ಸೋಮವಾರಪೇಟೆ, NEWS DESK ಅ.05: ಇಲ್ಲಿನ ಬೇಳೂರು ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ 121ನೇ ವರ್ಷದ ಕೂರ್ಗ್ ಓಪನ್ ಮತ್ತು ಹ್ಯಾಂಡಿಕ್ಯಾಪ್ ಗಾಲ್ಫ್ ಚಾಂಪಿಯನ್ಶಿಪ್ ಪಂದ್ಯಾಟ ಬೇಳೂರು ಗಾಲ್ಫ್ ಮೈದಾನದಲ್ಲಿ ಶುಕ್ರವಾರ ಹಾಗೂ ಶನಿವಾರ ನಡೆಯಿತು.
ಪಂದ್ಯಾಟದಲ್ಲಿ ಒಟ್ಟು 84 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
2026ರ ಓಪನ್ ವಿಭಾಗದಲ್ಲಿ ಮಡಿಕೇರಿಯ ಎಚ್.ಎಲ್. ಸಂಜಯ್ ಪ್ರಥಮ ಹಾಗೂ ಚಿಕ್ಕಮಗಳೂರಿನ ಶ್ರೀನಿವಾಸ್ ಆರ್. ದ್ವಿತೀಯ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಸೋಮವಾರಪೇಟೆಯ ಎಂ.ಎ. ಶ್ರೀಕಾಂತ್ ಪ್ರಥಮ ಹಾಗೂ ಮಡಿಕೇರಿಯ ದೈವಿಕ್ ಸಂಜಯ್ ದ್ವಿತೀಯ ಸ್ಥಾನ ಗಳಿಸಿದರು.
ಸ್ಟೇಬಲ್ಫೋರ್ಡ್ ಓಪನ್ ವಿಭಾಗದಲ್ಲಿ ವೀರಾಜಪೇಟೆಯ ಅಪ್ಪಣ್ಣ ಪ್ರಥಮ ಹಾಗೂ ಎನ್.ಎಸ್. ಅನಿಲ್ ದ್ವಿತೀಯ ಸ್ಥಾನ ಪಡೆದರು. ಸ್ಟೇಬಲ್ಫೋರ್ಡ್ ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಮೈಸೂರಿನ ನಂದನ್ ಕೆ. ಪ್ರಥಮ ಹಾಗೂ ಮೈಸೂರಿನ ಶಶಿಕುಮಾರ್ ದ್ವಿತೀಯ ಸ್ಥಾನ ಗಳಿಸಿದರು.
ಡಬಲ್ಸ್ ವಿಭಾಗದಲ್ಲಿ ಚಿಕ್ಕಮಗಳೂರಿನ ಶ್ರೀನಿವಾಸ್ ಆರ್. ಮತ್ತು ಮಡಿಕೇರಿಯ ಸಿ.ಟಿ. ಮಂದಣ್ಣ ಜೋಡಿ ಪ್ರಥಮ ಸ್ಥಾನ ಪಡೆದರೆ, ಶಶಿಕುಮಾರ್ ಮತ್ತು ದೈವಿಕ್ ಸಂಜಯ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು.
ಹಿರಿಯರ ವಿಭಾಗದಲ್ಲಿ ಸಂಜಯ್ ಸಿಕ್ಕಾ ಪ್ರಥಮ ಹಾಗೂ ಶ್ರೀನಿವಾಸ್ ಆರ್. ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಮಡಿಕೇರಿಯ ಮೃಣಾಲಿನಿ ಪ್ರಥಮ ಹಾಗೂ ಬೆಂಗಳೂರಿನ ಅನುರಾಧಾ ದ್ವಿತೀಯ ಸ್ಥಾನ ಗಳಿಸಿದರು.
ಪ್ರತಿ ವರ್ಷ ಬೇಳೂರು ಬಾಣೆಯಲ್ಲಿ ಗಾಲ್ಫ್ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಕ್ರೀಡಾಸಕ್ತರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬೇಳೂರು ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ ತಿಳಿಸಿದರು.
ಕ್ಲಬ್ ಆವರಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬೇಳೂರು ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ, ಕಾರ್ಯದರ್ಶಿ ಪವನ್ ಮುತ್ತಪ್ಪ, ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಮುತ್ತು ಕಾರ್ಯಪ್ಪ, ಬೇಳೂರು ಕ್ಲಬ್ ಪದಾಧಿಕಾರಿಗಳಾದ ಎ.ಎಂ. ವಿಶ್ವನಾಥ್, ಬಿ.ಜೆ. ಶಮಂತ್, ಎಸ್.ಕೆ. ಹೇಮಂತ್, ಕೆ.ಸಿ. ರವಿಕುಮಾರ್, ಬಿ.ಎಲ್. ಗಿರೀಶ್, ರವಿ ಪ್ರತಾಪ್, ಗಾಲ್ಫ್ ಕ್ಯಾಪ್ಟನ್ ಕೆ.ಎಂ. ಬೋಪಣ್ಣ, ನಂದಿನಿ ಬಸಪ್ಪ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.








