Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಡಾ.ರೇಷ್ಮಾಗೆ ಪಿಎಚ್‌ ಡಿ ಪದವಿ*
  • *ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ : ನಿಯಮ ಪಾಲನೆ ಖಡ್ಡಾಯ*
  • *ಸುಂಟಿಕೊಪ್ಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ*
  • *ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ : ಸೆ.19 ಮತ್ತು 20 ರಂದು ವಿಶೇಷ ಕಾರ್ಯಕ್ರಮ*
  • *ತೊರೆನೂರಿನಲ್ಲಿ ವಿಶ್ವಕರ್ಮ ಜಯಂತೋತ್ಸವ : ಮೆರವಣಿಗೆ*
  • *ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 32,612 ಕೋಟಿ ರೂ ಅನುಮೋದನೆ : ತುಳು ಎರಡನೇ ಅಧಿಕೃತ ಭಾಷೆ : ಸಚಿವ ಸಂಪುಟ ನಿರ್ಣಯ*
  • *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ : ಹಿರಿಯ ನಾಗರಿಕರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ: ಶುಭ*
  • *2131ನೇ ಮಧ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ*
  • *ಸೆ. 20ರಂದು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ*
  • *ವಿದ್ಯಾರ್ಥಿ ಜೀವನ ನಾಯಕತ್ವ ಗುಣ ಬೆಳೆಸಿಕೊಳ್ಳಲು ಮಹತ್ತರ ಸಮಯ: ಎಸ್.ಐ. ಮುನೀರ್ ಅಹಮದ್; ಮಡಿಕೇರಿಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಗೋಣಿಕೊಪ್ಪದಲ್ಲಿ 15ನೇ ವರ್ಷದ ಗೌರಿ–ಗಣೇಶೋತ್ಸವ: ಸಾಧಕರಿಗೆ ಸನ್ಮಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಗೋಣಿಕೊಪ್ಪದಲ್ಲಿ 15ನೇ ವರ್ಷದ ಗೌರಿ–ಗಣೇಶೋತ್ಸವ: ಸಾಧಕರಿಗೆ ಸನ್ಮಾನ*

ಸೆಪ್ಟೆಂಬರ್ 18, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಗೋಣಿಕೊಪ್ಪ, NEWS DESK ಸೆ.18: ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮರೆಯುತ್ತಿದ್ದೇವೆ ಎಂಬ ಆತಂಕದ ನಡುವೆಯೂ ಗಣೇಶೋತ್ಸವ ಸಮಿತಿಗಳು ನೆಲದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ವಿರಾಜಪೇಟೆ ಉಪ ಪೊಲೀಸ್ ಅಧೀಕ್ಷಕ ಮಹೇಶ್ ಕುಮಾರ್ ಹೇಳಿದರು.

ಗೋಣಿಕೊಪ್ಪದ ಒಂದನೇ ವಿಭಾಗದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘದ ವತಿಯಿಂದ ನಡೆಯುತ್ತಿರುವ 15ನೇ ವರ್ಷದ ಗೌರಿ–ಗಣೇಶೋತ್ಸವದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶೋತ್ಸವಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜದ ಒಗ್ಗಟ್ಟನ್ನು ಬಲಪಡಿಸುವ ವೇದಿಕೆಗಳಾಗುತ್ತಿವೆ. ಸ್ಥಳೀಯ ಸಂಘಟನೆಗಳು ಸಮಾಜದಲ್ಲಿ ಸಂಘಟನಾತ್ಮಕ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಸ್ಥಳೀಯ ಸಾಧಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಮಹೇಶ್ ಕುಮಾರ್, ತಮ್ಮದೇ ಊರಿನಲ್ಲಿ ತಮ್ಮ ಜನರ ಮಧ್ಯೆ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂತಸದ ವಿಚಾರ. ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಗೆ ಪ್ರೋತ್ಸಾಹ ನೀಡುವುದರ ಜತೆಗೆ, ಇತರ ವಿದ್ಯಾರ್ಥಿಗಳಿಗೂ ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಕಾಳೇಗೌಡ ಠಾಣಾಧಿಕಾರಿ ಮಾತನಾಡಿ, ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಸಂದೇಶವನ್ನು ಸಾರುವ ಸಂಘಟನಾತ್ಮಕ ಮನೋಭಾವ ಪ್ರಸನ್ನ ಯುವಕ ಸಂಘದಲ್ಲಿ ಶಿಸ್ತುಬದ್ಧವಾಗಿ ಕಂಡುಬರುತ್ತಿದೆ. ಸಂಘದ ಕಾರ್ಯವೈಖರಿ ಇತರ ಸಂಘಟನೆಗಳಿಗೂ ಮಾದರಿಯಾಗಿದ್ದು, ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಪೊನ್ನಂಪೇಟೆ ತಾಲೂಕು ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಬಿ.ಎನ್. ಪ್ರಕಾಶ್ ಮಾತನಾಡಿ, ಉತ್ತಮ ಚಿಂತನೆ ಇದ್ದರೆ ಯಾವುದೇ ಕಾರ್ಯವೂ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ಸಣ್ಣ ವೇದಿಕೆಗಳಿಂದಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನೇಕ ಸಾಧಕರಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ಗಿರಿಜಾ, ರಾಘವೇಂದ್ರ, ಲಕ್ಷ್ಮಿ, ಲೀನಾ ರಾಘವೇಂದ್ರ ಹಾಗೂ ಉಮಾ ಅವರನ್ನು ಸನ್ಮಾನಿಸಲಾಯಿತು. ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಭರತ್, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾ ರೈ ಹಾಗೂ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಚರಣ್ ಸಂಗಪ್ಪ ಅವರನ್ನು ಗೌರವಿಸಲಾಯಿತು.

ನಂತರ ಸೈಕ್ಲೋನ್ ನೃತ್ಯ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಶಾ ಮತ್ತು ಮನೋಜ್ ಅವರು 90ರ ದಶಕದ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ವೇದಿಕೆಯಲ್ಲಿ ಪ್ರಸನ್ನ ಯುವಕ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ಉದ್ಯಮಿಗಳಾದ ಚೆನ್ನರೆಡ್ಡಿ ಮತ್ತು ಶಿವಾರೆಡ್ಡಿ, ವೇದಿಕೆ ಸಮಿತಿ ಸಂಚಾಲಕ ಪ್ರಮೋದ್, ಪೂಜಾ ಸಮಿತಿ ಸಂಚಾಲಕ ಮುರಳೀಶ್, ಸಮಿತಿ ಸಂಚಾಲಕಿ ಸೌಜನ್ಯ, ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕೋಶಾಧಿಕಾರಿ ಅನ್ವಿತಾ, ಉಪಾಧ್ಯಕ್ಷರಾದ ಅನಿಲ್ ಮತ್ತು ದಿಲೀಪ್, ಸದಸ್ಯರಾದ ಕೌಶಿಕ್, ಆಶಾ, ಚಂದ್ರಕಲಾ, ಪ್ರಜ್ವಲ್, ಪುನೀತ್, ಅಜಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಡಾ.ರೇಷ್ಮಾಗೆ ಪಿಎಚ್‌ ಡಿ ಪದವಿ*

ಸೆಪ್ಟೆಂಬರ್ 19, 2026

*ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ : ನಿಯಮ ಪಾಲನೆ ಖಡ್ಡಾಯ*

ಸೆಪ್ಟೆಂಬರ್ 19, 2026

*ಸುಂಟಿಕೊಪ್ಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ*

ಸೆಪ್ಟೆಂಬರ್ 18, 2026

*ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ : ನಿಯಮ ಪಾಲನೆ ಖಡ್ಡಾಯ*

ಸೆಪ್ಟೆಂಬರ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.19 : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿರುವ ದುಬಾರೆ ಸಾಕಾನೆ ಶಿಬಿರವನ್ನು ಸೆ.20ರಿಂದ ಸಾರ್ವಜನಿಕರ ವೀಕ್ಷಣೆಗೆ…

*ಸುಂಟಿಕೊಪ್ಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ*

ಸೆಪ್ಟೆಂಬರ್ 18, 2026

*ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ : ಸೆ.19 ಮತ್ತು 20 ರಂದು ವಿಶೇಷ ಕಾರ್ಯಕ್ರಮ*

ಸೆಪ್ಟೆಂಬರ್ 18, 2026

*ತೊರೆನೂರಿನಲ್ಲಿ ವಿಶ್ವಕರ್ಮ ಜಯಂತೋತ್ಸವ : ಮೆರವಣಿಗೆ*

ಸೆಪ್ಟೆಂಬರ್ 18, 2026

*ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 32,612 ಕೋಟಿ ರೂ ಅನುಮೋದನೆ : ತುಳು ಎರಡನೇ ಅಧಿಕೃತ ಭಾಷೆ : ಸಚಿವ ಸಂಪುಟ ನಿರ್ಣಯ*

ಸೆಪ್ಟೆಂಬರ್ 18, 2026

*ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ : ಹಿರಿಯ ನಾಗರಿಕರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ: ಶುಭ*

ಸೆಪ್ಟೆಂಬರ್ 18, 2026

*2131ನೇ ಮಧ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ*

ಸೆಪ್ಟೆಂಬರ್ 18, 2026

*ಸೆ. 20ರಂದು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 18, 2026

*ವಿದ್ಯಾರ್ಥಿ ಜೀವನ ನಾಯಕತ್ವ ಗುಣ ಬೆಳೆಸಿಕೊಳ್ಳಲು ಮಹತ್ತರ ಸಮಯ: ಎಸ್.ಐ. ಮುನೀರ್ ಅಹಮದ್; ಮಡಿಕೇರಿಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ*

ಸೆಪ್ಟೆಂಬರ್ 18, 2026

*ಪ್ರತಿಭಟನೆ ಸಂದರ್ಭ ಜನರಲ್ ತಿಮ್ಮಯ್ಯ ಪ್ರತಿಮೆಗೆ ಅಗೌರವ ತೋರದಂತೆ ಮನವಿ*

ಸೆಪ್ಟೆಂಬರ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.