ಮೂರ್ನಾಡು, NEWS DESK ನ.4: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆಸಲಾದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ಮೂರ್ನಾಡು ಮತ್ತು ಸಿದ್ದಾಪುರದ ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ನೃತ್ಯ ಕಲಾ ಶಾಲೆಗೆ ಕೀರ್ತಿ ತಂದಿದ್ದಾರೆ.
ಮೂರ್ನಾಡಿನ ವಿದ್ಯಾರ್ಥಿನಿಯರಾದ ರಜತ ಸಿ.ಜೆ., ಶಿಲ್ಪಿತ ಬಿ.ಎಸ್., ದಕ್ಷಪ್ರಿಯ ಟಿ.ಪಿ. ಹಾಗೂ ಸಿದ್ದಾಪುರದ ವಿದ್ಯಾರ್ಥಿನಿಯರಾದ ಬಿ.ಎಲ್. ಸಾನ್ವಿಕ, ಕೆ.ಎಸ್. ಶೃಂಚನ, ಎಂ. ವೃತ್ತಿಕ ಮತ್ತು ವಿ.ವಿ. ಅಮಯ ಸಾಧನೆಗೈದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿನಿಯರು ನೃತ್ಯ ಕಲಾ ಶಾಲೆಯ ನೃತ್ಯ ಗುರುಗಳಾದ ವಿದುಷಿ ಜಲಜ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ.

















