
ಮಡಿಕೇರಿ ಸೆ.2 NEWS DESK : ಅಮ್ಮತೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳು ಗುಡ್ಡoಡ ಮುತ್ತಮ್ಮ ಟಿ, ಚೊಯಮಂಡ ವರ್ಣ ಎಂ, ನೆಲಚಂಡ ಪೊನ್ನಮ್ಮ ಎನ್, ಬೋವ್ವೆರಿಯoಡ ಹನ್ಸಿಕಾ ಪೊನ್ನಪ್ಪ ಬಿ,ರಾನಿ ಯ ತಸ್ಲಿನ್, ಎ. ಅಮ್ಮಕಂಡ ಆಂಚಲ್ ತಂಗಮ್ಮ, ಹೋಲೀಕ ಪಿ, ಬೇರೇರಾ ಶಿಯಾನ ಮುತ್ತಣ್ಣ, ತಾತಂಡ ಗ್ರಂಥ ಕಾವೇರಪ್ಪ, ನಾಯಕಂಡ ಮಾನ್ಯ ತಂಗಮ್ಮ. ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಮೋನಿಕಾ ಹಾಗೂ ಲಾವಣ್ಯ ರವರು ತರಬೇತಿಯನ್ನು ನೀಡಿರುತ್ತಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೇ ಶ್ ಬಿ.ಎಸ್, ಕಾರ್ಯದರ್ಶಿಯರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ. ಯು ಸಂಯೋಜಕಿಯಾದ ಅಮೃತ ಅರ್ಜುನ್ ಭೋದಕ ಬೋಧಕೇತರ ವೃಂದದವರು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿರುತ್ತಾರೆ.









