ಲೇಖಕ: admin

ವಿರಾಜಪೇಟೆ ಡಿ.2 NEWS DESK :  ಬಹು ಜಾತಿ, ಬಹು ಧರ್ಮ, ಬಹು ತತ್ವದ ಜನರನ್ನು ಒಂದುಗೂಡಿಸಲು ಕನ್ನಡ ಭಾಷೆ ಮತ್ತು ಸಾಹಿತ್ಯ ಸಹಕರಿಸುತ್ತದೆ ಎಂದು ಕವಿ, ಸಾಹಿತಿ, ಬರಹಗಾರರು ಹಾಗೂ ನಿವೃತ್ತ ಪ್ರಾಧ್ಯಾಪರಾದ ಪ್ರೊ. ನರೇಂದ್ರ ರೈ ದೇರ್ಲ  ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕರುನಾಡ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು,  ಪಂಪ, ರನ್ನ, ಬಸವಣ್ಣ, ಶರೀಫ, ಅಲ್ಲಮ, ಅಕ್ಕಮಹಾದೇವಿ, ಕುವೆಂಪು ಬೇಂದ್ರೆಯವರ ಸಾಹಿತ್ಯವನ್ನು ಓದುವುದರಿಂದ ಆತ್ಮೀಯತೆಯ ಬಂಧ ಬೆಳೆಯುತ್ತದೆ. ಜಾಗತೀಕರಣ ಮತ್ತು ಕೊರೊನಾದಿಂದ ಮಕ್ಕಳ ಮನಸ್ಸು ಹಾಳಾಗಿದೆ. ಯಂತ್ರಗಳಂತೆ ಮರ ಗಟ್ಟಿ ಹೋದಂತಹ ಮನಸ್ಸುಗಳನ್ನು ಮತ್ತೆ ಸೂಕ್ಷ್ಮಗೊಳಿಸುವುದಕ್ಕೆ, ಸಂವೇದನಾಶೀಲರನ್ನಾಗಿ ಮಾಡುವುದಕ್ಕೆ ಕನ್ನಡ ಭಾಷೆ ಮತ್ತು ಸಾಹಿತ್ಯವು ದಿವ್ಯ ಔಷಧ ಎಂದರು. ವಿದ್ಯಾರ್ಥಿಗಳುಗಳಿಸುವ ಹೆಚ್ಚು ಅಂಕಗಳು ಮನಸ್ಸುಗಳನ್ನು ಜೋಡಿಸದಿದ್ದರೆ, ಸಂಬಂಧಗಳನ್ನು ಬೆಸೆಯದಿದ್ದರೆ ಅವು ವ್ಯರ್ಥ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ  ಮಾದಂಡ ತಿಮ್ಮಯ್ಯ ಮಾತನಾಡಿ, ಜಾಗತೀಕರಣದ ನೆಲೆಯಲ್ಲಿ ವಿಶ್ವದ…

Read More

ಪುತ್ತೂರು ಡಿ.2 NEWS DESK : ವಿವಿಧ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ಏಳು ಜನರಲ್ಲಿ ಒಬ್ಬರಿಗೆ ರಕ್ತದ ಆವಶ್ಯಕತೆ ಇರುತ್ತದೆ. ಕೆಲವರಂತೂ ರಕ್ತ ಸಿಗದೇ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ರಕ್ತದಾನದ ಮಹತ್ವವನ್ನು ಅರಿತು ಅರ್ಹರೆಲ್ಲರೂ ರಕ್ತದಾನ ಮಾಡುವುದಕ್ಕೆ ಹಿಂಜರಿಯಬಾರದು ಎಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಡಾ.ಕೆ.ಎನ್.ಸುಬ್ರಮಣ್ಯ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಯೂತ್ ರೆಡ್‍ಕ್ರಾಸ್ ಮತ್ತು ಎನ್‍ಎಸ್‍ಎಸ್ ಘಟಕ, ಎಬಿವಿಪಿ ಘಟಕ, ಕ್ಯಾಂಪ್ಕೋ ಇನ್ ಸೇವಾ, ಎಚ್‍ಡಿಎಫ್‍ಸಿ ಬ್ಯಾಂಕ್ ಮಂಗಳೂರು ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ರಕ್ತದಾನದ ನಂತರ ರೋಗಿಗೆ ಅದನ್ನು ನೀಡುವ ಮೊದಲು ಯಾವೆಲ್ಲಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎನ್ನುವುದನ್ನು ವಿವರಿಸಿದರು. ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿ ಡಾ.ಜೀನಲ್ ಮಾತನಾಡಿ ರಕ್ತದಾನದ ಬಗ್ಗೆ ಸಾಮಾನ್ಯ ಜನರಿಗಿರುವ ಅನುಮಾನಗಳ ಬಗ್ಗೆ…

Read More

ವಿರಾಜಪೇಟೆ ಡಿ.2 NEWS DESK : ಕಲೆ ಎಂಬುದು ದೇವರ ಸೃಷ್ಟಿ. ಕಲೆಯು ಬಹುತೇಕರಿಗೆ ವಂಶಪಾರಂಪರ್ಯವಾಗಿ ಬರುತ್ತದೆ. ಕೆಲವರಿಗೆ ಗುರುಗಳಿಂದ ಅರಿತು ಬರುತ್ತದೆ. ತಮಗೆ ಲಭಿಸಿದ ಕಲೆಯನ್ನು ಸಾರ್ವಜನಿಕರ ಮುಂದೆ ಪ್ರದರ್ಶನ ಮಾಡಿದಾಗ ಕಲೆಗೆ ಅರ್ಥ ಬರುತ್ತದೆ ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ರವೀಂದ್ರ  ಅಭಿಪ್ರಾಯಪಟ್ಟರು. ಕಾವೇರಿ ವಿದ್ಯಾ ಸಂಸ್ಥೆಗಳು, ವಿರಾಜಪೇಟೆ ಕಾವೇರಿ ಪದವಿ ಕಾಲೇಜು  ಮತ್ತು ಇಂಟೋಪಿಯಸ್ ನೃತ್ಯ ತರಬೇತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲರವ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆಗೆ ಜಾತಿ, ಧರ್ಮ, ಕಪ್ಪು ಬಿಳುಪು ಎಂಬುದು ಮುಖ್ಯವಲ್ಲ. ಆದರೆ ವ್ಯಕ್ತಿಗಳು ಸಾಧರ ಪಡಿಸುವ ವಿಧಾನ ಹಾಗೂ ನಿಪುಣತೆಯನ್ನು ಪ್ರದರ್ಶನ ಮಾಡಿದಲ್ಲಿ ಮಾತ್ರ ಕಲೆ ಪ್ರಾಮುಖ್ಯತೆ ಪಡೆಯಬಹುದಾಗಿದೆ. ಸಂಘ ಸಂಸ್ಥೆಗಳು ಕಲೆಯನ್ನು ಬಿಂಬಿಸಲು ವೇದಿಕೆ ಕಲ್ಪಿಸಿಕೊಡುತ್ತದೆ. ವ್ಯಕ್ತಿಗಳು ಭಾಗವಹಿಸುವುದು ಮುಖ್ಯವಾಗುತ್ತದೆ. ದೇಶದ ಮಹೋನ್ನತವಾದ ಕಲಾ ಸಂಸ್ಕೃತಿಯು ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿದೆ. ಇಂತಹ ಧೀಮಂತ ಸಂಸ್ಕೃತಿಯನ್ನು ಮರೆಯದೇ…

Read More

ವಿರಾಜಪೇಟೆ ಡಿ.2 NEWS DESK : ತಿತಿಮತಿ ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ನೌಕರರಾಗಿರುವ ಈ.ಕೆ.ಸುನಿಲ್ ರಾಜ್ ಅವರಿಗೆ ಮೈಸೂರು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ವಿಕಾಸ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುನಿಲ್ ರಾಜ್ ಅವರ ಬರಹ ಹಾಗೂ ಲೇಖನ ಬರೆಯುವ ಕೌಶಲ್ಯವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಸುನಿಲ್ ರಾಜ್ ಮೂಲತಃ ತಿತಿಮತಿಯ ನಿವಾಸಿಯಾಗಿದ್ದಾರೆ.

Read More

ವಿರಾಜಪೇಟೆ ಡಿ.2 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಿರು ಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೊಡಗಿನ ಬಹುಸಂಸ್ಕೃತಿಯಿಂದ ಕರ್ನಾಟಕ ರಾಜ್ಯಕ್ಕೆ ಕೊಡುಗೆ ಎಂಬ ಕಿರು ಚಿತ್ರ ಸ್ಪರ್ಧೆಯಲ್ಲಿ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಹತ್ತು ಸಾವಿರ ರೂ.ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರತಿಮಾ ರೈ ಅವರ ಮಾರ್ಗದರ್ಶನದಲ್ಲಿ ಅಂತಿಮ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಾದ ಎಂ.ಜೆ.ಕುಟ್ಟಪ್ಪ, ಪ್ರಜ್ವಲ್, ಡಿ.ಎಸ್.ಜಗದೀಶ್, ಎಂ.ಎ.ರಾಹುಲ್ ಉತ್ತಪ್ಪ, ಬಿ.ಎಂ.ಹರ್ಷಿತ್, ಕೃತಿಕ್ ಗಣಪತಿ,  ಟಿ.ಪಿ.ಪ್ರತ್ಯುಷ  ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವಿಜೇತ ತಂಡವನ್ನು ವಿದ್ಯಾಸಂಸ್ಥೆಯ ಪರವಾಗಿ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕೆ.ಪಿ.ದೃಶ್ಯ ಅಭಿನಂದಿಸಿದ್ದಾರೆ. ಕರ್ನಾಟಕ ಸುವರ್ಣ ಸಂಭ್ರಮ…

Read More

ಮಡಿಕೇರಿ ಡಿ.2 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳು ಹಾಗೂ ಅರೆಭಾಷೆ ಸಾಹಿತಿಗಳ ಪುಸ್ತಕಗಳು ಸೇರಿ 88 ಪುಸ್ತಕಗಳು ಮತ್ತು ದಿ. ಪಟ್ಟಡ ಪ್ರಭಾಕರರ 142 ಕೊಡಗು ಸಂಗಾತಿ ಸಂಚಿಕೆ ಎಲ್ಲದಕ್ಕೂ ಡಿಜಿಟಲ್ ಮಾರ್ಕೆಟ್ ಒದಗಿಸಲಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುವಂತಾಗಬೇಕು ಎಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಸಲಹೆ ನೀಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದ ಕೃಷಿ ಪತ್ತಿನ‌ ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ಭಾನುವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಉಳಿಸಿ, ಸಾಹಿತ್ಯ ಬೆಳೆಸುವ ಕುರಿತು ಉಪನ್ಯಾಸ ನೀಡಿದರು. ಅಕಾಡೆಮಿ ಪ್ರಕಟಿತ ಪುಸ್ತಕಗಳಿಗೆ ಈಗಾಗಲೇ ಟಿಜಿಟಲ್ ಟಚ್ ನೀಡಲಾಗಿದ್ದು, ಇದನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು ಅವರು…

Read More

ಮಡಿಕೇರಿ ಡಿ.2 NEWS DESK : ಮೈಸೂರು  ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಮೈಸೂರು-ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗಾಗಿ ಕ್ಲಸ್ಟರ್‌ ಮಟ್ಟದ ತರಬೇತಿ ನಡೆಯಿತು. ನಗರದ ಕೊಡವ ಸಮಾಜ ಕಾಂಪ್ಲೆಕ್ ನಲ್ಲಿರುವ ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ ಸಭಾಂಣದಲ್ಲಿ ನಡೆದ ತರಬೇತಿ ಶಬಿರವನ್ನು ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ಎಸ್.ಆರ್. ನಾರಾಯಣ ರಾವ್‌ ಉದ್ಘಾಟಿಸಿದರು. ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ವಸಂತ ಗುಣಾತ್ಮಕ ಸಾಲಗಳ ನೀಡಿಕೆ ಹಾಗೂ ಸಾಲ ವಸೂಲಾತಿ ಕ್ರಮಗಳು ವಿಷಯದ ಕುರಿತು ಉಪನ್ಯಾಸ ನೀಡಿದರು. ಇಗ್ಗುತ್ತಪ್ಪ  ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಲಿ. ಹಾಲಿ ನಿರ್ದೇಶಕ ಎಂ.ಕೆ.ಸೋಮಯ್ಯ ಅಧ್ಯಕ್ಷತೆ ಯನ್ನು ವಹಿಸಿದ್ದರು. ತರಬೇತಿಯಲ್ಲಿ ಕೊಡಗಿನ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರು, ಸಿಇಒ,…

Read More

ಮಡಿಕೇರಿ ಡಿ.2 NEWS DESK : 2024-25ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಡಿ.6 ರಿಂದ ಡಿ.17 ರವರೆಗೆ ವಿಡಿಯೋಗ್ರಫಿ ತರಬೇತಿ ಶಿಬಿರ (12 ದಿನಗಳು), ಡಿ.3ರಿಂದ 17 ರವರೆಗೆ ಜಿಮ್, ಫಿಟ್ನೆಸ್ ತರಬೇತಿ ಶಿಬಿರ(15 ದಿನಗಳು)ಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗುವುದು. ದ್ವಿತೀಯ ಪಿಯುಸಿ(ಪಾಸ್/ಫೇಲ್) ಕನಿಷ್ಠದ 18 ವರ್ಷದಿಂದ 40 ವರ್ಷ ಒಳಗಿರಬೇಕು. ಡಿಸೆಂಬರ್, 06 ರಿಂದ 17 ರವರೆಗೆ ವಿಡಿಯೋಗ್ರಫಿ ತರಬೇತಿ ಶಿಬಿರವು ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಜಿಮ್/ಫಿಟ್ನೆಸ್ ತರಬೇತಿ ಶಿಬಿರವು ಡಿ.3 ರಿಂದ 17 ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದರಂತೆ ತರಬೇತಿ ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ ಯುವಕ ಯವತಿಯರಿಗೆ ತರಬೇತಿ ಶಿಬಿರಗಳ ಅರ್ಜಿ ಸಲ್ಲಿಸಲು, ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಈ ಕಚೇರಿಯಿಂದ ಪಡೆದು ಡಿಸೆಂಬರ್, 02…

Read More

ಕುಶಾಲನಗರ, ಡಿ.1 NEWS DESK :  ವಿದ್ಯಾರ್ಥಿಗಳು ತಮ್ಮನ್ನು ಕಲಿಕಾ ಹಂತದಲ್ಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅಧ್ಯಯನದೊಂದಿಗೆ ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ( ಕ.ಸಾ.ಪ.) ಹಾಗೂ ಕ.ಸಾ.ಪ.ಹೆಬ್ಬಾಲೆ ಘಟಕದ ವತಿಯಿಂದ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಸಂಘದ ಸಹಯೋಗದೊಂದಿಗೆ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಂಪಾಜೆ ದಿ.ಸಣ್ಣಯ್ಯ ಪಟೇಲ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ,  ಭಾಷೆ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು. ವಿದ್ಯಾರ್ಥಿಗಳು ಹಿಂಜರಿಜೆ ಮನೋಭಾವ ಬಿಟ್ಟು ತಮ್ಮನ್ನು ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಲ್ಲಿ ಸಾಹಿತ್ಯದಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಭಾರದ್ವಾಜ್ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ.ಸಮಿತಿಯ ಸದಸ್ಯ ಎಂ.ಎನ್.ವೆಂಕಟನಾಯಕ್, ಇಂತಹ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಅಗತ್ಯವಿದೆ ಎಂದರು. ಸಾಹಿತ್ಯ…

Read More

ಮಡಿಕೇರಿ ಡಿ.2 NEWS DESK : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿ.20 ರಂದು ನಡೆಯಲಿದೆ. ನಮ್ಮ ಜಿಲ್ಲೆಗೆ ಅತಿ ಹತ್ತಿರದ ಜಿಲ್ಲೆಯಲ್ಲಿ ಸಮ್ಮೇಳನ ನಡೆಯಲಿದ್ದು, ಸಾಹಿತ್ಯ ಪರಿಷತ್ ಸದಸ್ಯರು, ಅಧ್ಯಾಪಕರು, ಸರ್ಕಾರಿ ನೌಕರರು, ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಭೇಟಿ ನೀಡಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದ್ದಾರೆ. ಈ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿ, ಪ್ರಸ್ತುತ ಸಮಸ್ಯೆಗಳು ಕುರಿತು ಉಪನ್ಯಾಸಗಳು, ಕವಿಗೋಷ್ಠಿಗಳು, ಮತ್ತು ಪುಸ್ತಕ ಮೇಳವನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು ಕರ್ನಾಟಕ, ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಬಹುಸಂಖ್ಯೆಯಲ್ಲಿ ಭಾಗವಹಿಸುವವರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ, ಕಲಾ, ಸಂಸ್ಕೃತಿ ಮತ್ತು ಸಂಗೀತವನ್ನು ಉಳಿಸುವ ಮತ್ತು ಅಭಿವೃದ್ಧಿ ಮಾಡುವ ಉದ್ದೇಶದಿಂದ ಲೇಖಕರು, ಕವಿಗಳು ಮತ್ತು ಕನ್ನಡಿಗರ ಸಮ್ಮೇಳನವಾಗಿದೆ. ಸಮ್ಮೇಳನಕ್ಕೆ ಹೋಗಲಿಚ್ಚಿಸುವವರು ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳುವ ಮೂಲಕ ನಾಲ್ಕು ದಿನಗಳ ವಸತಿ ಊಟೋಪಚಾರ…

Read More