Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಸಿಎನ್‌ಸಿಯಿಂದ ಹಕ್ಕೊತ್ತಾಯ ಮಂಡನೆ*
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪನೆ ಕುರಿತ ಸಭೆ*
  • *ಗೋಣಿಕೊಪ್ಪಲು : ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಡಿಕೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರಿಗೆ ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ ಅತ್ಯಗತ್ಯ : ಕವಯತ್ರಿ ಸ್ಮಿತಾ ಅಮೃತಾರಾಜ್*
  • *ಬಾಳೆಲೆ : ರೂ. 27.23 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*
  • *ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*
  • *ಮಾ.8 ರಂದು ಬಿಟ್ಟಂಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ*
  • *ಕೊಡವ ಅಭಿವೃದ್ಧಿ ನಿಗಮ ಘೋಷಣೆ : ಯುಕೊ ಸಂಭ್ರಮಾಚರಣೆ : ಶಾಸಕ ಪೊನ್ನಣ್ಣ, ಮಂಜು ಚಿಣ್ಣಪ್ಪಗೆ ಸನ್ಮಾನ
  • *ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಯುವ ಜನತೆಯ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ವಿಶೇಷ

*ಯುವ ಜನತೆಯ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು*

ಜನವರಿ 12, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.12 NEWS DESK : ಯುವಶಕ್ತಿ ರಾಷ್ಟ್ರ ಶಕ್ತಿ..ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಜನತೆಗೆ ಕರೆ ನೀಡಿದ ಹರಿಕಾರ, ಮಹಾಚೇತನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಯುವಕರ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಅವರು ಯುವಶಕ್ತಿಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ನನಗೆ ಗಟ್ಟಿಮುಟ್ಟಾದ 100 ಜನ ಯುವಕರನ್ನು ಕೊಡಿ ನಾನು ನವ ಭಾರತವನ್ನು ನಿರ್ಮಾಣ ಮಾಡುತ್ತೀವಿ ಎಂದು ಕರೆ ನೀಡಿದ ಮಹಾನ್ ಚೇತನ.  ಯುವಕರು ಹೇಡಿಗಳಲ್ಲ, ಪರಾವಲಂಬಿಗಳಲ್ಲ ಎಂದ ಅವರು ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಯುವಜನತೆಗೆ ಸಂದೇಶವನ್ನು ಸಾರಿದರು. ಅವರ ಹುಟ್ಟು ಹಬ್ಬವನ್ನು ಭಾರತ ಸರ್ಕಾರ 1985 ರಿಂದ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಸ್ವಾಮಿ ವಿವೇಕಾನಂದರನ್ನು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಏನೆಂದರೆ, ಆಧುನಿಕ ಜಗತ್ತಿನ ನಿರ್ಮಾತ್ರರಲ್ಲಿ ವಿವೇಕಾನಂದರನ್ನು ಪ್ರಮುಖರೆಂದು ಗೌರವಿಸುತ್ತದೆ. ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಕುರಿತು ಅಧ್ಯಯನ ಮಾಡಬೇಕು. ಅಮೆರಿಕನ್ನರಿಗೆ ಕೊಲಂಬಸ್ ನೆಲವನ್ನು ಹುಡುಕಿಕೊಟ್ಟರೆ, ವಿವೇಕಾನಂದರು ಅವರಿಗೆ ಚೈತನ್ಯವನ್ನು ಹುಡುಕಿಕೊಟ್ಟರು. ನಮ್ಮನ್ನು ಬೆಚ್ಚಗೆ ಇಡುವ ಬೆಂಕಿ ನಮ್ಮನ್ನು ಸುಡಲು ಬಲ್ಲದು ಎಂದರು. ಯಾವ ಯಾವ ಕೆಲಸವನ್ನು ಆದರೆ ಯಾವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಸ್ವಾಮಿ ವಿವೇಕಾನಂದರ ನಿಲುವು ಇಂದಿಗೂ ಪ್ರಸ್ತುತ.  ಬಡವರ ಸೇವೆ ಅವರ ಪ್ರಬಲ ಅಸ್ತ್ರವಾಗಿತ್ತು.  ಬಡವರ ಸೇವೆ ಮಾಡುವುದರಲ್ಲಿ ಅವರು ಪರಮಾತ್ಮನ ಆರಾಧನೆಯನ್ನು ಕಂಡುಕೊಂಡವರು. ದೇವರ ಮುಂದೆ ಎಲ್ಲರೂ ಸಮಾನರು ಎಂದು ಭಾವಿಸಿದ್ದರು.  ಯುವಶಕ್ತಿಯ ಪ್ರೇರಕ ಸ್ವಾಮಿ ವಿವೇಕಾನಂದರು ಬದುಕಿದ್ದು, ಕೇವಲ 39 ವರ್ಷ 5 ತಿಂಗಳು ಮಾತ್ರ. ಆದರೆ ಇವರ ಜೀವಿತಾವಧಿಯಲ್ಲಿ ಸಾಧಿಸಿದ್ದು ಅಪಾರ. ದೇಶಭಕ್ತರಾಗಿ, ವಿಶ್ವ ಪ್ರಜೆಯಾಗಿ, ದಿವ್ಯಜ್ಞಾನಿಯಾಗಿ, ಮಾನವೀಯ ಹರಿಕಾರರಾಗಿ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. 1893ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ನನ್ನ ಸಹೋದರ ಸಹೋದರಿಯರೇ ಎಂದು ಹೇಳುವ ಮೂಲಕ ಪಾಶ್ಚಿಮತ್ಯರ ಕಣ್ಣು ತೆರೆಸಿದರು. ಭಾರತದ ಸನಾತನ ಧರ್ಮದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ತಿಳಿಸಿ ಅದುವರೆಗೂ ಲೇಡಿಸ್ ಅಂಡ್ ಜೆಂಟಲ್ ಮ್ಯಾನ್ ಎಂದು ಬೋಧಿಸುತ್ತಿದ್ದ ಪಶ್ಚಿಮಾತ್ಯರಿಗೆ ಈ ಮಾತು ಸೂಜಿಗಲ್ಲಿನಂತೆ ಎಳೆದುಬಿಟ್ಟವು. ಸನಾತನ ಧರ್ಮದ ಹಿರಿಮೆಯನ್ನು ವಿಶ್ವಕ್ಕೆ ತಿಳಿಸಿ ವಿವೇಕಾನಂದರು ವಿಶ್ವವಿಖ್ಯಾತರಾದರು. ತಮ್ಮ ಕಣಕಣದಲ್ಲೂ ದೇಶಭಕ್ತಿಯನ್ನು ತುಂಬಿಕೊಂಡಿದ್ದ ಈ ಮಹಾನುಭಾವರು ಭಾರತ ದೇಶದ ತರುಣರಿಗೆ ಎಂದೆಂದಿಗೂ ಸ್ಪೂರ್ತಿದಾಯಕರು. ನೊಬೆಲ್ ಪುರಸ್ಕೃತರಾದ ರವೀಂದ್ರನಾಥ ಠಾಗೋರ್ ಅವರು  ಭಾರತವನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಓದಿ ಎಂದು ಹೇಳಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರ ಕಟ್ಟಾ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರು, ಅವರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದರು. ಕೊಲ್ಕತ್ತಾದ ವಿಶ್ವನಾಥ ಭುವನೇಶ್ವರಿ ದಂಪತಿಗಳ ಪುತ್ರರಾಗಿ ಜ.12 ರಂದು 1863 ರಲ್ಲಿ ಜನಿಸಿದರು. ಹುಟ್ಟು ಹೆಸರು ನರೇಂದ್ರ ಬಾಲ್ಯದಿಂದಲೇ ಶ್ರೀರಾಮನ ಕಥೆಗಳನ್ನು ಬಹಳ ಇಷ್ಟಪಟ್ಟು ಹೇಳುತ್ತಿದ್ದರು ಇವರು ತಮ್ಮ ತಾಯಿಯಿಂದ ರಾಮಾಯಣ ಮಹಾಭಾರತದ ಕಥೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಶಾಲೆಯಲ್ಲಿ ಮಾಡುತ್ತಿದ್ದ ಪಾಠಗಳನ್ನು ಬಹಳ ಬೇಗ ಅರ್ಥ ಮಾಡಿಕೊಳ್ಳುವಲ್ಲಿ ನಿಸ್ಸೀಮರಾಗಿದ್ದರು ಪಾಠದಲ್ಲಿ ಮಾತ್ರವಲ್ಲದೆ ಆಟೋಟಗಳಲ್ಲಿ ಪ್ರವೀಣರಾಗಿದ್ದು ವ್ಯಾಯಾಮ ಕತ್ತಿ ವರಸೆ ಕುಸ್ತಿಗಳನ್ನು ಅವರು ಕಲಿತ್ತಿದ್ದರು. 1884ರಲ್ಲಿ ಬಿಎ ಪದವಿಯನ್ನು ಪಡೆದಿದ್ದರು. ಹಿಂದೂ ಧರ್ಮವೂ ಒಂದು ಧರ್ಮ ಮಾತ್ರವಲ್ಲ ಒಂದು ಮನುಷ್ಯನ ಜೀವನ ವಿಧಾನ. ಸೌಹಾರ್ದ ಹಾಗೂ ಸಹಿಷ್ಣುತೆ ಇದರ ಒಂದು ಮೂಲ. ಹಿಂದೂ ಧರ್ಮ ಅದಕ್ಕೆ ಭಾರತ ದೇಶದಲ್ಲಿ ಎಲ್ಲಾ ಧರ್ಮದವರು ಜಾತಿ ಧರ್ಮ ಭೇದ ಇಲ್ಲದೆ ಜೀವಿಸುತ್ತಿದ್ದಾರೆ. ಅದು ಎಲ್ಲ ಧರ್ಮವನ್ನು ಗೌರವಿಸುತ್ತಿದೆ ಎಂದರು. ವಿವೇಕಾನಂದರು ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. ನಿಮ್ಮ ಏಳಿಗೆಯಲ್ಲಿ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ ನಿಮಗೆ ಯಾರು ಹೊರಗಿನವರು ಸಹಾಯ ಮಾಡಲಾರದು. ನಿಮಗೆ ನಿಮ್ಮ ಮೇಲೆ ನಂಬಿಕೆ ಇದ್ದರೆ ಸಾಕು ಎಂದು ಭಾವಿಸಿದ್ದರು. ಇವರು ಕೇವಲ ರಾಮಕೃಷ್ಣರ ಶಿಷ್ಯರಾಗಿ ಉಳಿಯದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ಹೆಸರು ಮಾಡಿದರು. ಇಲ್ಲೆಲ್ಲೂ ದೇವರು ಇದ್ದಾನೆ ಎಂದು ಅವರು ಹೇಳಿದ್ದರು. ದೇವರಿಲ್ಲದ ಸರ್ವಂ ದೇವಮಯಂ ಎಂದು ಹೇಳಿದ್ದರು. ಇತರ ದೇಶಗಳ ಪರ್ಯಾಟನೆಯ ಸಂದರ್ಭ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಬಂಗಾಳ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಹಾಗೂ ಹಿಂದೂ ಸಂತ ತೈಲ0ಗ್ ಅವರನ್ನು ಭೇಟಿ ಮಾಡಿದರು. ಇಷ್ಟು ಸಣ್ಣ ಪ್ರಾಯದಲ್ಲಿ ದೂರ ದೃಷ್ಟಿ ಮತ್ತು ಪ್ರಭುದ ವಿಚಾರವನ್ನು ಹೊಂದಿದ ನರೇಂದ್ರರನ್ನು ಮುಂದೆ ನೀನು ದೊಡ್ಡ ವ್ಯಕ್ತಿಯಾಗುವೆ ಎಂದು ಅವರು ಪ್ರಶಂಸಿದರು. ಅಲ್ಲದೆ ಲಕ್ನೋ ಅಯೋದ್ಯ. ಹೃಷಿಕೇಶ ರಾಮೇಶ್ವರ ಕನ್ಯಾಕುಮಾರಿಯವರೆಗೂ ರಾಜರುಗಳನ್ನು ಭೇಟಿ ಮಾಡಿದರು. ತಮ್ಮ ತಂದೆಯ ಮರಣ ನಂತರ ಕುಟುಂಬದ ಜವಾಬ್ದಾರಿ ಜೊತೆಗೆ ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಸೇವೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಗುರುಗಳು ಕಾಲವಾದ ನಂತರ ಕಾಳಿಪುರದ ತೋಟದ ಮನೆಯಲ್ಲಿ ವಾಸ ಪ್ರಾರಂಬಿಸಿದರು. ಹೀಗೆ ರಾಮೇಶ್ವರಕ್ಕೆ ತೆರಳಿ ಕನ್ಯಾಕುಮಾರಿ ಹೋದರು. ಅಲ್ಲಿ ಸಮುದ್ರದ ಬದಿಯಲ್ಲಿ ಕುಳಿತು ಧ್ಯಾನ ಆರಂಭಿಸಿದರು. ಇವರು ದೇಶದ ಉದ್ದಗಲಕ್ಕೂ ಶಿಷ್ಯರನ್ನು ಹೊಂದಿದ್ದರು. ಹಲವಾರು ರಾಜರುಗಳು ಕೂಡ ಇವರ ಶಿಷ್ಯರಾಗಿದ್ದರು. ಇವರು ಹಲವಾರು ಮಠಗಳನ್ನು ಪ್ರಾರಂಭಿಸಿದರು. ಭಾರತವಲ್ಲದೆ ಬಾಂಗ್ಲಾದೇಶ, ಗ್ರೀಸ್, ಅಮೆರಿಕ, ಶ್ರೀಲಂಕಾ ಅಲ್ಲದೆ ಎರಡು ಬಾರಿ ಪಾಶ್ಚ್ಯಾತ್ಯ ದೇಶಗಳಿಗೆ ಭೇಟಿ ನೀಡಿ ಯುವಕರಿಗೆ ಮಾರ್ಗದರ್ಶನ ನೀಡಿದರು. ಯುವಕರಿಗೆ ಇವರ ಕೊಡುಗೆ ಅಪಾರ. ಯುವಜನರಲ್ಲಿ ನಿಮ್ಮ ಅಸೂಹೆ ಮತ್ತು ಸಹಕಾರಗಳನ್ನು ತೊರೆಯಿರಿ ಅದ್ಭುತ ಶಕ್ತಿಯೊಂದಿಗೆ ಮುನ್ನುಗ್ಗಿ ಬನ್ನಿ ಎಂದು ಯುವಕರಿಗೆ ಪ್ರೇರಣೆ ನೀಡಿದ ಮಹಾನ್ ಚೇತನ ವಿವೇಕಾನಂದರು. ಇಂದು ಅವರ ಹುಟ್ಟು ಹಬ್ಬದ ಸಂಭ್ರಮ ಏಕಾನಂದರ ಆದರ್ಶವನ್ನು ಮುಂದುವರಿಸಿಕೊಂಡು ದೇಶ ಸೇವೆಯಲ್ಲಿ ತೊಡಗುವಂತಾಗಲಿ. ನವ ಭಾರತದ ಮಹಾನ್ ನಾಯಕರಾದ ಸ್ವಾಮಿ ವಿವೇಕಾನಂದರು ಎಂದೆಂದಿಗೂ ಅಜರಾಮರ.
ಲೇಖನ :: ಪಿ. ಪಿ..ಸುಕುಮಾರ್. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರು, ಹಾಕತ್ತೂರು. 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಸಿಎನ್‌ಸಿಯಿಂದ ಹಕ್ಕೊತ್ತಾಯ ಮಂಡನೆ*

ಮಾರ್ಚ್ 8, 2026

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪನೆ ಕುರಿತ ಸಭೆ*

ಮಾರ್ಚ್ 8, 2026

*ಗೋಣಿಕೊಪ್ಪಲು : ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 8, 2026

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪನೆ ಕುರಿತ ಸಭೆ*

ಮಾರ್ಚ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಮಾ.8 NEWS DESK  : ಶಾಲಾ ಶಿಕ್ಷಣ ಇಲಾಖೆಯಡಿಯಲ್ಲಿ ಸಮಗ್ರ ಶಿಕ್ಷಣ – ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶನಾಲಯದ…

*ಗೋಣಿಕೊಪ್ಪಲು : ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 8, 2026

*ಮಡಿಕೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರಿಗೆ ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ ಅತ್ಯಗತ್ಯ : ಕವಯತ್ರಿ ಸ್ಮಿತಾ ಅಮೃತಾರಾಜ್*

ಮಾರ್ಚ್ 8, 2026

*ಬಾಳೆಲೆ : ರೂ. 27.23 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*

ಮಾರ್ಚ್ 7, 2026

*ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 7, 2026

*ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*

ಮಾರ್ಚ್ 7, 2026

*ಮಾ.8 ರಂದು ಬಿಟ್ಟಂಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಘೋಷಣೆ : ಯುಕೊ ಸಂಭ್ರಮಾಚರಣೆ : ಶಾಸಕ ಪೊನ್ನಣ್ಣ, ಮಂಜು ಚಿಣ್ಣಪ್ಪಗೆ ಸನ್ಮಾನ

ಮಾರ್ಚ್ 7, 2026

*ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ*

ಮಾರ್ಚ್ 7, 2026

*ತಿತಿಮತಿ : ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಕಾಮಗಾರಿ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*

ಮಾರ್ಚ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.