Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಸರಕಾರ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*
  • *ದೇವಟ್ ಪರಂಬ್ ನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಲು ಒತ್ತಾಯ*
  • *ಮನೆ ಬಾಗಿಲಿಗೆ ಉಚಿತವಾಗಿ ಬರಲಿದೆ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ : ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರ : ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ*
  • *ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ನೆರವು*
  • *ಐತಿಚಂಡ ರಮೇಶ್ ಉತ್ತಪ್ಪಗೆ “ಯೋಗ ಕೌಸ್ತುಭ” ಪ್ರಶಸ್ತಿ ಪ್ರದಾನ*
  • *ಐತಿಚಂಡ ರಮೇಶ್ ಉತ್ತಪ್ಪಗೆ “ಯೋಗ ಕೌಸ್ತುಭ” ಪ್ರಶಸ್ತಿಯ ಗೌರವ**
  • *ಯುಕೊದಿಂದ ಪುಣ್ಯಸ್ಮರಣೆ ಕಾರ್ಯಕ್ರಮ : ಪಂದ್ಯಂಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ*
  • *ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೊಡಗು ಜಿಲ್ಲಾ ಘಟಕದ ಸಾಮಾನ್ಯ ಸಭೆ : ನೂತನ ಪದಾದಿಕಾರಿಗಳ ಪದಗ್ರಹಣ*
  • *ಮಡಿಕೇರಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ* 
  • *ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ ರೂ.3 ಕೋಟಿ ಅನುದಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಯುಕೊದಿಂದ ಪುಣ್ಯಸ್ಮರಣೆ ಕಾರ್ಯಕ್ರಮ : ಪಂದ್ಯಂಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಯುಕೊದಿಂದ ಪುಣ್ಯಸ್ಮರಣೆ ಕಾರ್ಯಕ್ರಮ : ಪಂದ್ಯಂಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ*

ಜುಲೈ 19, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜು.19 : ಪಂದ್ಯಂಡ ಬೆಳ್ಯಪ್ಪನವರ ಬದುಕು ಇಂದಿನ ಪೀಳಿಗೆ ಆದರ್ಶಪ್ರಾಯ ವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಕರೆ ನೀಡಿದ್ದಾರೆ. ಪಂದ್ಯಂಡ ಬೆಳ್ಯಪ್ಪನವರ ಬದುಕು ಇಂದಿನ ಪೀಳಿಗೆ ಆದರ್ಶಪ್ರಾಯ ವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಕರೆ ನೀಡಿದ್ದಾರೆ. ಅವರು ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಸ್ಥೆ ಆಯೋಜಿಸಿದ್ದ, ಕೊಡಗಿನ ಗಾಂಧಿ ಎಂದೇ ಖ್ಯಾತರಾಗಿದ್ದ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪನವರ 60ನೇ ಪುಣ್ಯ ತಿಥಿಯ ಅಂಗವಾಗಿ ಗೋಣಿಕೊಪ್ಪಲು ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪಂದ್ಯಂಡ ಬೆಳ್ಯಪ್ಪನವರು ಕೊಡಗಿನಾದ್ಯಂತ ಮಾತ್ರವಲ್ಲದೆ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರ್ತಿಸಿಕೊಂಡಿದ್ದ ಧೀಮಂತ ನಾಯಕರಾಗಿದ್ದರು. ಇವರ ತ್ಯಾಗ, ಆದರ್ಶಗಳು ಇಂದಿನ ಹಾಗು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗ ಬೇಕು ಎಂದು ಹೇಳಿದರು. ಕೊಡಗಿನಿಂದ ಸುಮಾರು ಮುನ್ನೂರಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು, ನೂರಕ್ಕೂ ಅಧಿಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಬವಿರದ್ದಾರೆ ಇಂತಹವರ ಪುಥಳಿಗಳು ಗ್ರಾಮ ಗ್ರಾಮಗಳಲ್ಲಿಯೂ ತಲೆಎತ್ತಬೇಕಿದೆ. ಈ ನಿಟ್ಟಿನಲ್ಲಿ ಯುಕೊ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಕೊಡಗಿನ ಆಸ್ಮಿತೆಯನ್ನು ಸಂರಕ್ಷಿಸುವ ಸಲುವಾಗಿ ನಿರಂತರ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕೊಡಗು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ದರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನಿಂಡ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಒಂದು ಆಯಾಮವನ್ನು ನೀಡಿದವರು ಪಂದ್ಯಂಡ ಬೆಳ್ಯಪ್ಪನವರು. ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಅವರ ಬದ್ಧತೆಯನ್ನು ಇಂದಿನ ನಮಗೆ ಕಲ್ಪಿಸಿಕೊಳ್ಳಲೂ ಸಾದ್ಯವಿಲ್ಲ. ಮಾದ್ಯಮ ಜಗತ್ತು ವಿಸ್ತಾರವಾಗಿರುವ ಇಂದಿನ ಕಾಲದಲ್ಲಿ ಹೆಸರು ಗಳಿಸುವುದು ಸುಲಭದ ಮಾತು, ಆದರೆ ಯಾವುದೂ ಇಲ್ಲದ ಕಾಲದಲ್ಲಿ, ತಮ್ಮ ಬದುಕಿನ ಬಗ್ಗೆಯೇ ಬರವಸೆ ಇಲ್ಲದಿದ್ದ ಕಾಲಘಟ್ಟದಲ್ಲಿ , ಜನರನ್ನು ಸಂಘಟಿಸಿ, ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಿ ನಾಯಕತ್ವ ಬೆಳೆಸಿಕೊಳ್ಲುವುದು ಸಾಮಾನ್ಯದ ಮಾತಲ್ಲ. ಇಂತಹಾ ಮಹಾತ್ಮರನ್ನು ಸ್ಮರಿಸುವಂತಹ ಪುಣ್ಯ ಕಾರ್ಯ ಇದಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಆಯೋಜಿಸಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿ, ಆದರ್ಶಪ್ರಾಯರಾಗಿ ಜೀವನದುದ್ದಕ್ಕೂ ಜೀವಿಸಿದ ಅಪ್ಪಟ ದೇಶಭಕ್ತ, ಗಾಂಧಿವಾದಿ ಪಂದ್ಯಂಡ ಬೆಳ್ಯಪ್ಪ ನವರಂತಹ ಆದರ್ಶಪ್ರಾಯರ ತ್ಯಾಗ ಬಲಿದಾನ, ಆದರ್ಶಗಳು ಇತಿಹಾಸದ ಪುಟಗಳಿಂದ ಕಣ್ಮರೆಯಾಗುವ ಹಂತಕ್ಕೆ ಬಂದು ತಲುಪಿದೆ. ಇಂತಹ ಆದರ್ಶ ಪ್ರಾಯರ ಬದುಕು ಈ ನೆಲದ ಆಸ್ಮಿತೆಯ ಪ್ರತೀಕವಾಗಿವೆ. ಒಂದೆಡೆ ಇಂತಹ ಕೊಡಗಿನ ನೈಜ ಇತಿಹಾಸಗಳು ತಿರುಚಲ್ಪಡುತ್ತಿದೆ. ಮತ್ತೊಂದೆಡೆ ಅವಕಾಶ ಸಿಂಧು ಖೊಟ್ಟಿ ಇತಿಹಾಸಗಳು ಸೃಷ್ಠಿಯಾಗುತ್ತಿದೆ. ಈ ರೀತಿಯ ಬೆಳವಣಿಗೆಗಳು ನೆಲದ ಅಸ್ಥಿತ್ವಕ್ಕೆ ದಕ್ಕೆಯುಂಟುಮಾಡುತ್ತಿವೆ. ಆದ್ದರಿಂದ ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ಕೆ ನಾವು ನಾಂದಿ ಹಾಡಿದ್ದೇವೆ ಎಂದು ಹೇಳಿದರು. ನಮ್ಮ ಬೇಡಿಕೆಗೆ ಸ್ಪಂದಿಸಿ ಶಾಸಕ ಪೊನ್ನಣ್ಣನವರು ಇಲ್ಲಿ ಪಂದ್ಯಂಡ ಬೆಳ್ಯಪ್ಪನವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಪ್ರತಿಮೆಗೆ ಮೌಲ್ಯವನ್ನು ತುಂಬಬೇಕಾದ ಕೆಲಸ ನಮ್ಮಿಂದಾಗಬೇಕಿದೆ. ಈ ನಿಟ್ಟಿನಲ್ಲಿ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪನವರ 60ನೇ ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಮಾಚಿಮಂಡ ಸುವಿನ್ ಗಣಪತಿ, ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಕ್ರೈಂ ವಿಭಾಗದ ವೆಂಕಟೇಶ್ ಮೂರ್ನಾಡು ಕೊಡವಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಖಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಯುಕೊ ಸದಸ್ಯರಾದ ಚೆಪ್ಪುಡೀರ ಪ್ರತಿಮಾ ಕಾರ್ಯಪ್ಪ, ಕಳ್ಳಿಚಂಡ ದೀನಾ ಉತ್ತಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ,ಕುಂಜಿಲಂಡ ಗ್ರೇಸಿ ಪೂಣಚ್ಚ, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ,ಪುದಿಯೊಕ್ಕಡ ರಮ್ಯ ವಿಪನ್,ನೆಲ್ಲಮಕ್ಕಡ ಮಾದಯ್ಯ,ಚೆಪ್ಪುಡೀರ ಸಂಜು ಕರುಂಬಯ್ಯ, ಮಚ್ಚಾಮಾಡ ರಮೇಶ್, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ,ಕಳ್ಳಿಚಂಡ ರಾಬೀನ್ ಸುಬ್ಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ ,ಕೊಟ್ಟಂಗಡ ಮೊಣ್ಣಪ್ಪ,ಬೊಳ್ಳಿಯಂಗಡ ಬೋಪಣ್ಣ,ತೀತಿಮಾಡ ಬೋಸ್ ಅಯ್ಯಪ್ಪ, ಪುದಿಯೊಕ್ಕಡ ದಿನೇಶ್,ಕಳ್ಳಿಚಂಡ ದ್ರುವ ಕಾರ್ಯಪ್ಪ, ಅಜ್ಜಿಕುಟ್ಟಿರ ಗಿರೀಶ್, ಅಜ್ಜಿಕುಟ್ಟಿರ ಸುನಿತ ಗಿರಿಶ್ ಸೇರಿದಂತೆ ಅನೇಕ ಗಣ್ಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಸರಕಾರ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಜುಲೈ 20, 2026

*ದೇವಟ್ ಪರಂಬ್ ನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಲು ಒತ್ತಾಯ*

ಜುಲೈ 20, 2026

*ಮನೆ ಬಾಗಿಲಿಗೆ ಉಚಿತವಾಗಿ ಬರಲಿದೆ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ : ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರ : ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ*

ಜುಲೈ 20, 2026

*ದೇವಟ್ ಪರಂಬ್ ನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಲು ಒತ್ತಾಯ*

ಜುಲೈ 20, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜು.20 : ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕೆಂದು…

*ಮನೆ ಬಾಗಿಲಿಗೆ ಉಚಿತವಾಗಿ ಬರಲಿದೆ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ : ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರ : ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ*

ಜುಲೈ 20, 2026

*ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ನೆರವು*

ಜುಲೈ 20, 2026

*ಐತಿಚಂಡ ರಮೇಶ್ ಉತ್ತಪ್ಪಗೆ “ಯೋಗ ಕೌಸ್ತುಭ” ಪ್ರಶಸ್ತಿ ಪ್ರದಾನ*

ಜುಲೈ 20, 2026

*ಐತಿಚಂಡ ರಮೇಶ್ ಉತ್ತಪ್ಪಗೆ “ಯೋಗ ಕೌಸ್ತುಭ” ಪ್ರಶಸ್ತಿಯ ಗೌರವ**

ಜುಲೈ 19, 2026

*ಯುಕೊದಿಂದ ಪುಣ್ಯಸ್ಮರಣೆ ಕಾರ್ಯಕ್ರಮ : ಪಂದ್ಯಂಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ*

ಜುಲೈ 19, 2026

*ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೊಡಗು ಜಿಲ್ಲಾ ಘಟಕದ ಸಾಮಾನ್ಯ ಸಭೆ : ನೂತನ ಪದಾದಿಕಾರಿಗಳ ಪದಗ್ರಹಣ*

ಜುಲೈ 19, 2026

*ಮಡಿಕೇರಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ* 

ಜುಲೈ 19, 2026

*ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ ರೂ.3 ಕೋಟಿ ಅನುದಾನ*

ಜುಲೈ 19, 2026

*ತೆರಾಲು, ಬಿರುನಾಣಿ, ಮರೆನಾಡು ಮತ್ತಿತರ ಪ್ರದೇಶಗಳಿಗೆ ಭೇಟಿ : ಸಮಾಜದಲ್ಲಿ ಆದಿವಾಸಿಗಳು ಇತರರಂತೆ ಬದುಕು ಕಟ್ಟಿಕೊಳ್ಳಬೇಕು : ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ ಕರೆ*

ಜುಲೈ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.