ವಾಗ್ರಹಗಳಿಂದ ವಿಮೋಚನೆಗಾಗಿ ನಾವು ಪ್ರಾರ್ಥಿಸೋಣ ಮತ್ತು ಆಶಿಸೋಣ. 2026 ರ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ತರುತ್ತದೆ ಎಂಬುವುದು ನಮ್ಮ ಭರವಸೆಯಾಗಿದೆ. ಇದೇ ಸಂದರ್ಭ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಮತ್ತು ಸ್ವ-ಆಡಳಿತ ಮತ್ತು ಮೂಲನಿವಾಸಿ ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಬುಡಕಟ್ಟು ಜನಾಂಗಕ್ಕೆ ವಿಶ್ವರಾಷ್ಟ್ರ ಸಂಸ್ಥೆಯ ಮಾನ್ಯತೆಯಂತಹ ಹತ್ತು ಸಾಂವಿಧಾನಿಕ ಆಕಾಂಕ್ಷೆಗಳನ್ನು ಸಾಧಿಸುವ ನಮ್ಮ ಬಹುಕಾಲದ ಕನಸು ನನಸಾಗಲಿದೆ ಎನ್ನುವ ವಿಶ್ವಾಸವನ್ನು ಎನ್.ಯು.ನಾಚಪ್ಪ ವ್ಯಕ್ತಪಡಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026

*ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.9 NEWS DESK : ನಗರಸಭೆಯ 2026-27ನೇ ಸಾಲಿನ ಆಯವ್ಯಯ ಮಂಜೂರಾತಿಗೆ ಮಾರ್ಚ್, 11 ರಂದು ಬೆಳಗ್ಗೆ 11.30…

*ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*

ಮಾರ್ಚ್ 9, 2026

*ಕ.ಸಾ.ಪ ದತ್ತಿ ಕಾರ್ಯಕ್ರಮ : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ : ಮಧೋಶ್ ಪೂವಯ್ಯ*

ಮಾರ್ಚ್ 9, 2026

*ಪಂಜರಪೇಟೆ ಕೊಡವ ಕೇರಿಯಿಂದ ವೃದ್ಧಾಶ್ರಮಕ್ಕೆ ಭೇಟಿ*

ಮಾರ್ಚ್ 9, 2026

*ಕೊಡವ ಕೂಟಾಳಿಯಡ ಕೂಟದಿಂದ ಸಾಧಕ ಮಹಿಳೆಯರಿಗೆ ಸನ್ಮಾನ*

ಮಾರ್ಚ್ 9, 2026

*ಆಫ್ ರೋಡ್ ಚಾಲೆಂಜರ್ಸ್ ಸ್ಪರ್ಧೆ : ಮಡಿಕೇರಿಯ ಜತೀನ್ ಕರ್ಕೆರ ಹಾಗೂ ಹಾರ್ಧಿಕ್ ಕರ್ಕೆರ ದ್ವಿತೀಯ*

ಮಾರ್ಚ್ 9, 2026

*ಸೋಮವಾರಪೇಟೆಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ*

ಮಾರ್ಚ್ 9, 2026

*ಕಾಡಾನೆ ದಾಳಿಗೆ ಗ್ರಾ.ಪಂ ಮಾಜಿ ಸದಸ್ಯೆ ಬಲಿ*

ಮಾರ್ಚ್ 9, 2026

*ಅನಾರೋಗ್ಯದಿಂದ ಅಭಿ ಸಾವು*

ಮಾರ್ಚ್ 9, 2026

*ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ ವಿಫಲ : ಕೂಡಲೇ ಕೊಡಗಿಗೆ ಅರಣ್ಯ ಸಚಿವರು ಭೇಟಿ ನೀಡಲಿ : ಎಡಿಕೇರಿ ಪ್ರಸನ್ನ ಒತ್ತಾಯ*

ಮಾರ್ಚ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.