
ಮಡಿಕೇರಿ ಜ.10 NEWS DESK : ಬಾಳೆಲೆ ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಯಲ್ಲಿ 1997- 1998ನೇ ಶೈಕ್ಷಣಿಕ ವರ್ಷಗಳಲ್ಲಿ ವ್ಯಾಸಂಗ ಮುಗಿಸಿದ ಹಳೆಯ ಹಳೇಯ ವಿದ್ಯಾರ್ಥಿಗಳಿಂದ ಶಾಲಾಭಿವೃದ್ಧಿಗೆ ಆರ್ಥಿಕ ನೆರವು ನೀಡ ಲಾಯಿತು. ವಿದ್ಯಾರ್ಥಿಗಳಾದ ಶಿವದಾಸನ್, ವನಿತಾ, ಸುಂದರ, ಶಿವಪ್ಪ, ಮುಕುಂದ, ಅಶ್ವಿನಿ , ವಸಂತಿ, ಅರವಿಂದ, ಪವನ್, ಮಂಜುನಾಥ್, ಬೀಮಣಿ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದನ್ನು ಪ್ರೋತ್ಸಾಹಿಸಲು 20,250ರೂ. ಗಳ ಧನ ಸಹಾಯವನ್ನು ನೀಡಿದರು. ಈ ಸಂದರ್ಭ ಮಾತನಾಡಿದ ಹಳೇಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್, ನಾವು ಈಗ ನೀಡಿದ ಅರ್ಥಿಕ ನೆರವಿನ ರೀತಿಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಾಂಗ ಮಾಡಿ ಭವಿಷ್ಯದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕರಿಸುವಂತೆ ಕರೆ ನೀಡಿದರು. ವಿದ್ಯಾಸಂಸ್ಥೆಯ ಪರವಾಗಿ ಹಿರಿಯ ಸಹಾಯಕ ಅಧ್ಯಾಪಕರಾದ ಚಂದ್ರಶೇಖರ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಗದನ್ನು ಸ್ವೀಕರಿಸಿದರು.









