ಸಂಘದ ಆವರಣದಲ್ಲಿ ಭಾನುವಾರ ನಡೆದ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 2,791 ಸದಸ್ಯರಿದ್ದು, ₹61.44 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2026-27ನೇ ಸಾಲಿಗೆ ₹53.94 ಕೋಟಿ ಮೊತ್ತದ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕೇಂದ್ರ ಬ್ಯಾಂಕ್‌ನಿಂದ ಸಂಘಕ್ಕೆ ತೃತೀಯ ಬಹುಮಾನ ದೊರೆತಿದೆ. ಇದೇ ಸಾಲಿನಲ್ಲಿ 505 ಮಂದಿ ಸದಸ್ಯರಿಗೆ ಶೇ.10.5ರ ಬಡ್ಡಿದರದಲ್ಲಿ ಜಾಮೀನು ಸಾಲ ನೀಡಲಾಗಿದ್ದು, ₹9 ಕೋಟಿ ಅಸಲು ಹಾಗೂ ₹67 ಲಕ್ಷ ಬಡ್ಡಿ ವಸೂಲಿ ಮಾಡಲಾಗಿದೆ. ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಸಂಘದ ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಕೆಸಿಸಿ ಸಾಲ ಪಡೆಯುವ ಸದಸ್ಯರು ತಮ್ಮ ಸ್ವಾಧೀನದಲ್ಲಿರುವ ಜಮೀನಿನ ಆರ್‌ಟಿಸಿಯಲ್ಲಿ ಜಂಟಿ ಹೆಸರುಗಳಿದ್ದರೆ ಅವುಗಳನ್ನು ತೆಗೆದುಹಾಕಿಸಿ, ಸಿಂಗಲ್ ಆರ್‌ಟಿಸಿಯಾಗಿ ಪರಿವರ್ತಿಸಿಕೊಂಡರೆ ಕೆಸಿಸಿ ಸಾಲ ಪಡೆಯಲು ಅನುಕೂಲವಾಗುತ್ತದೆ ಎಂದು ಭರತ್ ಕುಮಾರ್ ತಿಳಿಸಿದರು.
ಸಂಘದ ಸದಸ್ಯರಾದ ಕೆ.ಬಿ. ಚಂದ್ರಶೇಖರ್, ಕೆ.ಕೆ. ಕುಶ್ವಂತ್, ದೇವರಾಜ್, ಎಚ್.ಕೆ. ಪ್ರಸೀ, ಶುಂಠಿ ಕುಮಾರ್, ಕೆ.ಪಿ. ಕೊಮಾರಪ್ಪ, ಬಿ.ಎಂ. ಸುರೇಶ್ ಮತ್ತಿತರರು ಸಂಘದ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸಂಘದ ನೂತನ ಕಟ್ಟಡದ ಮುಂದುವರಿದ ಕಾಮಗಾರಿಗೆ ಮಹಾಸಭೆ ಒಪ್ಪಿಗೆ ನೀಡಿತು. ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಅವರು ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಉಂಟಾಗಬಹುದಾದ ಅನಾಹುತಗಳ ಕುರಿತು ಸಭೆಯ ಗಮನ ಸೆಳೆದರು. ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಎಚ್.ಎಸ್. ನೇತ್ರಾವತಿ, ಎಚ್.ಆರ್. ಸುರೇಶ್, ಬಿ.ಪಿ. ಮೊಗಪ್ಪ, ಕೆ.ಕೆ. ಶಿವಪ್ರಕಾಶ್, ಹೆಗ್ಗುಳ ಹೂವಯ್ಯ, ಎ.ಎಸ್. ನವೀನ್ ಕುಮಾರ್, ಜಿ.ಎಸ್. ನಾಗರಾಜು, ಕೆ.ಜಿ. ದಿನೇಶ್, ಸುನಿತಾ ಚಂದ್ರಪ್ಪ, ಜಿ.ಈ. ಸುರೇಶ್, ಜಿ.ಬಿ. ಗಿರೀಶ್, ಕೆ.ಎಲ್. ರಕ್ಷಿತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ಕಿರಣ್ ಉಪಸ್ಥಿತರಿದ್ದರು.







