Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾರ್ಯಪ್ಪ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ; 65 ಯೂನಿಟ್ ರಕ್ತ ಸಂಗ್ರಹ*
  • *ವಿಭಾಗ ಮಟ್ಟದ ಹ್ಯಾಂಡ್ಬಾಲ್ ಪಂದ್ಯಾಟಕ್ಕೆ ಭಾಗಮಂಡಲ ವಸತಿ ಶಾಲೆ ವಿದ್ಯಾರ್ಥಿಗಳ ಆಯ್ಕೆ*
  • *ರೋಟರಿ ವುಡ್ಸ್ ನಿಂದ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ; ಪುಣ್ಯದ ಕೆಲಸವಾದ ಶಿಕ್ಷಕ ವೖತ್ತಿಯಲ್ಲಿರುವವರನ್ನು ಸಮಾಜ ಗೌರವಿಸಬೇಕು – ಬಿ.ಆರ್.ಜೋಯಪ್ಪ* 
  • *ಸೆ.12 ರಂದು ಸುಂಟಿಕೊಪ್ಪದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಮತ್ತು ಶೈಕ್ಷಣಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ*
  • *ನ.26 ರಂದು ಸಿಎನ್‌ಸಿಯಿಂದ ಭಾರತೀಯ ಸಂವಿಧಾನ ದಿನ ಮತ್ತು ಕೊಡವ ನ್ಯಾಷನಲ್ ಡೇ ಆಚರಣೆ*
  • **ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ಘೋಷಿಸಿ : ವಿಶ್ವ ತುಳುವ ಮಹಾಸಭಾ ಆಗ್ರಹ**
  • *ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ಘೋಷಿಸಿ : ವಿಶ್ವ ತುಳುವ ಮಹಾಸಭಾ ಆಗ್ರಹ*
  • *ಶಿಕ್ಷಕರ ದಿನಾಚರಣೆ: ಗೋಣಿಕೊಪ್ಪ ಕೆಪಿಎಸ್‌ನಲ್ಲಿ ಶಿಕ್ಷಕರಿಗೆ ಗೌರವ ಸನ್ಮಾನ*
  • *ಸರ್ವದೈವತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಥ್ರೋಬಾಲ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ*
  • **ಕೊಡಗು ವಿದ್ಯಾಲಯದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ**
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೋಟರಿ ವುಡ್ಸ್ ನಿಂದ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ; ಪುಣ್ಯದ ಕೆಲಸವಾದ ಶಿಕ್ಷಕ ವೖತ್ತಿಯಲ್ಲಿರುವವರನ್ನು ಸಮಾಜ ಗೌರವಿಸಬೇಕು – ಬಿ.ಆರ್.ಜೋಯಪ್ಪ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೋಟರಿ ವುಡ್ಸ್ ನಿಂದ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ; ಪುಣ್ಯದ ಕೆಲಸವಾದ ಶಿಕ್ಷಕ ವೖತ್ತಿಯಲ್ಲಿರುವವರನ್ನು ಸಮಾಜ ಗೌರವಿಸಬೇಕು – ಬಿ.ಆರ್.ಜೋಯಪ್ಪ* 

ಸೆಪ್ಟೆಂಬರ್ 10, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ, NEWS DESK ಸೆ. 10 – ಶಿಕ್ಷಕರ ವೖತ್ತಿಯು ಸಮಾಜದಲ್ಲಿ ಪುಣ್ಯದ ಕೆಲಸವಾಗಿದ್ದು, ಈ ವೖತ್ತಿಯಲ್ಲಿ ತೊಡಗಿಸಿಕೊಂಡವರನ್ನು ಸಮಾಜ ಗೌರವಿಸಬೇಕೆಂದು ನಿವೖತ್ತ ಮುಖ್ಯೋಪಾಧ್ಯಾಯ ಮತ್ತು ಸಾಹಿತಿ ಬಾರಿಯಂಡ ಜೋಯಪ್ಪ ಕರೆ ನೀಡಿದ್ದಾರೆ.
ನಗರದಲ್ಲಿ ರೋಟರಿ ವುಡ್ಸ್ ವತಿಯಿಂದ ಆಯೋಜಿತ ಶಿಕ್ಷಕರ ದಿನಾಚರಣೆ ಅಂಗವಾಗಿನ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿದ ಬಿ. ಆರ್. ಜೋಯಪ್ಪ, ಶಿಕ್ಷಕರಿಗೆ ದಿನನಿತ್ಯ ಸಮಾಜದ ಜನರಿಂದ ಮತ್ತು ವಿದ್ಯಾಥಿ೯ಗಳಿಂದ ದೊರಕುವ ಗೌರವಪೂವ೯ಕವಾಗಿನ ನಮಸ್ಕಾರ ಸಮಾಜದ ಇತರ ವೖತ್ತಿಯಲ್ಲಿ ಇರುವವರಿಗೆ ದೊರಕುವುದಿಲ್ಲ. ಶಿಕ್ಷಕರನ್ನು ಜನತೆ ಸದಾ ಗೌರವ ಭಾವದಿಂದಲೇ ಕಾಣುತ್ತಾರೆ. ಹೀಗಿರುವಾಗ ಶಿಕ್ಷಕರು ಕೂಡ ತಮ್ಮ ವೖತ್ತಿ ಗೌರವವನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು. ಪಾಠದಂತೆ ಪಠ್ಯೇತರ ಚಟುವಟಿಕೆಗಳಿಗೂ ಶಾಲೆಗಳಲ್ಲಿ ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದ ಜೋಯಪ್ಪ, ಶಾಲೆಗಳಲ್ಲಿ ಸಾಹಿತ್ಯಿಕ ಕಾಯ೯ಕ್ರಮಗಳನ್ನು ಹೆಚ್ಚು ಆಯೋಜಿಸುವ ಮೂಲಕ ವಿದ್ಯಾಥಿ೯ಗಳಲ್ಲಿನ ಸೖಜನಶೀಲತೆಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ಹಿಂದಿನ ಕಾಲದಲ್ಲಿ ಗುರುಗಳಿಗೆ ದೊರಕುತ್ತಿದ್ದ ಗೌರವ ಮಯಾ೯ದೆ ಈಗಿನ ಕಾಲದಲ್ಲಿ ವಿದ್ಯಾಥಿ೯ಗಳಿಂದ ನಿರೀಕ್ಷಿಸುವುದು ಕಷ್ಟಸಾಧ್ಯ ಬದಲಾದ ಕಾಲಮಾನದಲ್ಲಿ ಶಿಕ್ಷಕರ ಮಹತ್ವವನ್ನು ವಿದ್ಯಾಥಿ೯ಗಳಿಗೆ ತಿಳಿಸಿಕೊಡುವಲ್ಲಿ ಪೋಷಕರು ಕೂಡ ವಿಫಲರಾಗಿದ್ದಾರೆ ಎಂದೂ ಬಿ. ಆರ್ ಜೋಯಪ್ಪ ವಿಷಾಧಿಸಿದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ಎಂ.ಡಿ. ರಂಗಸ್ವಾಮಿ ಮಾತನಾಡಿ, ವ್ಯಕ್ತಿ ನಿಮಾ೯ಣದ ಮೂಲಕವೇ ದೇಶ ಕೂಡ ನಿಮಾ೯ಣವಾಗುತ್ತದೆ. ಹೀಗಿರುವಾಗ ದೇಶಕ್ಕೆ ಸತ್ಪ೯ಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿವ೯ಹಿಸುವ ಶಿಕ್ಷಕರನ್ನು ನಾವೆಲ್ಲಾ ಸದಾ ಗೌರವಿಸಬೇಕೆಂದು ಕರೆ ನೀಡಿದರು. ಸಕಾ೯ರಿ ಶಾಲೆಗಳಲ್ಲಿಶಿಕ್ಷಕರು ಸಾಕಷ್ಟು ಕಾಯ೯ಗಳ ಒತ್ತಡದಿಂದಲೇ ಕಾಯ೯ನಿವ೯ಹಿಸುವ ನಡುವೇ ವಿದ್ಯಾಥಿ೯ಗಳಿಗೆ ವಿದ್ಯಾಜ೯ನೆ ಮಾಡುವ ಪವಿತ್ರತೆ ಉಳಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ರೋಟರಿ ವಲಯ ಸೇನಾನಿ ವಸಂತ್ ಕುಮಾರ್ ಮಾತನಾಡಿ, ಸಮಾಜಕ್ಕೆ ಸದಾ ಪ್ರೇರಣದಾಯಕರಾಗಿರುವ ಶಿಕ್ಷಕರನ್ನು ರೋಟರಿ ಸಂಸ್ಥೆಗಳು ಪ್ರತೀ ವಷ೯ ಸೆಪ್ಟೆಂಬರ್ ಮಾಹೆಯಲ್ಲಿ ನೇಷನ್ ಬಿಲ್ಡರ್ ಪ್ರಶಸ್ತಿ ಮೂಲಕ ಗೌರವಿಸುತ್ತಿದೆ. ರೋಟರಿ ನೀಡುವ ಈ ಪ್ರಶಸ್ತಿಯು ಗೌರವಯುತವಾಗಿದ್ದು ಪ್ರತೀ ವಷ೯ವೂ ಅತ್ಯುತ್ತಮ ಆಯ್ಕೆ ಆಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ವಿದ್ಯಾಥಿ೯ಗಳೇ ಸದಾ ಶಿಕ್ಷಕರಿಗೆ ಸ್ಪೂತಿ೯ಯಾಗಿದ್ದಾರೆ.
ಈ ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ರೋಟರಿ ವುಡ್ಸ್ ನಿದೇ೯ಶಕರಾದ ಎಸ್.ಡಿ. ಪ್ರಶಾಂತ್ ಅವರನ್ನೂ ಸನ್ಮಾನಿಸಲಾಯಿತು. ಕೊಡಗು ಡೆಕೋರೇಟರ್ಸ್ ಅಸೋಸಿಯೇಷನ್ ಸ್ಫಾಪಕಾಧ್ಯಕ್ಷರಾದ ರೋಟರಿ ವುಡ್ಸ್ ನಿದೇ೯ಶಕ ಅಜ್ಜೇಟಿರ ಲೋಕೇಶ್ ಅವರನ್ನೂ ಕಾಯ೯ಕ್ರಮದಲ್ಲಿ ಗೌರವಿಸಲಾಯಿತು.
ರೋಟರಿ ವುಡ್ಸ್ ನಿಂದ ಆಯೋಜಿತ ಬೈಕ್ ರೈಡ್ ನ ಪೋಸ್ಟರ್ ಮತ್ತು ಲೋಗೋವನ್ನೂ ಅನಾವರಣಗೊಳಿಸಲಾಯಿತು. ರೋಟರಿ ವುಡ್ಸ್ ನ ವಾತಾ೯ ಸಂಚಿಕೆಯನ್ನೂ ವಾತಾ೯ಸಂಚಿಕೆ ಸಂಪಾದಕ ವಿನು ಈರಪ್ಪ ನೇತೖತ್ವದಲ್ಲಿ ಲೋಕಾಪ೯ಣೆಗೊಳಿಸಲಾಯಿತು.
ರೋಟರಿ ಜಿಲ್ಲಾ ನಿದೇ೯ಶಕ ಅನಿಲ್ ಹೆಚ್.ಟಿ, ರೋಟರಿ ಪ್ರಮುಖರಾದ ಬಿ.ಜಿ. ಅನಂತಶಯನ, ಎಸ್.ಎಸ್ ಸಂಪತ್ ಕುಮಾರ್ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಸ್ವಾಗತಿಸಿ, ಕಾಯ೯ದಶಿ೯ ಸ್ಮಿತಾ ಚಂಗಪ್ಪ ವಂದಿಸಿದರು
ಸನ್ಮಾನಿತರು –
ರೋಟರಿ ವುಡ್ಸ್ ವತಿಯಿಂದ ಐವರು ಶಿಕ್ಷಕಿಯರನ್ನು ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಯಿತು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಕಡಗದಾಳು ಶಾಲಾ ಶಿಕ್ಷಕಿ ಹೆಚ್.ಎಸ್.ಭಾರತಿ, ಎಮ್ಮೆಮಾಡು ಶಾಲಾ ಶಿಕ್ಷಕಿ ರಮ್ಯಾ,   ಕುಶಾಲನಗರ ಸಕಾ೯ರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಭಾರತೀ ಪ್ರಸನ್ನ, ಎ.ಎಲ್.ಎಸ್. ಕ್ರೆಸೆಂಟ್ .. ಶಾಲಾ ಪ್ರಾಂಶುಪಾಲೆ ಶಿಕ್ಷಕಿ ಜಾಯ್ಸಿ ವಿನಯ್ ಅವರನ್ನು ಸನ್ಮಾನಿಸಲಾಯಿತು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾರ್ಯಪ್ಪ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ; 65 ಯೂನಿಟ್ ರಕ್ತ ಸಂಗ್ರಹ*

ಸೆಪ್ಟೆಂಬರ್ 10, 2026

*ವಿಭಾಗ ಮಟ್ಟದ ಹ್ಯಾಂಡ್ಬಾಲ್ ಪಂದ್ಯಾಟಕ್ಕೆ ಭಾಗಮಂಡಲ ವಸತಿ ಶಾಲೆ ವಿದ್ಯಾರ್ಥಿಗಳ ಆಯ್ಕೆ*

ಸೆಪ್ಟೆಂಬರ್ 10, 2026

*ಸೆ.12 ರಂದು ಸುಂಟಿಕೊಪ್ಪದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಮತ್ತು ಶೈಕ್ಷಣಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ*

ಸೆಪ್ಟೆಂಬರ್ 10, 2026

*ವಿಭಾಗ ಮಟ್ಟದ ಹ್ಯಾಂಡ್ಬಾಲ್ ಪಂದ್ಯಾಟಕ್ಕೆ ಭಾಗಮಂಡಲ ವಸತಿ ಶಾಲೆ ವಿದ್ಯಾರ್ಥಿಗಳ ಆಯ್ಕೆ*

ಸೆಪ್ಟೆಂಬರ್ 10, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಭಾಗಮಂಡಲ, NEWS DESK ಸೆ.10: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಪೋಕ್ಲುವಿನಲ್ಲಿ ನಡೆದ ಜಿಲ್ಲಾ ಮಟ್ಟದ…

*ರೋಟರಿ ವುಡ್ಸ್ ನಿಂದ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ; ಪುಣ್ಯದ ಕೆಲಸವಾದ ಶಿಕ್ಷಕ ವೖತ್ತಿಯಲ್ಲಿರುವವರನ್ನು ಸಮಾಜ ಗೌರವಿಸಬೇಕು – ಬಿ.ಆರ್.ಜೋಯಪ್ಪ* 

ಸೆಪ್ಟೆಂಬರ್ 10, 2026

*ಸೆ.12 ರಂದು ಸುಂಟಿಕೊಪ್ಪದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಮತ್ತು ಶೈಕ್ಷಣಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ*

ಸೆಪ್ಟೆಂಬರ್ 10, 2026

*ನ.26 ರಂದು ಸಿಎನ್‌ಸಿಯಿಂದ ಭಾರತೀಯ ಸಂವಿಧಾನ ದಿನ ಮತ್ತು ಕೊಡವ ನ್ಯಾಷನಲ್ ಡೇ ಆಚರಣೆ*

ಸೆಪ್ಟೆಂಬರ್ 10, 2026

**ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ಘೋಷಿಸಿ : ವಿಶ್ವ ತುಳುವ ಮಹಾಸಭಾ ಆಗ್ರಹ**

ಸೆಪ್ಟೆಂಬರ್ 10, 2026

*ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ಘೋಷಿಸಿ : ವಿಶ್ವ ತುಳುವ ಮಹಾಸಭಾ ಆಗ್ರಹ*

ಸೆಪ್ಟೆಂಬರ್ 10, 2026

*ಶಿಕ್ಷಕರ ದಿನಾಚರಣೆ: ಗೋಣಿಕೊಪ್ಪ ಕೆಪಿಎಸ್‌ನಲ್ಲಿ ಶಿಕ್ಷಕರಿಗೆ ಗೌರವ ಸನ್ಮಾನ*

ಸೆಪ್ಟೆಂಬರ್ 10, 2026

*ಸರ್ವದೈವತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಥ್ರೋಬಾಲ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 10, 2026

**ಕೊಡಗು ವಿದ್ಯಾಲಯದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ**

ಸೆಪ್ಟೆಂಬರ್ 10, 2026

*ಕೊಡಗು ವಿದ್ಯಾಲಯದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ*  

ಸೆಪ್ಟೆಂಬರ್ 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.