
ಸುಂಟಿಕೊಪ್ಪ NEWS DESK ಜೂ.18: ಪ್ರಸ್ತುತ ಕಾಲಘಟ್ಟದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿದ್ದು ಸುಸಂಸ್ಕೃತರ ಸಂಖ್ಯೆ ಕ್ಷೀಣವಾಗುತ್ತಿರುವುದು ವಿಷಾದನೀಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಅವರು ಬುಧವಾರದಂದು ಕಂಬಿಬಾಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊoಡ ಎಲ್‌ಕೆಜಿ ಮತ್ತು ಯುಕೆಜಿ ಆಂಗ್ಲ ಮಾದ್ಯಮ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು, ಪ್ರತಿಯೊಬ್ಬರಿಗೂ ನನ್ನ ಶಾಲೆ ನಮ್ಮೂರ ಶಾಲೆ ಎಂಬ ಅಭಿಮಾನವಿರಬೇಕು. ಹಳೆಯ ವಿದ್ಯಾರ್ಥಿಗಳ ಸಂಘ ಅತ್ಯಂತ ಸಂಘಟಿತವಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದ ಅವರು ಭಾರತದ ಮೊದಲ ಪ್ರಧಾನಿ ನೆಹರು ಹೇಳಿದ ಉತ್ತಮ ಜ್ಞಾನವಂತರಾಗಿ ಹೊರಹೊಮ್ಮಲು ಶಿಕ್ಷಣದಿಂದ ಮಾತ್ರ ಸಾಧ್ಯ ಭಾರತ ಜ್ಞಾನವಂತರ ನಾಡಗಿದ್ದು ಪ್ರಪಂಚ ನಮ್ಮಿಂದ ಜ್ಞಾನ ಪಡೆಯಲು ಮುಂದಾಗಿದೆ. ಆದರೆ ನಮ್ಮ ಯುವಜನಾಂಗ ಮಾದಕ ವ್ಯಸನಿಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಈ ಹಿನ್ನಲೆಯಲ್ಲಿ ಸುಶಿಕ್ಷಿತರೆನ್ನಿಸಿಕೊಂಡರೇ ಸಾಲದು ಸುಸಂಸ್ಕೃತರಾಗಿ ನಾವು ನಮ್ಮ ಯುವಜನಾಂಗವನ್ನು ತರಬೇತುಗೊಳಿಸಬೇಕಾಗಿದೆ ಎಂದು ಅವರು ಕರೆ ನೀಡಿದರು. ಆಂಗ್ಲ ಮಾದ್ಯಮದಲ್ಲಿ ಶಿಕ್ಷಣ ನಮ್ಮ ಬದುಕಿನ ಭಾಗ ಮತ್ತು ಜೀವನಕ್ಕೆ ಅನಿವಾರ್ಯ ಎಂದು ಅವರು ಹೇಳಿದರುಇ. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದುರಸ್ತಿ ಮತ್ತು ಇತರ ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತಂದು ಆದ್ಯತೆಯ ಮೇರೆಗೆ ಪರಿಹರಿಸಲು ಕ್ರಮ ಕೈಗೊಳ್ಳಲು ಭರವಸೆ ನೀಡಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕಂಬಿ¨ಣೆ ರಾಮ ಸೇವಾವ ಸಮಿತಿಯ ಅಧ್ಯಕ್ಷರಾದ ಡಾ.ಶಶಿಕಾಂತರೈ ಮಾತನಾಡಿ ಮಕ್ಕಳು ಅತ್ಯುತ್ತಮ ಶಿಕ್ಷಣ ಪಡೆದು ದೇಶದ ಅಸ್ತಿ ಎನ್ನಿಸಬೇಕಾದರೆ ಶಿಕ್ಷಕರ ಪಾತ್ರ ಅತೀಮುಖ್ಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷಾ ಮಾದ್ಯಮ ಅನಿವಾರ್ಯವಾಗಿದೆ ನಮ್ಮ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ನೀಡಿ ಸುಶಿಕ್ಷಿತ ಮತ್ತು ಸುಸಂಸ್ಕೃತರನ್ನಾಗಿ ರೂಪಿಸುವುದು ನಮ್ಮೆಲ್ಲಾರ ಜವಾಬ್ಧಾರಿ ಎಂದು ಹೇಳಿದರು. ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಕ್ಕೆ ಶ್ರಮಹಾಕಿದ ಕಾಫಿಬೆಳೆಗಾರರು ಸಮಾಜ ಸೇವಕರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ ನಮ್ಮ ತಂಡದ 3 ವರ್ಷದ ಕನಸ್ಸು ಈಡೇರಿದೆ 10 ಮಕ್ಕಳು ಎಲ್‌ಕೆಜಿ ತರಗತಿಗೆ ಪ್ರವೇಶ ಪಡೆದಿದ್ದಾರೆ ಸರಕಾರದ ಅನುದಾನ ಇತರೆ ವ್ಯವಸ್ಥೆಗಳನ್ನು ಪಡೆಯಲು 20 ಮಕ್ಕಳು ದಾಖಲಾಗಿರಬೇಕು ಈ ಹಿನ್ನಲೆಯಲ್ಲಿ ಪ್ರಸ್ತುತ ಎಲ್‌ಕೆಜಿಗೆ ನಮ್ಮ ಸಮಾನಮನಸ್ಕರ ಎಲ್ಲಾ ಖರ್ಚುವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗಬೇಕಾಗಿದೆ. ಶಿಕ್ಷಣಾಭಿಮಾನಿಗಳು ದಾನಿಗಳು ಹಳೆಯ ವಿದ್ಯಾರ್ಥಿಗಳು ನಮ್ಮ ಶಾಲೆಯನ್ನು ಹೆಮ್ಮರವಾಗಿ ಬೆಳೆಸಲು ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಬ್ಬಿರ್ ವಹಿಸಿದ್ದರು. ಸಮಾರಂಭದಲ್ಲಿ ಎಲ್‌ಕೆಜಿ ಯುಕೆಜಿ ನಿರ್ವಹಣಾ ಗೌರವಾಧ್ಯಕ್ಷ ಚಂದ್ರಹಾಸ ರೈ, ಮಾಜಿ ತಾ.ಪಂ.ಸದಸ್ಯ ಕೆ.ಎಸ್.ಮಂಜುನಾಥ್, ದಾನಿಗಳಾದ ಟಿ.ಆರ್.ಅನಿಲ್, ಸುಭಾಷ್ ಯುವಕ ಸಂಘದ ಅಧ್ಯಕ್ಷ ಮಣಿ, ಕಂಬಿಬಾಣೆ ಮಸೀದಿಯ ಅಧ್ಯಕ್ಷ ಮೋಯಿದ್ಧಿನ್, ಕಂಬಿಬಾಣೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಬಿ.ಕೃಷ್ಣ, 7ನೇ ಹೊಸಕೋಟೆ ಗ್ರಾ.ಪಂ.ಮಾಜಿ ಸದಸ್ಯ ಅಬ್ಧುಲ್ ರಜಾಕ್, ಕಂಬಿಬಾನೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಂಕರನಾರಾಯಣ್, ಶ್ರೀರಾಮ ಚಾಮುಂಡೇಶ್ವರಿ ದೇವಾಸ್ಥಾನ ಸಮಿತಿಯ ಕಾರ್ಯದರ್ಶಿ ಗಣೇಶ್,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಜಯಂತ್, ಮುನಿರ್, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಸಿ.ದಿನೇಶ್, ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮೊಯ್ದು, ಶಾಲಾ ಮುಖ್ಯ ಶಿಕ್ಷಕಿ ನಯನ ವೇದಿಕೆಯಲ್ಲಿದ್ದರು.








