ಲೇಖಕ: admin

ಬೆಂಗಳೂರು ಡಿ.2 NEWS DESK : ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಮತ್ತು ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿವೆ. ನಾವು ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆಯು ವೇಗ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ತುಮಕೂರು ಜಿಲ್ಲೆಯಲ್ಲಿ ಆಯೋಜಿಸಿದ್ದ ಸರ್ಕಾರದ ಸವಲತ್ತುಗಳ ವಿತರಣೆ, ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಡೀ ದೇಶದಲ್ಲಿ ರಾಜ್ಯದ ಜಿಎಸ್‌ಡಿಪಿ ನಂಬರ್ ಒನ್ ಆಗಿದೆ. ದೇಶದ ಜಿಡಿಪಿ ಬೆಳವಣಿಗೆ ದರ ಇನ್ನೂ 8 ಇದೆ. ಆದರೆ ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ದರ 10ಕ್ಕೆ ತಲುಪಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಸಾಧ್ಯವಾಗಿದ್ದು ರಾಜ್ಯದ ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದವರ ಒಟ್ಟಾರೆ ಕೊಡುಗೆಯಿಂದ ಎಂದರು. ತುಮಕೂರು ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಇಂದು ನೇರವಾಗಿ ತಲುಪಿವೆ. ಪ್ರತೀ ಜಿಲ್ಲೆಯಲ್ಲೂ ಲಕ್ಷ…

Read More

ಕೂಡಿಗೆ ಡಿ.2 NEWS DESK : ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಗ್ರಾಮದೇವತೆ ಬನಶಂಕರಿ ದೇವರ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆ ಸಾರ್ವಜನಿಕರ ಗಮನ ಸೆಳೆಯಿತು.  ಸ್ಪರ್ಧೆಯಲ್ಲಿ ದೂರ ದೂರದ ಊರುಗಳಿಂದ ಆಗಮಿಸಿದ ಹತ್ತಾರು ಜೋಡಿ ಎತ್ತುಗಳು ಪಾಲ್ಗೊಂಡವು. ಬೆಳಗ್ಗೆಯಿಂದಲೂ ಎಡಬಿಡದೇ ಸುರಿದ ಮಳೆಯ ನಡುವೆಯೂ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ನೋಡಿ ಮಕ್ಕಳಾದಿಯಾಗಿ ವೃದ್ದರು ಹಾಗೂ ಮಹಿಳೆಯರು ಸಂಭ್ರಮಿಸಿದರು. ಗಾಡಿಗಳ ಚಕ್ರಗಳನ್ನು ಕಟ್ಟಿ ಎತ್ತುಗಳಿಂದ ವೇಗವಾಗಿ ಎಳೆಯಿಸಿ ನಿಗಧಿ ಪಡಿಸಿದ್ದ. ಕೆಲವೇ ನಿಮಿಷಗಳ ಕಾಲಾವಕಾಶಗಳಲ್ಲಿ ಗುರಿ ತಲುಪಿಸಲು ಎತ್ತುಗಳಿಗೆ ಚಾವಟಿ ಕೋಲುಗಳಿಂದ ಹೊಡೆಯುತ್ತಾ ಚೀರುತ್ತಾ ಇದ್ದಂತಹ ಪಾಲಕರ ಈ ಸ್ಪರ್ಧಾ ಕೂಟ ಒಂದು ರೀತಿ ಹರ ಸಾಹಸದಂತಿತ್ತು. ಎಲ್ಲಡೆಗಳಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಮಂಚೂಣಿಯಲ್ಲಿರುವಂತಹ ಮಂಡ್ಯದಿಂದ ಕರೆತಂದಿದ್ದ ” ಅಣ್ಣಪ್ಪ ” ಎಂಬ ಎತ್ತನ್ನು ಈ ಸಂದರ್ಭ ಪೂಜಿಸಲಾಯಿತು. ಸ್ಪರ್ಧೆಯಲ್ಲಿ ಚಿಕ್ಕಮಂಗಳೂರು, ಕಡೂರು, ಹಾಸನ,…

Read More

ಮಡಿಕೇರಿ ಡಿ.2 : ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ (ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತುಪಡಿಸಿ) 3.12.2024 (ಮಂಗಳವಾರ) ರಂದು ಒಂದು ದಿವಸದ ರಜೆಯನ್ನು ಘೋಷಿಸಲಾಗಿದೆ ಎಂದು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ತಿಳಿಸಿದ್ದಾರೆ.

Read More

ಮಡಿಕೇರಿ ಡಿ.2 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗಾಳಿಬೀಡು ಪ್ರೌಢಶಾಲೆ ಮೈದಾನದಲ್ಲಿ ನಡೆದ ಬಾಣೆಹಬ್ಬದಲ್ಲಿ ಹತ್ತು ಕುಟುಂಬ 18 ಗೋತ್ರದ ಗೌಡ ಜನಾಂಗ ಬಾಂಧವರು ಗುಡ್ಡಗಾಡು ಓಟ, ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಬೈತಡ್ಕ ಜಾನಕಿ ಬೆಳ್ಳಿಯಪ್ಪ ಉದ್ಘಾಟಿಸಿ, ಮಾತನಾಡಿ ಗೌಡ ಯುವ ವೇದಿಕೆ ವತಿಯಿಂದ ಬಾಣೆ ಹಬ್ಬ ಆಯೋಜಿಸಿರುವುದು ಸಂತಸದ ವಿಚಾರವಾಗಿದ್ದು, ಇದೇ ಕಾರ್ಯಕ್ರಮವನ್ನು ಐದೈದು ಗ್ರಾಮಗಳನ್ನು ಒಗ್ಗೂಡಿಸಿ ನಡೆಸುವಂತಾದರೆ ಜನಾಂಗದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಲು ಸಹಕಾರಿ ಯಾಗುತ್ತದೆ ಎಂದರು. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಗುಂಡು ಹೊಡೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯು ಒಗ್ಗಟ್ಟನ್ನು ಬಲಪಡಿಸಲು ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಪರಸ್ಪರ ಬಾಂಧವ್ಯ ವೃದ್ಧಿಸಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು. ಗುಡ್ಡಗಾಡು ಓಟವನ್ನು ರಾಷ್ಟ್ರೀಯ ಮ್ಯಾರಥಾನ್ ಓಟಗಾರ ಸೂದನ ಡಾಲಿ ಉದ್ಘಾಟಿಸಿದರು. ಉಳಿದಂತೆ ಮೂರು ವಿಭಾಗದ ಶೂಟಿಂಗ್ ಸ್ಪರ್ಧೆಯನ್ನು ಕೊಡಗು…

Read More

ನಾಪೋಕ್ಲು ಡಿ.2 NEWS DESK : ಹಾವು ಕಚ್ಚಿ ಗಬ್ಬ ಹಸು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೈಕಾಡು ಗ್ರಾಮದಲ್ಲಿ ನಡೆದಿದೆ. ಕೈಕಾಡು ಗ್ರಾಮದ ಬೊಳ್ಳಂಡ ಸುಬ್ಬಯ್ಯ ಎಂಬವರ ಗಬ್ಬದ ಹಸುವನ್ನು ಪ್ರತಿದಿನದಂತೆ ತಮ್ಮ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಸಂಜೆ ಗದ್ದೆಗೆ ತೆರಳಿದ ಸಂದರ್ಭ ಹಸು ಸತ್ತು ಬಿದ್ದಿರುವುದು ಗೋಚರಿಸಿದೆ. ಬಳಿಕ ಪಾರಾಣೆ ಪಶುವೈದ್ಯಾಧಿಕಾರಿ ಲತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ವಿಷದ ಹಾವು ಕಚ್ಚಿ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

Read More

ನಾಪೋಕ್ಲು ಡಿ.2 NEWS DESK : ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಕೋ ಪೈಲೆಟ್ ಕಾರ್ಯಕ್ರಮ ನಡೆಯಿತು. ಮಡಿಕೇರಿ ಸರ್ವ ಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ. ದೊಡ್ಡೇಗೌಡ ಉದ್ಘಾಟಿಸಿ, ಮಾತನಾಡಿದ ಅವರು, ಶಿಕ್ಷಕೋ ಪೈಲೆಟ್ ಕಾರ್ಯಕ್ರಮವನ್ನು ಶಿಕ್ಷಕರಿಗೆ ತಮ್ಮ ಪಾಠ ಯೋಜನೆಗಳನ್ನು ಹೇಗೆ ವಿಶೇಷ ರೀತಿಯಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಸಿದ್ಧಪಡಿಸಿಕೊಳ್ಳಬಹುದು ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಪಿ.ಗುರುರಾಜ ಅವರ ಅಧ್ಯಕ್ಷತೆಯಲ್ಲಿ ನಡೆದ ತರಬೇತಿಯಲ್ಲಿ 18 ಮಂದಿ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕರು, ಇಲಾಖೆ ಅಧಿಕಾರಿಗಳು ಕಾರ್ಯಕ್ರಮಕ್ಕೆ ಪೂರಕವಾಗಿ ಮಾಹಿತಿಯನ್ನು ನೀಡಿದರು. ಕಾರ್ಯಗಾರದಲ್ಲಿ ಬಿಆರ್ ಪಿ ಮಂಜುಳ ಚಿತ್ರಾಪುರ, ಸಂಸ್ಥೆಯ ಎಜಿಎಂ ಅಶ್ವತ್, ಜಿಲ್ಲಾ ಸಂಯೋಜಕ ರಕ್ಷಿತ್ ಮತ್ತು ಹರೀಶ್ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.

Read More

ನಾಪೋಕ್ಲು  ಡಿ.1 NEWS DESK : ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ದೇವಾಲಯದ ಆವರಣದಲ್ಲಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಈ ಸೇವೆ ಕಾರ್ಯದಲ್ಲಿ ಶೌರ್ಯ ಘಟಕದ ಪ್ರಮುಖಾದ ದಿವ್ಯ ಬಾಳೆಯಡ, ಶಂಕರ್, ದಿಲಿಶ್, ಶರವಣ, ಉಮಾಲಕ್ಷ್ಮಿ, ಶ್ಯಾಮಲಾ ,ಆಶಾ, ಚಂದ್ರಕಲಾ, ರವಿ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ NEWS DESK ಡಿ.2 : ಕೊಡಗು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿರುವುದರಿಂದ ಹವಮಾನ ಇಲಾಖೆ ಡಿ.3 ರ ಬೆಳಿಗ್ಗೆ 8:30 ಗಂಟೆ ವರೆಗೆ ರೆಡ್ ಅಲರ್ಟ್ ಘೋಷಿಸಿದೆ.

Read More

ಮಡಿಕೇರಿ ಡಿ.2 NEWS DESK : ದೇವರ ಆರಾಧನೆಯ ಪ್ರಮುಖ ಅಂಗವಾಗಿ ಕಂಗೊಳಿಸಿರುವ ಭಜನಾ ಪದ್ಧತಿಯು ಸಮುದಾಯದ ಒಗ್ಗಟ್ಟಿಗೆ ಸಹಕಾರಿ ಎಂದು ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ.ಅನಿಲ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 34ನೇ ವಾಷಿ೯ಕೋತ್ಸವ ಅಂಗವಾಗಿ ಆಯೋಜಿತ ಸೂಯೋ೯ದಯದಿಂದ ಸೂಯ೯ಸ್ತಮಾನದವರೆಗಿನ ಅಖಂಡ ಏಕಾಹ ಭಜನಾ ಕಾಯ೯ಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದೂ ಸಂಸ್ಕೖತಿಯ ಅತೀ ಮುಖ್ಯ ಪ್ರಾಥ೯ನಾ ವಿಧಾನವಾಗಿರುವ ಭಜನೆ, ದೇವರ ಮೇಲಿನ ಭಕ್ತಿ, ನಂಬಿಕೆಗಳ ಅಭಿವ್ಯಕ್ತಿಯ ಧ್ಯೋತಕವಾಗಿ ಪರಿಗಣಿಸಲ್ಪಟ್ಟಿದೆ, ಭಜನೆಯ ಮೂಲಕ ದೇವರಿಗೆ ನಮ್ಮ ಧಾಮಿ೯ಕ ಶೖದ್ದೆಯನ್ನು ಸಮಪಿ೯ಸಬಹುದಾಗಿದೆ ಎಂದೂ ಅನಿಲ್ ಹೇಳಿದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯು 1990 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿಮಾ೯ಣದ ಸಂಕಲ್ಪ ಸಂದಭ೯ ಪ್ರಾರಂಭವಾಗಿ ಅಂದಿನಿಂದ 34 ವಷ೯ಗಳ ಕಾಲವೂ ಪ್ರತೀ ಸೋಮವಾರ ಶ್ರೀ ಆಂಜನೇಯ ದೇವಾಲಯದಲ್ಲಿ ಭಜನಾ ಕಾಯ೯ಕ್ರಮ ಆಯೋಜಿಸುತ್ತಾ ಬಂದಿದೆ, ಈ ಮೂಲಕ ಶ್ರೀರಾಮಾಂಜನೇಯ ಭಜನಾ ಮಂಡಳಿಯು ಕೊಡಗಿನ ಧಾಮಿ೯ಕ, ಸಾಂಸ್ಕೖತಿಕ…

Read More

ಮಡಿಕೇರಿ NEWS DESK ಡಿ.2 : ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಎಸ್‌ಎಂ ಫಿಟ್‌ನೆಸ್ ಜಿಮ್ ತರಗತಿಯ ಐವರು ಪಾಲ್ಗೊಂಡು ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರಲ್ಲಿ 14ವರ್ಷದ ವಿದ್ಯಾರ್ಥಿ ಕೂಡ ಪಾಲ್ಗೊಂಡಿರುವುದು ವಿಶೇಷ. ವಿಜೇತರಾದ ಸುರೇಶ್ ಎಂ.ಡಿ, ಹರ್ಷಿತ್ ಬಿ.ಡಿ, ಅಪ್ಪುಂಗ್, ವಿಘ್ನೇಶ್ ಎಂ. ಹಾಗೂ ಜನಾರ್ಧನ್ ಹೆಚ್.ಟಿ ಅವರುಗಳಿಗೆ ಎಸ್‌ಎಂ ಫಿಟ್‌ನೆಸ್ ಜಿಮ್ ನ ತರಬೇತುದಾರರಾದ ಶೇಖರ್ ಆರ್. ಹಾಗೂ ಅರುಣ್ ಆರ್. ತರಬೇತಿ ನೀಡಿದ್ದಾರೆ. ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ನ್ಯೂಜೆನ್ ಫಿಟ್ರಿಸ್ ಕುಶಾಲನಗರ ಮತ್ತು ಟೀಮ್ ಕಾವೇರಿ ಕ್ಲಾಸಿಕ್ ಸಹಯೋಗದೊಂದಿಗೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಸ್ಪರ್ಧೆ ನಡೆಯಿತು. (SM FITNESS, TOLLGATE, MADIKERI. 8217872661, 9845206770) 

Read More