Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸೆ.25 ರಂದು ಅಣಬೆ ಕೃಷಿ ಕುರಿತು ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ*
  • *ಕಾರ್ಮಿಕ ಹಕ್ಕು, ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮ : ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು*
  • *ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*
  • *ಕೈಲ್ ಮುಹೂರ್ತ ಜಂಬರಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಆಹ್ವಾನ*
  • *ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್*
  • *ವಿರಾಜಪೇಟೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ; ಸ್ವಯಂ ಸೇವೆ ಎಂಬುದು ಎಂದಿಗೂ ಮುಗಿಯದ ನಿರಂತರ ಪ್ರಕ್ರಿಯೆ: ಮಾರ್ಚಂಡ ಗಣೇಶ್ ಪೊನ್ನಪ್ಪ*
  • *ವಿಪತ್ತು ನಿರ್ವಹಣೆಯ ತರಬೇತಿ ಹಾಗೂ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ: ರೆ. ಫಾ. ಮದಲೈ ಮುತ್ತು*
  • *ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ : ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ*
  • *ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಿರಸ್ಕಾರ*
  • *ದೊಡ್ಡಮಳ್ತೆ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*

ಸೆಪ್ಟೆಂಬರ್ 24, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.24 NEWS DESK : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯುಷ್ ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕರಿಕೆ ಗ್ರಾಮದಲ್ಲಿ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮದ ಫಲಾನುಭವಿಗಳಿಗೆ ಪೋಷಣ್ ವಾಟಿಕಗಳಲ್ಲಿ ಬೆಳೆಯುವ ಉತ್ಪನ್ನಗಳು ಹಾಗೂ ಸ್ಥಳೀಯವಾಗಿ ದೊರೆಯುವ ಋತುಮಾನಿಕ ಆಹಾರ ಪ್ರದರ್ಶನ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ದಿನನಿತ್ಯದ ಆಹಾರದಲ್ಲಿ ಮತ್ತು ಚಿಕ್ಕ ಮಕ್ಕಳ ಪೂರಕ ಆಹಾರದಲ್ಲಿ ನಿಯಮತವಾಗಿ ಬಳಸುವಂತೆ ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಶಿಶು ಹಾಗೂ ತಾಯಿ ಮರಣ ತಡೆಯುವುದು, ಜತೆಗೆ ಅಪೌಷ್ಟಿಕತೆ ಹೋಗಲಾಡಿಸಲು ಮುಂದಾಗಬೇಕಿದೆ. ಆ ದಿಸೆಯಲ್ಲಿ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ಕರಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಾಲಚಂದ್ರ ನಾಯರ್ ಅವರು ಮಾತನಾಡಿ ಉತ್ತಮ ಆಲೋಚನೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಉತ್ತಮ ಕರ್ತವ್ಯ ನಿಷ್ಠೆ ಅಗತ್ಯ. ಆ ನಿಟ್ಟಿನಲ್ಲಿ ಕೊರೋನಾ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯ ಪ್ರಜ್ಞೆ ಮೆಚ್ಚುವಂತದ್ದು ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ರವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಪೋಷಣ ಮಾಸಾಚರಣೆಯ 5 ಮುಖ್ಯ ಉದ್ದೇಶಗಳ ಕುರಿತು ವಿವರವಾಗಿ ಮಾಹಿತಿಯನ್ನು ನೀಡಿದರು. ಸ್ಥಳೀಯವಾದ ಆಹಾರ ಸಾಂಪ್ರದಾಯಿಕ ಆಹಾರ ಬಳಸಲು ಕರೆ ನೀಡಿದರು. ಕರಿಕೆ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಪಲ್ಲವಿ ಅವರು ಎಲ್ಲಾ ವಯೋಮಾನದವರಿಗೆ ಸಮತೋಲನ ಆಹಾರ ಮತ್ತು ವೈವಿಧ್ಯ ಆಹಾರ ಬಳಸುವ ನಿಟ್ಟಿನಲ್ಲಿ ಈ ದಿನ ವಿವಿಧ ರೀತಿಯ ಆಹಾರಗಳ ಪ್ರದರ್ಶನ ಮಾಡಿದ್ದೂ ಹಾಗೂ ಆಹಾರದ ಪಿರಮಿಡ್ ರಚನೆ ಮಾಡಿ ಅದರ ಮೂಲಕ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಲಾಗುತ್ತಿದ್ದು, ಮಹಿಳೆಯರು ಜಾಗೃತರಾಗಿ ತಮ್ಮ ಹಾಗೂ ಕುಟುಂಬದವರ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಲು ತಿಳಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ರವರು ಮಾತನಾಡಿ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಪೋಷಣ ಮಾಸಾಚರಣೆಯಲ್ಲಿ ಪ್ರಾಮುಖ್ಯತೆ ನೀಡಿತ್ತು ಎಂದರು. ಮಕ್ಕಳ ಪೋಷಕರು ಉತ್ತಮ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಅಭಿವೃದ್ಧಿಗೆ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಕೈಜೋಡಿಸುವಂತೆ ಅಂಗನವಾಡಿ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಕರೆ ನೀಡಿದರು. ವೈಯಕ್ತಿಕ ಸ್ವಚ್ಛತೆ, ಆಹಾರದಲ್ಲಿ ವೈವಿಧ್ಯತೆ ಮತ್ತು ತೂಕದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಅಭಿಲಾಶ್ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಇತ್ತೀಚೆಗೆ ನಿವೃತ್ತರಾದ 13 ನೇ ಮೈಲು ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಯಂತಿ, ಕರಿಕೆ ಗ್ರಾಮ ಪಂಚಾಯಿತಿಗೆ ಸೇರಿದ ಎಲ್ಲಾ ಗ್ರಾಮದ ಫಲಾನುಭವಿಗಳು ಗರ್ಭಿಣಿ ಬಾಣಂತಿಯರು ಭಾಗಮಂಡಲ ವೃತ್ತದ 30 ಗ್ರಾಮಕ್ಕೆ ಸಂಬಂಧಿಸಿದ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆಯರು ಇತರರು ಪಾಲ್ಗೊಂಡಿದ್ದರು. ಮೂರ್ನಾಡು ಗ್ರಾಮದಲ್ಲಿ ಪೋಷಣ್ ಮಾಸಾಚರಣೆ: ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಹಾಗೂ ಇಲಾಖಾ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಮೂರ್ನಾಡು ವೃತ್ತದ ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ಅಂಗವಾಗಿ ಪೋಷಣೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್ ಅವರು ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯ, ಸಮರ್ಪಕ ಪೋಷಣೆ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ದೊರೆಯುವ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಮೂರ್ನಾಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಐಕೊಳ-1 ಅಂಗನವಾಡಿ ಕಾರ್ಯಕರ್ತೆ ಉಮಾವತಿ ಅವರು ಪೌಷ್ಟಿಕ ಆಹಾರ, ಮಗುವಿನ ಪ್ರಾರಂಭಿಕ ಹಂತದಲ್ಲಿ ಪೋಷಣೆ, ರಕ್ಷಣೆ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಹುಕಾಡು ಪೈಸಾರಿ ಅಂಗನವಾಡಿ ಕಾರ್ಯಕರ್ತೆ ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿಯನ್ನು ವಿವರಿಸಿ, ಅರ್ಹ ಫಲಾನುಭವಿಗಳ ಅರ್ಜಿ ನೋಂದಣಿ ಪ್ರಕ್ರಿಯೆ ನಡೆಸಿದರು. ಶಾಸ್ತ್ರಿನಗರ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರು ಪ್ರೊಟೀನ್‍ಯುಕ್ತ ಆಹಾರಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಕಗ್ಗೊಡ್ಲು ಅಂಗನವಾಡಿ ಕಾರ್ಯಕರ್ತೆ ವೀಣಾ ಕುಮಾರಿ ಅವರು ಭಾಗ್ಯಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಗಾಂಧಿನಗರ ಅಂಗನವಾಡಿ ಕಾರ್ಯಕರ್ತೆ ಚೈತ್ರಾ ಅವರು ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಆಹಾರ ಪದಾರ್ಥಗಳು ಹಾಗೂ ಆಹಾರ ಮೆನು ಕುರಿತು ವಿವರಿಸಿದರು. ಕಾಂತೂರು ಅಂಗನವಾಡಿ ಕಾರ್ಯಕರ್ತೆ ಗೃಹಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕಾರ್ಯಕರ್ತೆ ಕುಸುಮ ಅವರು ಕಾರ್ಯಕ್ರಮದ ಆಯೋಜನೆ ಹಾಗೂ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಎಂ.ಬಾಡಗ-2 ಅಂಗನವಾಡಿ ಕಾರ್ಯಕರ್ತೆ ಭವ್ಯಾ ಅವರು ಸ್ವಾಗತಿಸಿದರು. ಅರಗಲು ಮೊಟ್ಟೆ ಅಂಗನವಾಡಿ ಕಾರ್ಯಕರ್ತೆ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಬಿಳಿಗೇರಿ ಅಂಗನವಾಡಿ ಕಾರ್ಯಕರ್ತೆ ಕನ್ನಿಕಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಡಗ ಅಂಗನವಾಡಿ ಕಾರ್ಯಕರ್ತೆ ಜಯಂತಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಇತರ ಫಲಾನುಭವಿಗಳು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೆ.25 ರಂದು ಅಣಬೆ ಕೃಷಿ ಕುರಿತು ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ*

ಸೆಪ್ಟೆಂಬರ್ 24, 2026

*ಕಾರ್ಮಿಕ ಹಕ್ಕು, ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮ : ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು*

ಸೆಪ್ಟೆಂಬರ್ 24, 2026

*ಕೈಲ್ ಮುಹೂರ್ತ ಜಂಬರಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಆಹ್ವಾನ*

ಸೆಪ್ಟೆಂಬರ್ 24, 2026

*ಕಾರ್ಮಿಕ ಹಕ್ಕು, ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮ : ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು*

ಸೆಪ್ಟೆಂಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.24 NEWS DESK : ಕಾರ್ಮಿಕ ಕಾಯ್ದೆಗಳ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿ ಯತ್ನಟ್ಟಿ ಮತ್ತು ತಂಡದವರು ಜಿಲ್ಲೆಯ…

*ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*

ಸೆಪ್ಟೆಂಬರ್ 24, 2026

*ಕೈಲ್ ಮುಹೂರ್ತ ಜಂಬರಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಆಹ್ವಾನ*

ಸೆಪ್ಟೆಂಬರ್ 24, 2026

*ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್*

ಸೆಪ್ಟೆಂಬರ್ 24, 2026

*ವಿರಾಜಪೇಟೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ; ಸ್ವಯಂ ಸೇವೆ ಎಂಬುದು ಎಂದಿಗೂ ಮುಗಿಯದ ನಿರಂತರ ಪ್ರಕ್ರಿಯೆ: ಮಾರ್ಚಂಡ ಗಣೇಶ್ ಪೊನ್ನಪ್ಪ*

ಸೆಪ್ಟೆಂಬರ್ 24, 2026

*ವಿಪತ್ತು ನಿರ್ವಹಣೆಯ ತರಬೇತಿ ಹಾಗೂ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ: ರೆ. ಫಾ. ಮದಲೈ ಮುತ್ತು*

ಸೆಪ್ಟೆಂಬರ್ 24, 2026

*ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ : ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ*

ಸೆಪ್ಟೆಂಬರ್ 24, 2026

*ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಿರಸ್ಕಾರ*

ಸೆಪ್ಟೆಂಬರ್ 24, 2026

*ದೊಡ್ಡಮಳ್ತೆ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ*

ಸೆಪ್ಟೆಂಬರ್ 24, 2026

*ಬೆಟ್ಟದಳ್ಳಿ, ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ನಿರ್ಣಯ*

ಸೆಪ್ಟೆಂಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.