
ವಿರಾಜಪೇಟೆ ಜೂ.24 NEWS DESK : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸುವ ಸಲುವಾಗಿ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆ ಮಾಡಲು ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಗಾಗಿ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ [ಇವಿಎಂ] ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ಚುನಾವಣೆಯ ಮತಗಟ್ಟೆ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ಪಿ.ಯು.ಪಾರ್ವತಿ, ಸಹ ಅಧಿಕಾರಿಯಾಗಿ ಬಿ.ಪಿ.ಉಷಾ ಹಾಗೂ ಸಿ ಲೀನಾ ದೇವಯ್ಯ ಕಾರ್ಯನಿರ್ವಹಿಸಿದ್ದರು. ಶಾಲಾ ಸಂಸತ್ತು ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಬೋವ್ವೇರಿಯಂಡ ಹನ್ಸಿಕ ಪೊನ್ನಪ್ಪ, ಉಪ ನಾಯಕಿಯಾಗಿ ಪಟ್ಟಡ ಬಿ.ದೇಚಮ್ಮ ಕ್ರೀಡಾ ನಾಯಕಿ ಕರ್ನಂಡ ಎಸ್.ಕೃತಿಕಾ ಅಕ್ಕಮ್ಮಾ, ಉಪ ನಾಯಕಿಯಾಗಿ ಕರ್ನಂಡ ಎಸ್.ಶತಕ ಕಾವೇರಮ್ಮ, ಸಾಂಸ್ಕೃತಿಕ ನಾಯಕಿಯಾಗಿ ಕುಲ್ಲಚಂಡ ಎಸ್.ಭೂಮಿಕಾ ಬೋಜಮ್ಮ, ಉಪ ನಾಯಕಿಯಾಗಿ ಚೋಕಂಡ ದಿತಿ ದೇಚಮ್ಮ, ಆರೋಗ್ಯ ನಾಯಕಿಯಾಗಿ ಐ.ಎಂ.ಅಮಾನ ಮನ್ನ, ಉಪ ಆರೋಗ್ಯ ನಾಯಕಿಯಾಗಿ ಕಾಳಚಂಡ ಎಂ.ದೇಚಮ್ಮ, ಶಿಸ್ತಿನ ನಾಯಕಿಯಾಗಿ ಸನಾ ಕೆ.ಎಸ್, ಉಪ ಶಿಸ್ತಿನ ನಾಯಕಿಯಾಗಿ ಅಜಾನ್ ಎಂ.ಎ, ಅಂಕುರ್ ಹೌಸ್ ಕ್ಯಾಪ್ಟನ್ ಆಗಿ ನೆಲ್ಲಚಂಡ ಎನ್ ಪೊನ್ನಮ್ಮ, ಉಪನಾಯಕರಾಗಿ ಮಾತಂಡ ಪೊಟ್ಟಂಡ ಯು.ಯಕ್ಷಿತ್, ಆರೋಹಿ ಹೌಸ್ ಕ್ಯಾಪ್ಟನ್ ರಾನೀಯ ತಸ್ಲೀನ್ ಟಿ.ಎಫ್, ಉಪ ನಾಯಕನಾಗಿ ಕುಟ್ಟಂಡ ಚಿರಾಗ್ ಚೆಂಗಪ, ಐಕ್ಯಂ ಹೌಸ್ ಕ್ಯಾಪ್ಟನ್ ನಿಧಾ ಕೆ.ಎಚ್, ಉಪ ನಾಯಕಿಯಾಗಿ ಕೌಶಿಕ್ ಯು.ಎಸ್, ಅದ್ವೈತ್ ಹೌಸ್ ಕ್ಯಾಪ್ಟನ್ ಅಮರ್ ನಾಥ್ ಎ.ಎಸ್.ಉಪನಾಯಕ ಜಯಾನ್ ಎಂ.ಹೆಚ್.ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ನಾಯಕರುಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶಾಲೆಯ ಅಧ್ಯಕ್ಷರಾದ ಸುದೇಶ್ ಬಿ.ಎಸ್ ಮಾತನಾಡಿ “ಈ ಒಂದು ಪದವಿ ಕೇವಲ ಪದವಿ ಮಾತ್ರವಲ್ಲ, ಗೌರವದಿಂದ ಕೂಡಿದ ಜವಾಬ್ದಾರಿಯುತ ಸೇವೆಯಾಗಿದೆ. ಇದನ್ನು ಅರಿತು ಇತರರಿಗೆ ಮಾದರಿಯಾಗಬೇಕೆಂದರು. ಶಾಲಾ ನಾಯಕನಾಗಿ ಬೋವ್ವೇರಿ ಯಂಡ ಹನ್ಸಿಕ ಪೊನ್ನಪ್ಪನವರು ಪ್ರತಿಜ್ಞಾವಿಧಿಯನ್ನು ಓದುವ ಮೂಲಕ ಇತರ ಚುನಾಯಿತ ನಾಯಕ ನಾಯಕಿಯರು ಅದನ್ನು ಪಾಲಿಸುದಾಗಿ ಪ್ರತಿಜ್ಞೆ ಮಾಡಿದರು. ಆಯ್ಕೆಯಾದ ಪ್ರತಿನಿಧಿಗಳು ಶಾಲಾ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಗಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಸುದೇಶ್ ಬಿ.ಎಸ್, ಕಾರ್ಯದರ್ಶಿಯವರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ.ಯು ಹಾಗೂ ಸಂಯೋಜಿಕಿಯಾದ ಅಮೃತ ಅರ್ಜುನ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿಯವರಾದ ತಮ್ಸೀನ ನೆರವೇರಿಸಿದರು. ಕಾರ್ಯದರ್ಶಿ ವಿನೋದ್ ಪಿ.ಎನ್ ಅವರು ವಂದಿಸಿದರು.









