ಸೋಮವಾರಪೇಟೆ, NEWS DESK ಸೆ.11: ಹೋಮ್‌ಸ್ಟೇ ಅಸೋಸಿಯೇಷನ್, ಸೋಮವಾರಪೇಟೆ ವತಿಯಿಂದ ಕೇರಳದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಿಗೆ ಎರಡು ದಿನಗಳ ಅಧ್ಯಯನ ಪ್ರವಾಸವನ್ನು ಆಯೋಜಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಅವರು ಪ್ರವಾಸಕ್ಕೆ ಚಾಲನೆ ನೀಡಿದರು.
ಪ್ರವಾಸದ ಸಂದರ್ಭದಲ್ಲಿ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಲಾಯಿತು. ಅಲ್ಲಿನ ಪ್ರವಾಸೋದ್ಯಮ ವ್ಯವಸ್ಥೆ, ಹೋಮ್‌ಸ್ಟೇ ಚಟುವಟಿಕೆಗಳು ಹಾಗೂ ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಅಸೋಸಿಯೇಷನ್ ಸದಸ್ಯರು ಅಧ್ಯಯನ ನಡೆಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್ ಎಸ್.ಎಲ್., ಖಜಾಂಚಿ ಪ್ರೀತಮ್ ಡಿ.ಪಿ. ಸೇರಿದಂತೆ ಅಸೋಸಿಯೇಷನ್‌ನ ಎಲ್ಲಾ ಸದಸ್ಯರು ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದರು.







