ಸಂಪಾಜೆ, NEWS DESK ಸೆ.15: ಸಂಪಾಜೆ ಭಾಗದ ಬಿಜೆಪಿ ಮುಖಂಡರಾಗಿದ್ದ ದಿವಂಗತ ಕೆದಂಬಾಡಿ ಜಗದೀಶ್ ಅವರ ನಿವಾಸಕ್ಕೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ದಿವಂಗತ ಜಗದೀಶ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪೊನ್ನಣ್ಣ ಅವರು, ಕುಟುಂಬಸ್ಥರೊಂದಿಗೆ ದುಃಖ ಹಂಚಿಕೊಂಡರು. ಜಗದೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.








