ಅಮ್ಮತ್ತಿ, NEWS DESK ಸೆ.03: ಅಮ್ಮತ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕಿಯರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ವಿಜೇತರಾಗಿ ತಾಲೂಕು ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ.
ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಪರವಾಗಿ ಮೇವಡ ಯಾನಿ ಬೆಳ್ಳಿಯಪ್ಪ, ಪುಗ್ಗೇರ ತಿಯಾರ ಮಂದಣ್ಣ, ಚೋವಂಡ ವನಿಯಾ ಪೂವಮ್ಮ, ನೇಮಿರ ಶಿಷ್ಟ ಎ., ಮೇವಡ ಪಂಚಮಿ ಕೆ., ಬಾಚೇಟ್ಟಿರ ಸೀತಮ್ಮ ಎಂ., ಕಂಚಿತಂಡ ಲಿವ್ಯ ಸಿ., ಹವ ಯೂಸೆಫ್ ಸಸ್ ಹಾಗೂ ತಾತಂಡ ಧನ್ವಿ ದೇಚಕ್ಕ ಟಿ. ಅವರು ಭಾಗವಹಿಸಿ ತಂಡದ ಗೆಲುವಿಗೆ ಕಾರಣರಾದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಸುದೇಶ್ ಬಿ.ಎಸ್. ಹಾಗೂ ಕಾರ್ಯದರ್ಶಿ ವಿನೋದ್ ಪಿ.ಎನ್. ಅವರು ಪಂದ್ಯವನ್ನು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಮೋನಿಕಾ ಹಾಗೂ ಶ್ರೀಮತಿ ಲಾವಣ್ಯ ಅವರು ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುದೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಪಿ.ಯು., ಸಂಯೋಜಕರಾದ ಅಮೃತ್ ಅರ್ಜುನ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ತಾಲೂಕು ಮಟ್ಟದ ಮುಂದಿನ ಪಂದ್ಯಾವಳಿಗೆ ಶುಭ ಹಾರೈಸಿದರು.








