Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾಗಮಂಡಲದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದ ‘ಆಜ್ಞಾ ಮುಹೂರ್ತ’; ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರೆಗೆ ಸಿದ್ಧತೆ*
  • *ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕುರಿತು ಶಾಸಕರೊಂದಿಗೆ ಚರ್ಚೆ*
  • *ಚೇರಂಬಾಣೆಯಲ್ಲಿ ಕೊಡವಲ್ಯಾಂಡ್ 5ನೇ ಶಾಂತಿಯುತ ಮಾನವ ಸರಪಳಿ; ಕೊಡವರ ಭೂಮಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಸ್ವಾಯತ್ತತೆ ಅಗತ್ಯ: ಎನ್.ಯು. ನಾಚಪ್ಪ*
  • *ಅ.7ರಂದು ಮಡಿಕೇರಿಯಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮ; ನಳಿನ್ ಕುಮಾರ್ ಕಟೀಲ್ ಭಾಷಣ; ಪ್ರಧಾನಿ ಮೋದಿ ಭಾಷಣ ನೇರ ಪ್ರಸಾರ*
  • *ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಅ.7ರಂದು ಬೃಹತ್ ವಾಹನ ಜಾಥಾ; ರೂ.11.50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ*
  • *ಕೆಸರು ಗದ್ದೆಯಲ್ಲಿ ಮರಾಟಿ ಬಾಂಧವರ ಸಂಭ್ರಮ; ನಮ್ಮ ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್*
  • *ಮಡಿಕೇರಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ : ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ*
  • *ಗೋಣಿಗದ್ದೆ ಹಾಡಿ ನಿವಾಸಿಗಳ ಪುನರ್ವಸತಿಗೆ ಮನವಿ*
  • *ವಿರಾಜಪೇಟೆಯಲ್ಲಿ ಯೋಗದಾ ಸತ್ಸಂಗ ಸೊಸೈಟಿಯಿಂದ ಮಾರ್ಗದರ್ಶಿತ ಧ್ಯಾನ ಮತ್ತು ಸತ್ಸಂಗ*
  • *ಏಷ್ಯನ್ ಗೇಮ್ಸ್ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿಕೆಶಿ ಸನ್ಮಾನ; ಚಿನ್ನದ ಪದಕಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ ನಗದು ಪುರಸ್ಕಾರ ಘೋಷಣೆ
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಅರಸು ಜನ್ಮ ದಿನಾಚರಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಅರಸು ಜನ್ಮ ದಿನಾಚರಣೆ*

ಆಗಷ್ಟ್ 20, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಆ.20 : ಯುವಶಕ್ತಿಗೆ ಸ್ಫೂರ್ತಿಯಾಗಿದ್ದ ದೇಶದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ನಿಲುವು ಸ್ಪಷ್ಟವಾಗಿತ್ತು. ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಆಡಳಿತದ ಮೌಲ್ಯಗಳು ಬಡವರ ಪರವಾಗಿತ್ತು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಬಣ್ಣಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾ ಪ್ರಚಾರ ಸಮಿತಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಡಿಕೇರಿ ಬ್ಲಾಕ್ ಪ್ರಚಾರ ಸಮಿತಿ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಸಂಯುಕ್ತಾಶ್ರಯದಲ್ಲಿ ರಾಜೀವ್ ಗಾಂಧಿ ಅವರ 84ನೇ ಜನ್ಮ ದಿನಾಚರಣೆ ಮತ್ತು ದೇವರಾಜ ಅರಸು ಅವರ 111 ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಟಿ.ಪಿ.ರಮೇಶ್ ಅವರು ದೇಶದ 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಯುವ ಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸಿದ ರಾಜೀವ್ ಗಾಂಧಿ ಅವರ ಆದರ್ಶ ಇತರರಿಗೆ ಮಾದರಿಯಾಗಿದೆ. ಬಡವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದ ದೇವರಾಜ ಅರಸು ಅವರ ಮೌಲ್ಯಗಳು ಶ್ರೇಷ್ಠವಾಗಿತ್ತು ಎಂದರು.
ಪಕ್ಷದ ಕಛೇರಿಯಲ್ಲಿ ನಡೆದ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಯೋಜಕ ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ ಹಂಸ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿ.ಜಿ ಮೋಹನ್, ಮಡಿಕೇರಿ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಅವರುಗಳು ರಾಜೀವ್ ಗಾಂಧಿ ಮತ್ತು ದೇವರಾಜ ಅರಸರ ಕುರಿತು ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ನಗರಾಧ್ಯಕ್ಷ ಜಿ.ಸಿ.ಜಗದೀಶ್ ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಕೆ.ಜಿ.ಪೀಟರ್, ಮಡಿಕೇರಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಮೂಡ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ನಗರ ಉಪಾಧ್ಯಕ್ಷ ಮುನೀರ್ ಮಾಚರ್, ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಪ್ರಧಾನ ಕಾರ್ಯದರ್ಶಿ ಪವಿತ್ರ, ಮೂಡಾ ಸದಸ್ಯರಾದ ಆರ್.ಪಿ.ಚಂದ್ರಶೇಖರ್ ಮತ್ತು ಮಿನಾಜ್ ಪ್ರವೀಣ್, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಫ್ಯಾನ್ಸಿ ಪಾರ್ವತಿ, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಉಪಾದ್ಯಕ್ಷೆ ಲೀಲಾ ಶೇಷಮ್ಮ, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್, ಪ್ರಮುಖರಾದ ಕೋಚನ ಹರಿಪ್ರಸಾದ್, ಮೇರಜನ ಕಿರಣ್, ವಸಂತ್ ಭಟ್, ಜಿ.ಆರ್.ರಾಜು, ರಿಯಾಜುದ್ದೀನ್, ಕೌಶರ್, ಸುಬ್ರಮಣಿ ಹೆಚ್.ಕೆ, ವಿಮಲ, ಮುಮ್ತಾಜ್ ಬೇಗಂ, ಧನಲಕ್ಷ್ಮಿ, ಕೀರ್ತನ, ಆಸಿಫ್, ಹ್ಯಾರಿಸ್, ಶಯ್ನಾಜ್, ಸುನಂದ, ಹಬೀಬ್, ಹುಸೇನ್, ಶರಣ್, ಆಶಾ ಮತ್ತಿತರರು ಉಪಸ್ಥಿತರಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಣ್ಣು ಹಂಪಲನ್ನು ವಿತರಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಭಾಗಮಂಡಲದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದ ‘ಆಜ್ಞಾ ಮುಹೂರ್ತ’; ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರೆಗೆ ಸಿದ್ಧತೆ*

ಅಕ್ಟೋಬರ್ 7, 2026

*ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕುರಿತು ಶಾಸಕರೊಂದಿಗೆ ಚರ್ಚೆ*

ಅಕ್ಟೋಬರ್ 6, 2026

*ಚೇರಂಬಾಣೆಯಲ್ಲಿ ಕೊಡವಲ್ಯಾಂಡ್ 5ನೇ ಶಾಂತಿಯುತ ಮಾನವ ಸರಪಳಿ; ಕೊಡವರ ಭೂಮಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಸ್ವಾಯತ್ತತೆ ಅಗತ್ಯ: ಎನ್.ಯು. ನಾಚಪ್ಪ*

ಅಕ್ಟೋಬರ್ 6, 2026

*ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕುರಿತು ಶಾಸಕರೊಂದಿಗೆ ಚರ್ಚೆ*

ಅಕ್ಟೋಬರ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.06: ಕೊಡಗು ಜಿಲ್ಲೆ ಅನುದಾನ ರಹಿತ ಶಾಲೆಗಳ ಒಕ್ಕೂಟದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು…

*ಚೇರಂಬಾಣೆಯಲ್ಲಿ ಕೊಡವಲ್ಯಾಂಡ್ 5ನೇ ಶಾಂತಿಯುತ ಮಾನವ ಸರಪಳಿ; ಕೊಡವರ ಭೂಮಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಸ್ವಾಯತ್ತತೆ ಅಗತ್ಯ: ಎನ್.ಯು. ನಾಚಪ್ಪ*

ಅಕ್ಟೋಬರ್ 6, 2026

*ಅ.7ರಂದು ಮಡಿಕೇರಿಯಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮ; ನಳಿನ್ ಕುಮಾರ್ ಕಟೀಲ್ ಭಾಷಣ; ಪ್ರಧಾನಿ ಮೋದಿ ಭಾಷಣ ನೇರ ಪ್ರಸಾರ*

ಅಕ್ಟೋಬರ್ 6, 2026

*ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಅ.7ರಂದು ಬೃಹತ್ ವಾಹನ ಜಾಥಾ; ರೂ.11.50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ*

ಅಕ್ಟೋಬರ್ 6, 2026

*ಕೆಸರು ಗದ್ದೆಯಲ್ಲಿ ಮರಾಟಿ ಬಾಂಧವರ ಸಂಭ್ರಮ; ನಮ್ಮ ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್*

ಅಕ್ಟೋಬರ್ 6, 2026

*ಮಡಿಕೇರಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ : ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ*

ಅಕ್ಟೋಬರ್ 6, 2026

*ಗೋಣಿಗದ್ದೆ ಹಾಡಿ ನಿವಾಸಿಗಳ ಪುನರ್ವಸತಿಗೆ ಮನವಿ*

ಅಕ್ಟೋಬರ್ 6, 2026

*ವಿರಾಜಪೇಟೆಯಲ್ಲಿ ಯೋಗದಾ ಸತ್ಸಂಗ ಸೊಸೈಟಿಯಿಂದ ಮಾರ್ಗದರ್ಶಿತ ಧ್ಯಾನ ಮತ್ತು ಸತ್ಸಂಗ*

ಅಕ್ಟೋಬರ್ 6, 2026

*ಏಷ್ಯನ್ ಗೇಮ್ಸ್ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿಕೆಶಿ ಸನ್ಮಾನ; ಚಿನ್ನದ ಪದಕಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ ನಗದು ಪುರಸ್ಕಾರ ಘೋಷಣೆ

ಅಕ್ಟೋಬರ್ 6, 2026

*ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ ದಿನಾಂಕ ಬದಲಾವಣೆ: ಅ.26ಕ್ಕೆ ರಜೆ ಘೋಷಿಸಿದ ಸರ್ಕಾರ; ಸಿಗಲಿದೆ 3 ದಿನ ಸರಣಿ ರಜೆ*

ಅಕ್ಟೋಬರ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.