Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರ ಉದ್ಘಾಟನೆ*
  • *ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಹಣ ವಸೂಲಿ : ಕೊಡಗು ಪೊಲೀಸರ ಎಚ್ಚರಿಕೆ*
  • *ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*
  • *ವಿರಾಜಪೇಟೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಪವಿತ್ರ ಗೆಜ್ಜೆ ಪೂಜೆ*
  • *ಶ್ರೀ ಬಸವೇಶ್ವರ ದೇವಾಲಯದಲ್ಲಿ ‘ವಾಯ್ಸ್ ಆಫ್ ವಿರಾಜಪೇಟೆ’ ಗಾಯನ ಸ್ಪರ್ಧೆ*
  • *ಪಂಜರಪೇಟೆಯಲ್ಲಿ ದೇವಾಲಯದ ಮಾದರಿಯ ವಿಶಿಷ್ಟ ಗಣಪತಿ ಮಂಟಪ: ಆಕರ್ಷಕ ಕಾರಂಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ಸೆ.19 ರಂದು ರಾಷ್ಟ್ರೀಯ ಲೋಕ ಅದಾಲತ್*
  • *ಪೌಷ್ಟಿಕ ಆಹಾರ ಸೇವನೆ ಹಾಗೂ ಮಾತೃ ವಂದನಾ ಯೋಜನೆ ಸದುಪಯೋಗಕ್ಕೆ ಸುಮಂಗಲ ಜಿ. ಹಿರೇಮನಿ ಕರೆ*
  • *ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಮಹೇಶ್ ನಾಚಯ್ಯ*
  • *ಶ್ರೀ ಭಗವಾನ್ ವಿಶ್ವಕರ್ಮರ ಆರಾಧನೆಗೆ ಆದ್ಯತೆ ನೀಡಿ : ಹೆಚ್.ಬಿ.ಲಿಂಗಮೂರ್ತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಮಹೇಶ್ ನಾಚಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಮಹೇಶ್ ನಾಚಯ್ಯ*

ಸೆಪ್ಟೆಂಬರ್ 17, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ ಸೆ.17 NEWS DESK : ಕೊಡವರು ಮೂಲತಃ ಕೃಷಿಕರಾಗಿದ್ದು, ಕೃಷಿಯೇ ಜೀವನಾಧಾರ, ಕೃಷಿಯೇ ಸಂಸ್ಕೃತಿಗೆ ಮೂಲವಾಗಿದ್ದು, ಕೈಲ್‍ಪೊವ್ದ್, ಕಾವೇರಿ ಚಂಗ್ರಾಂದಿ ಹಾಗೂ ಪುತ್ತರಿ ಹಬ್ಬಗಳು ಕೃಷಿಯಾಧಾರಿತವಾಗಿದೆ. ಕೊಡವರ ಮದುವೆಗಳಲ್ಲಿ ‘ಸಮ್ಮಂದ ಅಡ್‍ಕುವ’ ಪದ್ಧತಿಗೆ ಬಹಳ ಪ್ರಾಮುಖ್ಯತೆ ಹಾಗೂ ಪ್ರಾಶಸ್ತ್ಯವಿದೆ. ಇದರಲ್ಲಿ ಬರುವ ಪದ ಸಾಲುಗಳೆಲ್ಲವೂ ಕೃಷಿಯನ್ನು ಉಲ್ಲೇಖಿಸುತ್ತದೆ. ‘ಕ್ರೋಡದೇಶ’ದ ಆರಂಭವೇ ಕೃಷಿಗೆ ಹೊಂದಿಕೊಂಡಿದ್ದು, ಆ ಯುಗದ ಕೊಡವ ಹಿರಿಯರು ಸ್ವತಃ ಕೈಯ್ಯಾರೆ ಭೂಮಿಯನ್ನು ಉಳುಮೆ ಮಾಡಿ ಕೃಷಿಗೆ ತಕ್ಕಂತೆ ಹದಗೊಳಿಸಿದ್ದು ಉಲ್ಲೇಖವಾಗಿದೆ. ಹೀಗಿರುವಾಗ ಕೊಡವ ಸಂಸ್ಕೃತಿಗೆ ಕೃಷಿಯೇ ಜಿವಂತಿಕೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.  ಗೋಣಿಕೊಪ್ಪ ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‍ನಲ್ಲಿ ಅಕಾಡೆಮಿಯ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸಂಘದ ವಾರ್ಷಿಕ ಕೈಲ್‍ಪೊವ್ದ್ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು, ಕೊಡಗಿನ ಕೃಷಿಭೂಮಿಗಳು ಇತ್ತೀಚಿನ ವರ್ಷಗಳಲ್ಲಿ ಪರಭಾರೆಗೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದ್ದು, ಇಲ್ಲಿನ ನೆಲ-ಜಲ, ಸಾಮಾಜಿಕ ಸ್ಥಿತಿಗತಿ, ಸಾಂಸ್ಕøತಿಕ ವೈಭವಗಳು ತನ್ನತನವನ್ನು ಕಳೆದುಕೊಳ್ಳುವ ಭೀತಿಯುಂಟಾಗುತ್ತಿದೆ. ತಾನು ಸ್ವತಃ ಸಂಪಾದಿಸಿದ ಆಸ್ತಿಯನ್ನು ಮಾತ್ರ ಪರರಿಗೆ ಮಾರಬಹುದಲ್ಲದೆ ಪಿತ್ರಾರ್ಜಿತ ಆಸ್ತಿಯನ್ನು ಮಾರುವ ನೈತಿಕತೆ ಇಲ್ಲವೆಂದು ಪ್ರತಿಪಾದಿಸಿದರು. ಕೊಡವ ಪುಸ್ತಕ ಪತ್ತಾಯವನ್ನು ಸಂಘ-ಸಂಸ್ಥೆ, ಸಮಾಜಗಳಲ್ಲಿ ಸ್ಥಾಪಿಸುವ ಉದ್ದೇಶವೆಂದರೆ ಈ ಮಣ್ಣಿನ ಹಿರಿತನ, ಸಾಂಸ್ಕೃತಿಕ ಸಿರಿತನವನ್ನು ಸಾಹಿತ್ಯಗಳ ಮೂಲಕ ತಿಳಿದುಕೊಳ್ಳುವುದಾಗಿದೆ. ಹೀಗಿರುವಾಗ ಆಯಾಯ ಜಾಗದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದಿಂದ ಪುಸ್ತಕಗಳನ್ನು ಪಡೆದುಕೊಂಡು ಓದುವುದರ ಮೂಲಕ ನಾಡಿನ ಸಾಂಸ್ಕøತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಾಗಿದೆ ಎಂದರು. ಕೊಡವ ಪುಸ್ತಕ ಪತ್ತಾಯವನ್ನು ಶ್ರೀ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷರಾದ ಅಜ್ಜಿಕುಟ್ಟಿರ ಸಿ. ದೇವಯ್ಯ ಅವರು ಅನಾವರಣಗೊಳಿಸಿ, ಮಾತನಾಡಿದ ಅವರು, ಪುಸ್ತಕ ಓದುವ ಅಭ್ಯಾಸ ಮರುಕಳಿಸುವಂತಾಗಬೇಕು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇಂತಹ ಸಾಹಿತ್ಯಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಪುಸ್ತಕ ಪ್ರೇಮಿಗಳಿಗೆ ಅನುಕೂಲಕರವಾಗಿದೆ ಎಂದರು. ಶ್ರೀ ಇಗ್ಗುತಪ್ಪ ಕೊಡವ ಸಂಘದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ರೂ. ಹತ್ತು ಸಾವಿರದ ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಘದ ಅಧ್ಯಕ್ಷರಿಗೆ ನೀಡಲಾಯಿತು. ನಂತರ ಶ್ರೀ ಇಗ್ತುತಪ್ಪ ಕೊಡವ ಸಂಘ ಹಾಗೂ ಚೋಡುಮಡ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಬಹುತೇಕ ಸದಸ್ಯರು, ಉಪಾಧ್ಯಕ್ಷ ಮೂಕಳಮಡ ಸುಬ್ರಮಣಿ, ಖಜಾಂಚಿ ಅಯ್ಯಂಡ ಪೂವಯ್ಯ, ನಿರ್ದೇಶಕರುಗಳಾದ ಮಾಳೇಟಿರ ಗಣಪತಿ, ಚೋಡುಮಡ ರಾಜ ಅಯ್ಯಣ್ಣ, ಚೊಟ್ಟೆಯಂಡಮಡ ಅರುಣ್, ಚೋನಿರ ಮಂಜು ಮುತ್ತಣ್ಣ, ಮಲ್ಲಂಡ ಸುರೇಶ್, ನೆಲ್ಲಮಕ್ಕಡ ಪ್ರೇಮ, ಚೆರಿಯಪಂಡ ಲತ ಪೂಣಚ್ಚ, ಮೇಕೇರಿರ ಖಾನ, ಕುಪ್ಪಂಡ ಗಣೇಶ ಇದ್ದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ನಾಯಂದಿರ ಆರ್.ಶಿವಾಜಿ, ಪೊನ್ನಿರ ಯು.ಗಗನ್ ಉಪಸ್ಥಿತರಿದ್ದರು.  ಕಾರ್ಯಕ್ರಮದ ಮೊದಲು ನೂರೆರ ಧನ್ಯ ರವೀಂದ್ರ, ಪುಚ್ಚಿಮಂಡ ರೇಖ, ಬೆಂಜಂಡ ರಶ್ಮಿ ದೇವಯ್ಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಶಾಂತೆಯಂಡ ಮಧು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಚೋಡುಮಡ ರಾಜ ಅಯ್ಯಣ್ಣ ಅತಿಥಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಚೋನಿರ ಸತ್ಯ ವಂದಿಸಿದರು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರ ಉದ್ಘಾಟನೆ*

ಸೆಪ್ಟೆಂಬರ್ 18, 2026

*ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಹಣ ವಸೂಲಿ : ಕೊಡಗು ಪೊಲೀಸರ ಎಚ್ಚರಿಕೆ*

ಸೆಪ್ಟೆಂಬರ್ 18, 2026

*ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*

ಸೆಪ್ಟೆಂಬರ್ 17, 2026

*ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಹಣ ವಸೂಲಿ : ಕೊಡಗು ಪೊಲೀಸರ ಎಚ್ಚರಿಕೆ*

ಸೆಪ್ಟೆಂಬರ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಸೆ.18 : ಹೊರ ಜಿಲ್ಲೆಗಳ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ “ವಾರಾಂತ್ಯದ ಪಾರ್ಟಿ” ಆಯೋಜಿಸುವುದಾಗಿ…

*ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*

ಸೆಪ್ಟೆಂಬರ್ 17, 2026

*ವಿರಾಜಪೇಟೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಪವಿತ್ರ ಗೆಜ್ಜೆ ಪೂಜೆ*

ಸೆಪ್ಟೆಂಬರ್ 17, 2026

*ಶ್ರೀ ಬಸವೇಶ್ವರ ದೇವಾಲಯದಲ್ಲಿ ‘ವಾಯ್ಸ್ ಆಫ್ ವಿರಾಜಪೇಟೆ’ ಗಾಯನ ಸ್ಪರ್ಧೆ*

ಸೆಪ್ಟೆಂಬರ್ 17, 2026

*ಪಂಜರಪೇಟೆಯಲ್ಲಿ ದೇವಾಲಯದ ಮಾದರಿಯ ವಿಶಿಷ್ಟ ಗಣಪತಿ ಮಂಟಪ: ಆಕರ್ಷಕ ಕಾರಂಜಿಗೆ ಸಾರ್ವಜನಿಕರ ಮೆಚ್ಚುಗೆ*

ಸೆಪ್ಟೆಂಬರ್ 17, 2026

*ಸೆ.19 ರಂದು ರಾಷ್ಟ್ರೀಯ ಲೋಕ ಅದಾಲತ್*

ಸೆಪ್ಟೆಂಬರ್ 17, 2026

*ಪೌಷ್ಟಿಕ ಆಹಾರ ಸೇವನೆ ಹಾಗೂ ಮಾತೃ ವಂದನಾ ಯೋಜನೆ ಸದುಪಯೋಗಕ್ಕೆ ಸುಮಂಗಲ ಜಿ. ಹಿರೇಮನಿ ಕರೆ*

ಸೆಪ್ಟೆಂಬರ್ 17, 2026

*ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಮಹೇಶ್ ನಾಚಯ್ಯ*

ಸೆಪ್ಟೆಂಬರ್ 17, 2026

*ಶ್ರೀ ಭಗವಾನ್ ವಿಶ್ವಕರ್ಮರ ಆರಾಧನೆಗೆ ಆದ್ಯತೆ ನೀಡಿ : ಹೆಚ್.ಬಿ.ಲಿಂಗಮೂರ್ತಿ*

ಸೆಪ್ಟೆಂಬರ್ 17, 2026

*ಮೋದಿ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ: 76 ಮಂದಿ ರಕ್ತದಾನ*

ಸೆಪ್ಟೆಂಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.