ಸುಂಟಿಕೊಪ್ಪ, NEWS DESK ಸೆ.2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜನತಾ ಕಾಲೋನಿ ನಿವಾಸಿ ಎಲ್.ಸಿ. ಅವರ ಕುಟುಂಬಕ್ಕೆ ನೆರವಿನ ಹಸ್ತ ನೀಡಲಾಯಿತು.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಎಲ್.ಸಿ. ಅವರ ಮನೆಯ ಗೋಡೆ ಕುಸಿತಗೊಂಡ ಹಿನ್ನೆಲೆಯಲ್ಲಿ, ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.10,000 ಸಹಾಯಧನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಸುಂಟಿಕೊಪ್ಪ ವಲಯದ ಮೇಲ್ವಿಚಾರಕರಾದ ಸಂತೋಷ್ ನಾಯಕ್, ಒಕ್ಕೂಟದ ಅಧ್ಯಕ್ಷೆ ಆರ್. ಶುಭ ಹಾಗೂ ಸೇವಾ ಪ್ರತಿನಿಧಿ ಎಂ.ಸಿ. ನಂದಿನಿ ಅವರು ಎಲ್.ಸಿ. ಅವರ ಮನೆಗೆ ಭೇಟಿ ನೀಡಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.







