
ಮಡಿಕೇರಿ ಜೂ.23 NEWS DESK : ಕುಶಾಲನಗರ ಸಮೀಪದ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಸೋಮವಾರಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಜ್ಯೋತಿ ಬೆಳಗಿಸಿ ಯೋಗದಿನವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ದೈಹಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ದೈಹಿಕ ಆರೋಗ್ಯ ಸದೃಢವಾಗಿಬೇಕಾದರೆ ದಿನನಿತ್ಯ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ ಕೃಷ್ಣಪ್ಪ ಎಂದು ಕರೆ ನೀಡಿದರು. ಕಾಯ೯ಕ್ರಮದ ಮುಖ್ಯ ಅತಿಥಿ ಡಾ.ಶಶಾಂಕ್ ಅತ್ವಾರ್ ಮಾತನಾಡಿ, , ಯೋಗದ ಮಹತ್ವ : ಯೋಗದ ಉಗಮದ ಬಗ್ಗೆ ಮಾಹಿತಿ ನೀಡಿದರಲ್ಲದೆ, ಗುರು ಪರಂಪರೆಯ ಬಗ್ಗೆಯೂ ತಿಳಿಸಿ, ವಿದ್ಯಾರ್ಥಿಗಳು ಶಿಸ್ತು, ಸಂಯ ಮ ಸಮಯ ಪಾಲನೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ ಸುಧೀರ್ ಮಾತನಾಡಿ, ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು ದಿನನಿತ್ಯ ಮಾಡುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಹೇಳಿದರು. ಯೋಗ ದಿನದ ಅಂಗವಾಗಿ ಶಾಲೆಯ ಯೋಗ ಶಿಕ್ಷಕ ಶಿವರಾಮ ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ, ಪ್ರಾಯವಾಲ ಸತ್ಯಸುಲೋಚನ, ಶಿಕ್ಷಕ ಶಿಕ್ಷಕೇತರು ಉಪಸ್ಥಿತರಿದ್ದರು.









