
ಮಡಿಕೇರಿ ಜ.3 NEWS DESK : ಪೊನ್ನಂಪೇಟೆಯ ಹಳ್ಳಿಗಟ್ಟುವಿನಲ್ಲಿರುವ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿತ “ಮೆಟೀರಿಯಲ್ಸ್ ಅಂಡ್ ಟೆಕ್ನಾಲಜಿಗಳಲ್ಲಿನ ಪ್ರಗತಿಗಳು: ಥರ್ಮಲ್, ಮೆಕ್ಯಾನಿಕಲ್ ಮತ್ತು ಕ್ರಯೋಜೆನಿಕ್ ದೃಷ್ಟಿಕೋನಗಳು” ಕುರಿತ 6 ದಿನಗಳು ಆಯೋಜಿಸಲ್ಪಟ್ಟಿದ್ದ ಎಐಸಿಟಿಇ ಪ್ರಾಯೋಜಿತ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮ ಸಮಾರೋಪಗೊಂಡಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿವಿಸಿಇ ಮೈಸೂರಿನ ಪ್ರಾಂಶುಪಾಲ ಡಾ. ಬಿ.ಸದಾಶಿವೇಗೌಡ ಅವರು ಸಂಶೋಧನೆ ಮತ್ತು ಗುಣಮಟ್ಟದ ಪ್ರಕಟಣೆಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕೆಇಎಸ್ ನ ಉಪಾಧ್ಯಕ್ಷ ಎಂ.ಎಂ.ತಿಮ್ಮಯ್ಯ ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ಅಧ್ಯಾಪಕರ ಪಾತ್ರದ ಕುರಿತು ಮಾತನಾಡಿದರು. ಸಿಐಟಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಎಐಸಿಟಿಇ ಪ್ರಾಯೋಜಿತ ಕಾರ್ಯಾಗಾರಗಳ ಮಹತ್ವವನ್ನು ತಿಳಿಸಿದರು. ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ 42 ಪ್ರತಿನಿಧಿಗಳು ಈ ಮಹತ್ವದ ಕಾಯಾ೯ಗಾರದಲ್ಲಿ ಭಾಗವಹಿಸಿದ್ದರು. ಐಐಟಿ ಕಾನ್ಪುರ, ಐಐಟಿ ಖರಗ್‌ಪುರ, ಎನ್ಐಟಿ ಜಲಂಧರ್, ಎಚ್‌ಎಎಲ್ ಬೆಂಗಳೂರು ಮತ್ತು ದೇಶದ ಇತರ ಪ್ರಮುಖ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ತಿಮ್ಮಯ್ಯ ಎಜಿ ಸ್ವಾಗತಿಸಿ, ಸಹ-ಸಂಯೋಜಕ ಡಾ.ಕಿಶನ್ ಕರುಂಬಯ್ಯ ಬಿಜೆ ಎಫ್‌ಡಿಪಿ ವರದಿ ಮಂಡಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಜ್ಞಾನೇಶ್ ಎಂ.ವಂದಿಸಿ,. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಮುತ್ತಣ್ಣ ಕೆ.ಪಿ. ನಿರೂಪಿಸಿದರು.









