
ಸೋಮವಾರಪೇಟೆ NEWS DESK ಜು.19 : ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಸಾಮಾನ್ಯ ಸಭೆಯು ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ತತ್ವ–ಸಿದ್ಧಾಂತಗಳು, ಶಿಸ್ತು, ಸಮಯಪಾಲನೆ, ನಾಡು-ನುಡಿ, ನೆಲ-ಜಲ, ಗಡಿ ರಕ್ಷಣೆ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡ ಶಾಲೆಗಳ ಉಳಿವಿನ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಜೊತೆಗೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ವಿಷಯವಾಗಿ ಮನವಿ ಸಲ್ಲಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ, ತಾಲ್ಲೂಕು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ವಿತರಿಸಲಾಯಿತು. *ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು* ರಾಜೇಶ್ – ಜಿಲ್ಲಾ ಉಪಾಧ್ಯಕ್ಷರು (ಕುಶಾಲನಗರ ವಿಭಾಗ), ಕೃಷ್ಣ – ಜಿಲ್ಲಾ ಟೈಲರ್ಸ್ ಘಟಕದ ಅಧ್ಯಕ್ಷರು, ಮಂಜಯ್ಯ – ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರು, ಸುಪ್ರಿತಾ ಕರುಣಾಕರ – ಜಿಲ್ಲಾ ಉಪಾಧ್ಯಕ್ಷರು (ಸೋಮವಾರಪೇಟೆ ವಿಭಾಗ), ಪೂರ್ಣಿಮಾ – ಜಿಲ್ಲಾ ಕಾರ್ಯದರ್ಶಿ (ಸೋಮವಾರಪೇಟೆ ವಿಭಾಗ), ನಾಗರಾಜ್ – ಜಿಲ್ಲಾ ಕಾರ್ಯದರ್ಶಿ (ಸೋಮವಾರಪೇಟೆ ವಿಭಾಗ), ಜಮೀರ್ – ಜಿಲ್ಲಾ ಉಪಾಧ್ಯಕ್ಷರು (ಸೋಮವಾರಪೇಟೆ ವಿಭಾಗ), ಆಶಾ ಚೇತನ್ – ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರು, ಸಂದ್ಯಾ – ಸೋಮವಾರಪೇಟೆ ತಾಲ್ಲೂಕು ಉಪಾಧ್ಯಕ್ಷರು, ಪ್ರೇಮ – ಪ್ರಧಾನ ಕಾರ್ಯದರ್ಶಿ, ಶಶಿಕಲಾ – ಸಂಘಟನಾ ಕಾರ್ಯದರ್ಶಿ, ಅಬ್ದುಲ್ ಸಾಬೀಕ್ ಐ – ಕುಶಾಲನಗರ ಗಡಿ ಘಟಕದ ಅಧ್ಯಕ್ಷರು, ಗೀತಾ ರಾಕೇಶ್ – ಕುಶಾಲನಗರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ, ಪ್ರಿತುನ್ ಪೂವಣ್ಣ _ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರು, ಸಭೆಯಲ್ಲಿ ರಾಜ್ಯ ಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಮಿತೇಶ್ ಹಾಗೂ ರಿತನ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಅಧ್ಯಕ್ಷರು, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಘಟಕಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.









