
ವಿರಾಜಪೇಟೆ ಸೆ.2 NEWS DESK : ಅಮ್ಮತ್ತಿ ಒಂಟಿ ಅಂಗಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟದ ಖೋ ಖೋ ವಿಭಾಗದಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಪಾಲೇಯಂಡ ಶಾನ್ವಿ ಪೊನ್ನಪ್ಪ ಎಸ್, ಮಾಲೇಟ್ಟಿರ ಛಾಲ್ಸಿ ಜಿ,ನಡುಮನೆ ಮೋಕ್ಷಿತಾ, ಕಂಜಿತಂಡ ಲಿವ್ಯ ಸಿ, ಫಾತಿಮತ್ ಶಿಫಾ, ನೇಮಿರ ಶಿಷ್ಟ ಎ, ಜನನಿ ಎಸ್, ವೈಷ್ಣವಿ, ಶ್ರೇಯ ಎಂ.ಎಸ್, ತಾತಂಡ ಧನ್ವಿ ದೇಚಕ್ಕ ಟಿ, ಕಾಳೆಂಗಡ ದೃಶ್ಯ ಕಾವೇರಮ್ಮ, ನಫಿಸತ್ ಮಿಸ್ರಿಯ,ಶಜಾ ಫಾತಿಮಾ ಸ್ಪರ್ಧಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಹಿತಾರ್ಥ್ ಪಿ. ಜಿ, ಯಶ್ವಿನ್ ಸುಬ್ಬಯ್ಯ ಬಿ. ಎಲ್, ತನಿಶ್ ನಾನಯ್ಯ ಕನೀಶ್ ಪುಟ್ಟಪ್ಪ ಮೊಹಮ್ಮದ್ ದಿ ಯಾನ್, ನಜ್ವಾನ್ ಇಸ್ಮಾಯಿಲ್, ಮೊಹಮ್ಮದ್ ಜಿಧಾನ್, ಐಚoಡ ತಲಿಶ್ ತಿಮ್ಮಣ್ಣ, ಕರ್ನಂದ ಸನತ್ , ಹೃದಯ ಪಿ.ಜೆ,ಚಂಗ ಚಂಡ ಪ್ರಣಾಮ್, ಪಿ.ಎಸ್ ಗೌರವ್ ಕೃಷ್ಣನ್ ಸ್ಪರ್ಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಶ್ರೀಮತಿ ಮೋನಿಕಾ ಹಾಗೂ ಶ್ರೀಮತಿ ಲಾವಣ್ಯ ರವರು ತರಬೇತಿಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೇ ಶ್ ಬಿ.ಎಸ್, ಕಾರ್ಯದರ್ಶಿಯರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ. ಯು ಸಂಯೋಜಕಿಯಾದ ಅಮೃತ ಅರ್ಜುನ್ ಭೋದಕ ಬೋಧಕೇತರ ವೃಂದದವರು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.










