


ಮಡಿಕೇರಿ ಸೆ.2 NEWS DESK : ಅಮ್ಮತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಖೋ ಖೋ ವಿಭಾಗದಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಪುಗ್ಗೇರ ಗದಿನ್ ಬಿ. ಮೊಹಮ್ಮದ್ ಸಿನಾನ್ ಕೆ. ಎ, ಹುಮೈದ್ ಜೂಕಾಕೋ, ಮೊಹಮ್ಮದ್ ಅಬಿನಾಸ್ ಕೆ ಮುಜಮಿಲ್ ಎಂ.ಎಂ ಸುಮನ್ ರಾಜ್,ಅಕ್ಷಾನ್,ಯಶ್ವವಂತ್ ಬಿ. ಪಿ ಮೂಳಕಲ್ ದೈವಿಕ ಡಿ, ಚಾದಂಡ ಸೋಹನ್, ಕುಟ್ಟoಡ ಚಿರಾಗ್ ಚಂಗಪ್ಪ ಎಲ್, ಪೊಟ್ಟoಡ ಯಕ್ಷಿತ್ ಎಲ್, ಕೊಳ್ಳುವಾoಡ ಲವೀನ್ ಬೋಪಣ್ಣ. ಬಾಲಕಿಯರ ವಿಭಾಗದಲ್ಲಿ ಫಾತಿಮತ್ ಶಿಫಾ, ದಿಯಾ, ಹಂಸಿಕ, ಕಾಳೆಚಂಡ ದೇಚಮ್ಮ ಎಂ,ಪಟ್ಟಡ ದೇಚಮ್ಮ ಬಿ,ಹನ್ಸಿಕ,ನಿಯತಿ ರಾಜ ಪುರೋಹಿತ್, ಫಿದಾ ಫಾತಿಮಾ, ಕರ್ನoದ ಶತಕ ಕಾವೇರಮ್ಮ, ಕರ್ನಂದ ಕೃತಿಕ ಅಕ್ಕಮ ಕುಲ್ಲ ಚಂಡ ಭೂಮಿಕ ಭೋಜಮ್ಮ . ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಮೋನಿಕಾ ಹಾಗೂ ಲಾವಣ್ಯ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೇ ಶ್ ಬಿ.ಎಸ್, ಕಾರ್ಯದರ್ಶಿಯರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ. ಯು ಸಂಯೋಜಕಿಯಾದ ಅಮೃತ ಅರ್ಜುನ್ ಭೋದಕ ಬೋಧಕೇತರ ವೃಂದದವರು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.









