ವಿರಾಜಪೇಟೆ, NEWS DESK ಅ. 6: ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (YSS) ವತಿಯಿಂದ ವಿರಾಜಪೇಟೆಯ ಶ್ರೀ ಕಾವೇರಿ ಆಶ್ರಮದಲ್ಲಿ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಅ. 6ರಂದು ಬೆಳಗ್ಗೆ 9.30ರಿಂದ ಆಯೋಜಿಸಲಾಗಿದೆ.
ಶ್ರೀ ಶ್ರೀ ಪರಮಹಂಸ ಯೋಗಾನಂದರು 1917ರಲ್ಲಿ ಸ್ಥಾಪಿಸಿದ YSS ಸಂಸ್ಥೆಯ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಾಚೀನ ವೈಜ್ಞಾನಿಕ ಕ್ರಿಯಾ ಯೋಗ ಧ್ಯಾನವನ್ನು ಪರಿಚಯಿಸಲಾಗುತ್ತದೆ. ಅಂತರಂಗದ ಶಾಂತಿ, ಭಕ್ತಿ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಅನುಕೂಲಕರವಾದ ವಾತಾವರಣ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಹಿರಿಯ ಸನ್ಯಾಸಿಗಳ ನೇತೃತ್ವದಲ್ಲಿ ಮಾರ್ಗದರ್ಶಿತ ಧ್ಯಾನ, ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಕ್ರಿಯಾ ಯೋಗವನ್ನು ಕಲಿಯಲು ಆಸಕ್ತರಿಗೆ ಪಾಠಗಳ ಕುರಿತು ಅಗತ್ಯ ಮಾರ್ಗದರ್ಶನ ಮತ್ತು ನೋಂದಣಿ ಸೌಲಭ್ಯವೂ ಇರಲಿದೆ.
YSS ಪರಂಪರೆಯಲ್ಲಿ ಬೋಧಿಸಲಾಗುವ ಕ್ರಿಯಾ ಯೋಗವು ಪ್ರಾಚೀನ ಧ್ಯಾನ ತಂತ್ರವಾಗಿದ್ದು, ಶ್ರೀ ಶ್ರೀ ಪರಮಹಂಸ ಯೋಗಾನಂದರು ಈ ಜ್ಞಾನವನ್ನು ವಿಶ್ವದಾದ್ಯಂತ ಪರಿಚಯಿಸಿದರು. ಅಂತರಂಗದ ಶಾಂತಿ, ದೈವಿಕ ಆನಂದ, ಜ್ಞಾನ ಹಾಗೂ ವ್ಯಕ್ತಿಯೊಳಗಿನ ದೈವಿಕ ಚೈತನ್ಯದ ಅರಿವನ್ನು ಬೆಳೆಸುವಲ್ಲಿ ಕ್ರಿಯಾ ಯೋಗ ಸಹಕಾರಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಾರ್ಯಕ್ರಮದ ಅಂಗವಾಗಿ ಆಧ್ಯಾತ್ಮಿಕ ಸಾಹಿತ್ಯ ಮತ್ತು ಛಾಯಾಚಿತ್ರಗಳ ಪ್ರದರ್ಶನ ಹಾಗೂ ಮಾರಾಟ ಕೂಡ ನಡೆಯಲಿದೆ. ಯೋಗಾನಂದಜಿಯವರ ‘ಯೋಗಿಯ ಆತ್ಮಕಥೆ’ ಸೇರಿದಂತೆ ಕ್ರಿಯಾ ಯೋಗದ ಬೋಧನೆಗಳು ಮತ್ತು ತತ್ತ್ವಶಾಸ್ತ್ರದ ಕುರಿತು ಮಾಹಿತಿಯನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶವಿರಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸತ್ಸಂಗ, ಮಾರ್ಗದರ್ಶಿತ ಧ್ಯಾನ ಮತ್ತು ಆಧ್ಯಾತ್ಮಿಕ ಕಲಿಕೆಯ ಅನುಭವ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
YSS ಪಾಠಗಳ ನೋಂದಣಿ: yssofindia.org/yss-lessons
ಸಂಪರ್ಕ:
98456 53196
8296335455
98863 75157








