Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಚೇರಂಬಾಣೆಯಲ್ಲಿ ಕೊಡವಲ್ಯಾಂಡ್ 5ನೇ ಶಾಂತಿಯುತ ಮಾನವ ಸರಪಳಿ; ಕೊಡವರ ಭೂಮಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಸ್ವಾಯತ್ತತೆ ಅಗತ್ಯ: ಎನ್.ಯು. ನಾಚಪ್ಪ*
  • *ಅ.7ರಂದು ಮಡಿಕೇರಿಯಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮ; ನಳಿನ್ ಕುಮಾರ್ ಕಟೀಲ್ ಭಾಷಣ; ಪ್ರಧಾನಿ ಮೋದಿ ಭಾಷಣ ನೇರ ಪ್ರಸಾರ*
  • *ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಅ.7ರಂದು ಬೃಹತ್ ವಾಹನ ಜಾಥಾ; ರೂ.11.50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ*
  • *ಕೆಸರು ಗದ್ದೆಯಲ್ಲಿ ಮರಾಟಿ ಬಾಂಧವರ ಸಂಭ್ರಮ; ನಮ್ಮ ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್*
  • *ಮಡಿಕೇರಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ : ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ*
  • *ಗೋಣಿಗದ್ದೆ ಹಾಡಿ ನಿವಾಸಿಗಳ ಪುನರ್ವಸತಿಗೆ ಮನವಿ*
  • *ವಿರಾಜಪೇಟೆಯಲ್ಲಿ ಯೋಗದಾ ಸತ್ಸಂಗ ಸೊಸೈಟಿಯಿಂದ ಮಾರ್ಗದರ್ಶಿತ ಧ್ಯಾನ ಮತ್ತು ಸತ್ಸಂಗ*
  • *ಏಷ್ಯನ್ ಗೇಮ್ಸ್ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿಕೆಶಿ ಸನ್ಮಾನ; ಚಿನ್ನದ ಪದಕಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ ನಗದು ಪುರಸ್ಕಾರ ಘೋಷಣೆ
  • *ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ ದಿನಾಂಕ ಬದಲಾವಣೆ: ಅ.26ಕ್ಕೆ ರಜೆ ಘೋಷಿಸಿದ ಸರ್ಕಾರ; ಸಿಗಲಿದೆ 3 ದಿನ ಸರಣಿ ರಜೆ*
  • *ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು; 3 ದಿನಗಳ ರಾಷ್ಟ್ರೀಯ ಶೋಕಾಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*

ಸೆಪ್ಟೆಂಬರ್ 11, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ, NEWS DESK ಸೆ.11: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯ ಕವಿಗಳು ಮತ್ತು ಸಾಹಿತಿಗಳ ಸಾಹಿತ್ಯದಲ್ಲಿ ಪಶ್ಚಿಮಘಟ್ಟದ ಪ್ರಕೃತಿ, ಪರಿಸರ, ಜೀವನದಿ ಕಾವೇರಿ, ಜನಪದ, ಸಂಸ್ಕೃತಿ ಹಾಗೂ ಪರಂಪರೆಗೆ ಪ್ರಮುಖ ಸ್ಥಾನ ದೊರೆತಿದೆ ಎಂದು ಚಿಂತಕ ಹಾಗೂ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.), ಕುಶಾಲನಗರ ತಾಲ್ಲೂಕು ಕ.ಸಾ.ಪ. ಘಟಕ ಹಾಗೂ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ತ್ರಿವೇಣಿ ತ್ರಿಭಾಷಾ ಸಂಘದ ಸಂಯುಕ್ತಾಶ್ರಯದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಕೊಡಗು’ ಎಂಬ ವಿಷಯ ಕುರಿತು ಆಯೋಜಿಸಿದ್ದ ಕೆ.ಟಿ. ಸುಬ್ಬರಾವ್ ಅವರ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಡಗಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಮಾತನಾಡಿದ ಅವರು, ಜಿಲ್ಲೆ ಕಂಡ ಹೆಸರಾಂತ ಕಥೆಗಾರ್ತಿ ಕೊಡಗಿನ ಗೌರಮ್ಮ, ಹಿರಿಯ ಕವಿ ಹರದಾಸ ಅಪ್ಪಚ್ಚು ಕವಿ, ಕವಿ ಪಂಜೆ ಮಂಗೇಶರಾಯರು, ಸಾಹಿತಿ ಭಾರತೀಸುತ ಸೇರಿದಂತೆ ಇಂದಿನ ಹೊಸ ತಲೆಮಾರಿನ ಉದಯೋನ್ಮುಖ ಸಾಹಿತಿಗಳ ಸಾಹಿತ್ಯ ರಚನೆ ಹಾಗೂ ಬೆಳವಣಿಗೆಗೆ ಕೊಡಗಿನ ಪ್ರಾಕೃತಿಕ ಸೌಂದರ್ಯ ಸ್ಪೂರ್ತಿ ಮತ್ತು ಚೈತನ್ಯ ನೀಡಿದೆ ಎಂದರು.

ಕೊಡಗಿನ ನೆಲ, ಜಲ, ಪ್ರಾಕೃತಿಕ ಸನ್ನಿವೇಶ ಹಾಗೂ ಕೊಡವ ಕಲೆ, ಸಂಸ್ಕೃತಿ ಮತ್ತು ಪರಂಪರೆಗಳು ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿವೆ. ವಿಶೇಷವಾಗಿ ಹುತ್ತರಿ ಹಾಡುಗಳಲ್ಲಿ ಕೊಡಗಿನ ಪ್ರಾಕೃತಿಕ ಸನ್ನಿವೇಶಗಳನ್ನು ಚೆನ್ನಾಗಿ ಬಿಂಬಿಸುವ ಮೂಲಕ ಕೊಡಗಿನ ಶೌರ್ಯವನ್ನು ಚಿತ್ರಿಸಲಾಗಿದೆ ಎಂದು ಉ.ರಾ. ನಾಗೇಶ್ ಹೇಳಿದರು.

ಪಶ್ಚಿಮಘಟ್ಟದ ಜೀವನದಿ ಕಾವೇರಿ ಹಾಗೂ ಕೊಡಗಿನ ಪ್ರಕೃತಿ ಸೌಂದರ್ಯವೇ ಜಿಲ್ಲೆಯ ಸಾಹಿತಿಗಳು ಮತ್ತು ಕವಿಗಳಿಗೆ ಸಾಹಿತ್ಯ ರಚನೆಗೆ ಪ್ರೇರಣೆ ಹಾಗೂ ಸ್ಪೂರ್ತಿ ನೀಡಿದೆ ಎಂದರು.

ಕೊಡಗಿನಲ್ಲಿ ಸಾಹಿತ್ಯದ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಮನಸ್ಸುಗಳು ಜತೆಗೂಡಿ ಶ್ರಮಿಸುತ್ತಿವೆ. ಜಿಲ್ಲೆಯ ಸಾಹಿತಿಗಳಲ್ಲದೆ, ಹೊರಗಿನಿಂದ ಜಿಲ್ಲೆಗೆ ಬಂದ ಅನೇಕ ಕವಿಗಳು ಹಾಗೂ ಸಾಹಿತಿಗಳೂ ಉತ್ತಮ ಸಾಹಿತ್ಯ ರಚನೆಯ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಂಡಾಗ ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಎಸ್.ಜಿ. ನಾಗರತ್ನ ಮಾತನಾಡಿ, ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದ ಬಗ್ಗೆ ಅಭಿರುಚಿ ಬೆಳೆಸುವುದರೊಂದಿಗೆ ಕನ್ನಡ ನಾಡು-ನುಡಿಯ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕನ್ನಡ ಸಾಹಿತ್ಯವು ಮಕ್ಕಳಲ್ಲಿ ಭಾಷಾ ಜ್ಞಾನ, ಬರವಣಿಗೆ ಕೌಶಲ್ಯ, ನೈತಿಕತೆ ಹಾಗೂ ಕಲ್ಪನಾ ಶಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಮಹಿಳಾ ಬರಹಗಾರ್ತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಕೊಡಗಿನ ಸಾಹಿತಿಗಳ ಕುರಿತು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಇಂತಹ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯೊಂದಿಗೆ ಭಾಷಾ ಪ್ರೇಮವನ್ನು ಬೆಳೆಸಲು ನೆರವಾಗುತ್ತವೆ ಎಂದರು.

ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಜೆ. ರವಿಕಿರಣ್, ತಾಲ್ಲೂಕು ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್. ಕಾಳಪ್ಪ, ಕಸಾಪ ಸದಸ್ಯರಾದ ಸೂದನ ರತ್ನಾವತಿ, ಲೀಲಾಕುಮಾರಿ ತೊಡಿಕಾನ, ಶಿಕ್ಷಕಿಯರಾದ ಕೆ.ಆರ್. ದೇವಕಿ, ಬಿ.ಬಿ. ಹೇಮಲತಾ, ಎನ್.ಜಿ. ನಂದಿನಿ ಹಾಗೂ ಎಂ.ಪಿ. ರಶ್ಮಿ ಇದ್ದರು. ವಿದ್ಯಾರ್ಥಿನಿ ದುರ್ಗಾ ಪರಮೇಶ್ವರಿ ಹಾಗೂ ತಂಡದ ಸದಸ್ಯರು ಗೀತೆ ಹಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚಿತ್ರ 1: ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮದಲ್ಲಿ ಚಿಂತಕ ಉ.ರಾ. ನಾಗೇಶ್ ಉಪನ್ಯಾಸ ನೀಡಿದರು. ಉಪ ಪ್ರಾಂಶುಪಾಲರಾದ ಎಸ್.ಜಿ. ನಾಗರತ್ನ, ಟಿ.ಜಿ. ಪ್ರೇಮಕುಮಾರ್, ಕೆ.ಎಸ್. ನಾಗೇಶ್, ಫ್ಯಾನ್ಸಿ ಮುತ್ತಣ್ಣ, ರವಿಕಿರಣ್, ಎಂ.ಎನ್. ಚಂದ್ರಮೋಹನ್ ಹಾಗೂ ಕೆ.ವಿ. ಉಮೇಶ್ ಇದ್ದಾರೆ.

ಚಿತ್ರ 2: ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮವನ್ನು ಉಪ ಪ್ರಾಂಶುಪಾಲರಾದ ಎಸ್.ಜಿ. ನಾಗರತ್ನ ಉದ್ಘಾಟಿಸಿದರು. ಚಿಂತಕ ಉ.ರಾ. ನಾಗೇಶ್, ಟಿ.ಜಿ. ಪ್ರೇಮಕುಮಾರ್, ಕೆ.ಎಸ್. ನಾಗೇಶ್, ಫ್ಯಾನ್ಸಿ ಮುತ್ತಣ್ಣ, ರವಿಕಿರಣ್, ಎಂ.ಎನ್. ಚಂದ್ರಮೋಹನ್ ಹಾಗೂ ಕೆ.ವಿ. ಉಮೇಶ್ ಇದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

*ಚೇರಂಬಾಣೆಯಲ್ಲಿ ಕೊಡವಲ್ಯಾಂಡ್ 5ನೇ ಶಾಂತಿಯುತ ಮಾನವ ಸರಪಳಿ; ಕೊಡವರ ಭೂಮಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಸ್ವಾಯತ್ತತೆ ಅಗತ್ಯ: ಎನ್.ಯು. ನಾಚಪ್ಪ*

ಅಕ್ಟೋಬರ್ 6, 2026

*ಅ.7ರಂದು ಮಡಿಕೇರಿಯಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮ; ನಳಿನ್ ಕುಮಾರ್ ಕಟೀಲ್ ಭಾಷಣ; ಪ್ರಧಾನಿ ಮೋದಿ ಭಾಷಣ ನೇರ ಪ್ರಸಾರ*

ಅಕ್ಟೋಬರ್ 6, 2026

*ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಅ.7ರಂದು ಬೃಹತ್ ವಾಹನ ಜಾಥಾ; ರೂ.11.50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ*

ಅಕ್ಟೋಬರ್ 6, 2026

*ಅ.7ರಂದು ಮಡಿಕೇರಿಯಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮ; ನಳಿನ್ ಕುಮಾರ್ ಕಟೀಲ್ ಭಾಷಣ; ಪ್ರಧಾನಿ ಮೋದಿ ಭಾಷಣ ನೇರ ಪ್ರಸಾರ*

ಅಕ್ಟೋಬರ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.6: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ಥಕ ರಾಜಕೀಯ ಜೀವನದ ಗೌರವಾರ್ಥ…

*ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಅ.7ರಂದು ಬೃಹತ್ ವಾಹನ ಜಾಥಾ; ರೂ.11.50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ*

ಅಕ್ಟೋಬರ್ 6, 2026

*ಕೆಸರು ಗದ್ದೆಯಲ್ಲಿ ಮರಾಟಿ ಬಾಂಧವರ ಸಂಭ್ರಮ; ನಮ್ಮ ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್*

ಅಕ್ಟೋಬರ್ 6, 2026

*ಮಡಿಕೇರಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ : ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ*

ಅಕ್ಟೋಬರ್ 6, 2026

*ಗೋಣಿಗದ್ದೆ ಹಾಡಿ ನಿವಾಸಿಗಳ ಪುನರ್ವಸತಿಗೆ ಮನವಿ*

ಅಕ್ಟೋಬರ್ 6, 2026

*ವಿರಾಜಪೇಟೆಯಲ್ಲಿ ಯೋಗದಾ ಸತ್ಸಂಗ ಸೊಸೈಟಿಯಿಂದ ಮಾರ್ಗದರ್ಶಿತ ಧ್ಯಾನ ಮತ್ತು ಸತ್ಸಂಗ*

ಅಕ್ಟೋಬರ್ 6, 2026

*ಏಷ್ಯನ್ ಗೇಮ್ಸ್ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿಕೆಶಿ ಸನ್ಮಾನ; ಚಿನ್ನದ ಪದಕಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ ನಗದು ಪುರಸ್ಕಾರ ಘೋಷಣೆ

ಅಕ್ಟೋಬರ್ 6, 2026

*ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ ದಿನಾಂಕ ಬದಲಾವಣೆ: ಅ.26ಕ್ಕೆ ರಜೆ ಘೋಷಿಸಿದ ಸರ್ಕಾರ; ಸಿಗಲಿದೆ 3 ದಿನ ಸರಣಿ ರಜೆ*

ಅಕ್ಟೋಬರ್ 6, 2026

*ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು; 3 ದಿನಗಳ ರಾಷ್ಟ್ರೀಯ ಶೋಕಾಚರಣೆ*

ಅಕ್ಟೋಬರ್ 6, 2026

*ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ*

ಅಕ್ಟೋಬರ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.