ಸುಂಟಿಕೊಪ್ಪ, NEWS DESK ಸೆ.11: ಟೀಮ್ ಅರ್ಜುನ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ದಸರಾ ಹಬ್ಬದ ಪ್ರಯುಕ್ತ ಅ.16ರಿಂದ 18ರವರೆಗೆ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ನೂತನ ಪದಾಧಿಕಾರಿಗಳ ಆಯ್ಕೆ
ಟೀಮ್ ಅರ್ಜುನ ತಂಡದ ನೂತನ ಅಧ್ಯಕ್ಷರಾಗಿ ಕೆ.ಎ. ಮಹಮ್ಮದ್ ಆಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹರ್ಷತ್, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜು (ಜೂಚು), ಸಹ ಕಾರ್ಯದರ್ಶಿಯಾಗಿ ಅಯ್ಯಪ್ಪ, ಖಜಾಂಚಿಯಾಗಿ ಸಿ.ಎ. ಸಚಿನ್, ಸಹ ಖಜಾಂಚಿಯಾಗಿ ಪ್ರವೀಣ್, ಕ್ರೀಡಾ ಕಾರ್ಯದರ್ಶಿಗಳಾಗಿ ಸಂಶಾದ್ ಹಾಗೂ ಕೇಶವ ಅವರನ್ನು ನೇಮಕ ಮಾಡಲಾಗಿದೆ.
ಮೈದಾನದ ಉಸ್ತುವಾರಿಗಳಾಗಿ ಪ್ರಜ್ವಲ್, ಸ್ವಾಮಿ ಹಾಗೂ ಅವಿನಾಶ್, ವೇದಿಕೆ ಸಮಿತಿಯ ಉಸ್ತುವಾರಿಗಳಾಗಿ ಇಬ್ರಾಹಿಂ, ಜಗತ್ (ಚಿಟ್ಟೆ), ದರ್ಶನ್ ಹಾಗೂ ಆರಿಫ್ ಅವರನ್ನು ನೇಮಕಗೊಳಿಸಲಾಗಿದೆ.
ಸಲಹೆಗಾರರಾಗಿ ಜಸ್ಟಿನ್, ಈಶ್ವರ್, ಪ್ರಶಾಂತ್ (ಗೋಪು) ಹಾಗೂ ಪ್ರವೀಣ್ (ತೋಕು), ಸದಸ್ಯರಾಗಿ ನವೀನ, ಅಭಿ, ಕೃತಿಕ್, ಸಚಿನ್, ಸಹದ್ ಹಾಗೂ ವಿಪಿನ್ (ಕುಟ್ಟ) ಅವರನ್ನು ನೇಮಕ ಮಾಡಲಾಗಿದೆ.








