ಮಡಿಕೇರಿ, NEWS DESK ಆ. 21 – ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗಾಳಿಬೀಡುವಿನ ಸಕಾ೯ರಿ ಪ್ರೌಡಶಾಲೆಯಲ್ಲಿ ವಿಶ್ವಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಗ್ರಾಮದ ಹಿರಿಯ ನಾಗರಿಕರಾದ ಎಂ.ಬಿ.ದೇವಯ್ಯ ರಾಮಪ್ಪ, ಚೋಂದಮ್ಮ ಅವರನ್ನ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು ,ಉಪಾಧ್ಯಕ್ಷರು ,ಸದಸ್ಯರು,ಪೋಷಕರು,ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಪಿ.ಆರ್. ರಾಜೇಶ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಹಾಜರಿದ್ದರು.

ರೋಟರಿ ಮಿಸ್ಟಿ ಹಿಲ್ಸ್ ನ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಹಿರಿಯರ ಮಹತ್ವದ ಬಗ್ಗೆ ,ಹಲವು ನಿದಶ೯ನಗಳ ಬಗ್ಗೆ ತಿಳಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಕಾವೇರಿ ಹಿರಿಯರನ್ನು ನಾವು ಹೇಗೆ ಗೌರವಿಸಿ ಅವರ ಮಾಗ೯ದಶ೯ನ ಪಡೆಯಬೇಕೇಂದು ಸಲಹೆ ನೀಡಿದರು. ಹೆಲೆನ್ ನಿಕ್ವೇರ ನಿರೂಪಿಸಿದರು. ಶಿಲ್ಪ ಸ್ವಾಗತಿಸಿ, ವಿನುತ ವಂದಿಸಿದರು. ಮಿಸ್ಟಿ ಹಿಲ್ಸ್ ನಿಕಟಪೂವ೯ ಅಧ್ಯಕ್ಷ ರತ್ನಾಕರ್ ರೈ, ವಲಯ ಸೇನಾನಿ ಮಧುಸೂದನ್ ನಿದೇ೯ಶಕರಾದ ಲಿಂಗರಾಜು, , ಕ್ಯಾರಿ ಕಾಯ೯ಪ್ಪ, ಸ್ನೇಹಿತ್,ಜಯಂತ್ ಪೂಜಾರಿ, ಗಿರೀಶ್ ಪಾಲ್ಗೊಂಡಿದ್ದರು.







