
ಮಡಿಕೇರಿ ಜ.3 NEWS DESK : ಹಾಕತ್ತೂರು ತೊಂಭತ್ತುಮನೆ ಶ್ರೀ ವಿನಾಯಕ ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಪಿ.ಈ.ದಿವಾಕರ್ ಹಾಗೂ ಕಾರ್ಯದರ್ಶಿಯಾಗಿ ಕೆ.ಕೆ.ಮಂಜುನಾಥ್ ಆಯ್ಕೆಯಾಗಿದ್ದಾರೆ. ತೊಂಭತ್ತುಮನೆ ಭಜನಾ ಮಂದಿರದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಸಿ.ವಿ.ಸುನಿಲ್, ಸಹ ಕಾರ್ಯದರ್ಶಿಯಾಗಿ ಮುರುಳಿ ಟಿ.ವೈ, ಖಜಾಂಚಿಯಾಗಿ ಮಾಧವ ಟಿ.ಕೆ., ಗೌರವ ಸಲಹೆಗಾರರಾಗಿ ಎ.ಕೆ.ಕಾರ್ಯಪ್ಪ, ಕಾರ್ಯಾಧ್ಯಕ್ಷರಾಗಿ ಪಿ.ಪಿ.ಸುಕುಮಾರ್ ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸದಸ್ಯರುಗಳಾಗಿ ಕೆ.ಎ.ತಿಮ್ಮಯ್ಯ, ಬಿ.ಎಸ್.ಕಿಶೋರ್, ಎಂ.ಬಿ.ಹರೀಶ್, ಬಿ.ಎಸ್.ಜನಾರ್ಧನ, ಕೆ.ಕೆ.ಹರೀಶ್, ಬಿ.ವಿಶ್ವನಾಥ್, ಟಿ.ಆರ್.ಸಾಜು, ಮನು ಬೆಳ್ಳಿಯಪ್ಪ, ಎಂ.ಬಿ.ರಮೇಶ್, ವಿ.ಟಿ.ಚೇತನ್, ಧನು ಶೇಖರ, ಟಿ.ಜಿ.ರೋಹನ್, ಮಣಿಕಂಠ ಮೋಹನ್ ದಾಸ್ ಅವರನ್ನು ಆಯ್ಕೆ ಮಾಡಲಾಯಿತು.









