Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*
  • *ಸೋಮವಾರಪೇಟೆಯಲ್ಲಿ ಓಣಂ ಉತ್ಸವ ಹಾಗೂ ಹಿಂದೂ ಮಲಯಾಳ ಸಮಾಜದ ದಶಮಾನೋತ್ಸವ*
  • *ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಕರವೇ ವತಿಯಿಂದ ಹಣ್ಣು ಹಂಪಲು ವಿತರಣೆ*
  • *ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ₹1.23 ಕೋಟಿ ಲಾಭ; ಸದಸ್ಯರಿಗೆ ಶೇ.25ರಷ್ಟು ಲಾಭಾಂಶ*
  • *ಮೂರ್ನಾಡು ಎಂ.ಇ.ಎಸ್. ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕಾರ್ಯಕ್ರಮ; ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗೆ ಪ್ರೋತ್ಸಾಹ*
  • *ಕೊಡವ ಭಾಷೆಗೂ ರಾಜ್ಯ ಭಾಷೆ ಮಾನ್ಯತೆ ನೀಡಲು ಸಿಎನ್‌ಸಿ ಆಗ್ರಹ*
  • *ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವಿಪತ್ತು ನಿರ್ವಹಣಾ ತರಬೇತಿ; ವಿಪತ್ತನ್ನು ಎದುರಿಸಲು ಧೈರ್ಯ ಮತ್ತು ಸಮಯಪ್ರಜ್ಞೆ ಮುಖ್ಯ: ಮೇಜರ್ ಪ್ರೊ. ರಾಘವ ಬಿ.*
  • *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಸಭೆ*
  • *ಕೊಡಗಿನಲ್ಲಿ ವನ್ಯಜೀವಿ ಹಾವಳಿ: ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಸರ್ಕಾರ, ಅರಣ್ಯ ಇಲಾಖೆಗೆ ರಂಜಿ ಪೂಣಚ್ಚ ಪ್ರಶ್ನೆ*
  • *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*

ಸೆಪ್ಟೆಂಬರ್ 21, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ, NEWS DESK ಸೆ.21: ಶ್ರೀ ಗೌರಿ-ಗಣೇಶ ಉತ್ಸವದ ಅಂಗವಾಗಿ ವಿರಾಜಪೇಟೆ ನಗರದಲ್ಲಿ ಸೆಪ್ಟೆಂಬರ್ 25ರಂದು ಗಣೇಶ ಮಂಟಪಗಳ ಮೆರವಣಿಗೆ ಹಾಗೂ ಸೆಪ್ಟೆಂಬರ್ 26ರಂದು ಬೆಳಿಗ್ಗೆ ಗೌರಿಕೆರೆಯಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯಲಿದೆ.

ಉತ್ಸವದಲ್ಲಿ ಸುಮಾರು 20ರಿಂದ 25 ಸಾವಿರ ಮಂದಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಜನಸ್ತೋಮ ಹಾಗೂ ಗಣೇಶ ಮಂಟಪಗಳ ಸಂಚಾರ ಇರುವ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶದಂತೆ ಸೆ.25ರ ಮಧ್ಯಾಹ್ನ 2 ಗಂಟೆಯಿಂದ ಸೆ.26ರ ಬೆಳಿಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ನಗರದ ಒಳಭಾಗದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.

ಪ್ರಮುಖ ಮಾರ್ಗ ಬದಲಾವಣೆಗಳು

  • ಪೆರುಂಬಾಡಿ ಕಡೆಯಿಂದ ಬರುವ ವಾಹನಗಳು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಅರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಮಾತ್ರ ನಿಲುಗಡೆ ಮಾಡಬೇಕು.
  • ಮಾಕುಟ್ಟ ಮೂಲಕ ಗೋಣಿಕೊಪ್ಪ ಅಥವಾ ಸಿದ್ದಾಪುರ ಕಡೆಗೆ ತೆರಳುವ ವಾಹನಗಳು ಪೆರುಂಬಾಡಿ–ಬಾಳುಗೋಡು–ಬಿಟ್ಟಂಗಾಲ–ಕೈಕೇರಿ–ಪಾಲಿಬೆಟ್ಟ–ಸಿದ್ದಾಪುರ ಮಾರ್ಗ ಬಳಸಬೇಕು.
  • ಸಿದ್ದಾಪುರದಿಂದ ಕೇರಳದ ಕಡೆ ತೆರಳುವ ವಾಹನಗಳು ಸಿದ್ದಾಪುರ–ಬಿಟ್ಟಂಗಾಲ–ಬಾಳುಗೋಡು–ಪೆರುಂಬಾಡಿ ಮಾರ್ಗವಾಗಿ ಸಂಚರಿಸಬೇಕು.
  • ಮಡಿಕೇರಿಯಿಂದ ಕೇರಳಕ್ಕೆ ತೆರಳುವ ವಾಹನಗಳು ಮೂರ್ನಾಡು–ಕೊಂಡಂಗೇರಿ–ಅಮ್ಮತ್ತಿ–ಪಾಲಿಬೆಟ್ಟ–ಕೈಕೇರಿ–ಬಿಟ್ಟಂಗಾಲ–ಬಾಳುಗೋಡು–ಪೆರುಂಬಾಡಿ–ಮಾಕುಟ್ಟ ಮಾರ್ಗ ಬಳಸಬೇಕು.
  • ಕೇರಳದಿಂದ ಮಡಿಕೇರಿಗೆ ತೆರಳುವ ವಾಹನಗಳು ಪೆರುಂಬಾಡಿ–ಬಿಟ್ಟಂಗಾಲ–ಕೈಕೇರಿ–ಪಾಲಿಬೆಟ್ಟ–ಮೂರ್ನಾಡು ಮಾರ್ಗವಾಗಿ ಸಂಚರಿಸಬೇಕು.
  • ಮಡಿಕೇರಿಯಿಂದ ಗೋಣಿಕೊಪ್ಪ ಮೂಲಕ ಮೈಸೂರು–ಬೆಂಗಳೂರು ಕಡೆಗೆ ತೆರಳುವ ವಾಹನಗಳು ಮೂರ್ನಾಡು–ಕೊಂಡಂಗೇರಿ–ಅಮ್ಮತ್ತಿ–ಪಾಲಿಬೆಟ್ಟ–ಕೈಕೇರಿ–ಗೋಣಿಕೊಪ್ಪ ಮಾರ್ಗ ಬಳಸಬೇಕು.
  • ಸಿದ್ದಾಪುರದಿಂದ ಮೆರವಣಿಗೆ ವೀಕ್ಷಿಸಲು ಬರುವ ವಾಹನಗಳನ್ನು ಮಗ್ಗುಲ ಜಂಕ್ಷನ್ ಹಾಗೂ ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಬೇಕು.
  • ಗೋಣಿಕೊಪ್ಪ ಕಡೆಯಿಂದ ಬರುವ ವಾಹನಗಳನ್ನು ಕಾವೇರಿ ಕಾಲೇಜು ಬಳಿಯಿಂದ ಬಿಟ್ಟಂಗಾಲ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಮಾತ್ರ ನಿಲುಗಡೆ ಮಾಡಬೇಕು.
  • ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಬರುವ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಬೇಕು.
  • ಮೈಸೂರು–ಬೆಂಗಳೂರು ಕಡೆಯಿಂದ ಮಡಿಕೇರಿಗೆ ತೆರಳುವ ವಾಹನಗಳು ಗೋಣಿಕೊಪ್ಪ–ಪಾಲಿಬೆಟ್ಟ ಮಾರ್ಗವಾಗಿ ಸಂಚರಿಸಬೇಕು.
  • ಒಂಟಿಯಂಗಡಿ–ಚೆಂಬೆಬೆಳ್ಳೂರು ಕಡೆಯಿಂದ ಬರುವ ವಾಹನಗಳು ಕೊಡವ ಸಮಾಜ ಜಂಕ್ಷನ್‌ನಿಂದ ಚೆಂಬೆಬೆಳ್ಳೂರು ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಬೇಕು.
  • ಮಡಿಕೇರಿ ಕಡೆಯಿಂದ ಮೆರವಣಿಗೆ ವೀಕ್ಷಿಸಲು ಬರುವ ವಾಹನಗಳು ಚಿಕ್ಕಪೇಟೆಯಿಂದ ಮೂರ್ನಾಡಿಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲುಗಡೆ ಮಾಡಬೇಕು.

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಸೆ.25ರ ಮಧ್ಯಾಹ್ನ 2 ಗಂಟೆಯಿಂದ ಸೆ.26ರ ಬೆಳಿಗ್ಗೆ 10 ಗಂಟೆಯವರೆಗೆ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆ ಹಾಗೂ ತಹಶೀಲ್ದಾರ್ ಕಚೇರಿ ಪ್ರದೇಶ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಇದೇ ಅವಧಿಯಲ್ಲಿ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜು, ಮಗ್ಗುಲ ಜಂಕ್ಷನ್‌ನಿಂದ ದಬ್ಬನಿ ಮೊಹಲ್ಲಾ ಜಂಕ್ಷನ್ ಹಾಗೂ ಖಾಸಗಿ ಬಸ್ ನಿಲ್ದಾಣದಿಂದ ಮಟನ್ ಮಾರ್ಕೆಟ್‌ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ.

ಉತ್ಸವದ ಸಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸಂಚಾರ ನಿಯಮಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಪೊಲೀಸರು ಹೊಂದಿದ್ದು, ಸಾರ್ವಜನಿಕರು ಸ್ಥಳದಲ್ಲಿರುವ ಪೊಲೀಸ್ ಸಿಬ್ಬಂದಿ ನೀಡುವ ನಿರ್ದೇಶನಗಳನ್ನು ಪಾಲಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೋಮವಾರಪೇಟೆಯಲ್ಲಿ ಓಣಂ ಉತ್ಸವ ಹಾಗೂ ಹಿಂದೂ ಮಲಯಾಳ ಸಮಾಜದ ದಶಮಾನೋತ್ಸವ*

ಸೆಪ್ಟೆಂಬರ್ 21, 2026

*ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಕರವೇ ವತಿಯಿಂದ ಹಣ್ಣು ಹಂಪಲು ವಿತರಣೆ*

ಸೆಪ್ಟೆಂಬರ್ 21, 2026

*ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ₹1.23 ಕೋಟಿ ಲಾಭ; ಸದಸ್ಯರಿಗೆ ಶೇ.25ರಷ್ಟು ಲಾಭಾಂಶ*

ಸೆಪ್ಟೆಂಬರ್ 21, 2026

*ಸೋಮವಾರಪೇಟೆಯಲ್ಲಿ ಓಣಂ ಉತ್ಸವ ಹಾಗೂ ಹಿಂದೂ ಮಲಯಾಳ ಸಮಾಜದ ದಶಮಾನೋತ್ಸವ*

ಸೆಪ್ಟೆಂಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ, NEWS DESK ಸೆ.21: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಪಟ್ಟಣದ ಜಾನಕಿ ಸಭಾಂಗಣದಲ್ಲಿ ಓಣಂ ಉತ್ಸವ ಹಾಗೂ…

*ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಕರವೇ ವತಿಯಿಂದ ಹಣ್ಣು ಹಂಪಲು ವಿತರಣೆ*

ಸೆಪ್ಟೆಂಬರ್ 21, 2026

*ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ₹1.23 ಕೋಟಿ ಲಾಭ; ಸದಸ್ಯರಿಗೆ ಶೇ.25ರಷ್ಟು ಲಾಭಾಂಶ*

ಸೆಪ್ಟೆಂಬರ್ 21, 2026

*ಮೂರ್ನಾಡು ಎಂ.ಇ.ಎಸ್. ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕಾರ್ಯಕ್ರಮ; ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗೆ ಪ್ರೋತ್ಸಾಹ*

ಸೆಪ್ಟೆಂಬರ್ 21, 2026

*ಕೊಡವ ಭಾಷೆಗೂ ರಾಜ್ಯ ಭಾಷೆ ಮಾನ್ಯತೆ ನೀಡಲು ಸಿಎನ್‌ಸಿ ಆಗ್ರಹ*

ಸೆಪ್ಟೆಂಬರ್ 21, 2026

*ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವಿಪತ್ತು ನಿರ್ವಹಣಾ ತರಬೇತಿ; ವಿಪತ್ತನ್ನು ಎದುರಿಸಲು ಧೈರ್ಯ ಮತ್ತು ಸಮಯಪ್ರಜ್ಞೆ ಮುಖ್ಯ: ಮೇಜರ್ ಪ್ರೊ. ರಾಘವ ಬಿ.*

ಸೆಪ್ಟೆಂಬರ್ 21, 2026

*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಸಭೆ*

ಸೆಪ್ಟೆಂಬರ್ 21, 2026

*ಕೊಡಗಿನಲ್ಲಿ ವನ್ಯಜೀವಿ ಹಾವಳಿ: ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಸರ್ಕಾರ, ಅರಣ್ಯ ಇಲಾಖೆಗೆ ರಂಜಿ ಪೂಣಚ್ಚ ಪ್ರಶ್ನೆ*

ಸೆಪ್ಟೆಂಬರ್ 21, 2026

*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಸಭೆ*

ಸೆಪ್ಟೆಂಬರ್ 20, 2026

*NCC ಫೈರಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್; ಜೇಷ್ಠ ಸುಬ್ಬಯ್ಯಗೆ ಹಾರ್ದಿಕ ಅಭಿನಂದನೆ*

ಸೆಪ್ಟೆಂಬರ್ 20, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.