ಬೆಂಗಳೂರು ಡಿ.5 NEWS DESK : ವೈದ್ಯರು ಕಾಯಿಲೆ ವಾಸಿ ಮಾಡಿದರೆ ಜನ ಸದಾ ನೆನೆಯುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳನ್ನು ನಿರ್ಲಕ್ಷ್ಯ ಮಾಡದೇ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ವೈದ್ಯರಾಗಬೇಕು, ಆಗ ನಮ್ಮ ಸರ್ಕಾರದ ಆಶಯ ಈಡೇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೌರಿಂಗ್ ಆಸ್ಪತ್ರೆ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ 500 ಬೆಡ್‌ಗಳ ನೂತನ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೌರಿಂಗ್ ಆಸ್ಪತ್ರೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಆಸ್ಪತ್ರೆ. ಸಾವಿರಾರು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸಿದೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಮತ್ತೊಂದು ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಮನಗಂಡು ಮತ್ತೊಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಮತ್ತೊಂದು ವೈದ್ಯಕೀಯ ಕಾಲೇಜು ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆಗಿ, ಸಾಮಾನ್ಯ ಜನರಿಗೆ, ಬಡವರಿಗೆ, ದಲಿತರಿಗೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದೆ. ಈಗ ಸುಸಜ್ಜಿತವಾದ…
ಲೇಖಕ: admin
ಮಡಿಕೇರಿ ಡಿ.5 NEWS DESK : ನೆರೆಯ ಬಾಂಗ್ಲಾ ದೇಶದಲ್ಲಿರುವ ಮತಾಂಧ ಸರ್ಕಾರ, ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಹಿಂದು ಹಿತರಕ್ಷಣಾ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಪ್ರಮುಖರು ಹಾಗೂ ಹಿಂದು ಕಾರ್ಯಕರ್ತರು ನೆರೆಯ ಬಾಂಗ್ಲಾದಲ್ಲಿನ ಹಿಂದು ಸಮುದಾಯದ ಮೇಲಿನ ದೌರ್ಜನ್ಯಗಳ ತಡೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ವಿಶ್ವ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಲು ಪ್ರಮುಖ ಪಾತ್ರ ವಹಿಸಬೇಕೆಂದು ಆಗ್ರಹಿಸಿದರು. ಹಿಂದು ಹಿತರಕ್ಷಣಾ ಸಮಿತಿಯ ಸಂಚಾಲಕ ಸುರೇಶ್ ಮುತ್ತಪ್ಪ, ಸಮಿತಿಯ ಪ್ರಮುಖ ಕುಕ್ಕೇರ ಅಜಿತ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಮುಖರಾದ ರವಿ ಕುಶಾಲಪ್ಪ, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಸಂಪತ್ ಕುಮಾರ್, ಅರುಣ್ ಶೆಟ್ಟಿ, ಮನು ಮಂಜುನಾಥ್ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಡಿ.5 NEWS DESK : ಕಾಫಿ ಕೃಷಿರಂಗದ ಮೇಲೆ ಪರಿಣಾಮ ಬೀರುವ ಸಫೇ೯ಸಿ ಕಾಯಿದೆ ಸಂಬಂಧಿತ ಲೋಕಸಭೆಯಲ್ಲಿ ಗಮನ ಸೆಳೆದು ಕಾಫಿ ಕೃಷಿಯು ಸಫೇ೯ಸಿ ಕಾಯಿದೆಯಡಿ ಬರುವುದಿಲ್ಲ ಎಂಬ ನಿರ್ಣಾಯಕ ಉತ್ತರಕ್ಕೆ ಕಾರಣರಾದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಮತ್ತು ಕನಾ೯ಟಕ ಬೆಳೆಗಾರರ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಈಗಾಗಲೇ ತೀವ್ರ ನೈಸರ್ಗಿಕ ವಿಕೋಪಗಳು, ನಿರಂತರ ಬೆಳೆ ವೈಫಲ್ಯಗಳು ಮತ್ತು ಕಡಿಮೆ ಸರಕು ಬೆಲೆ ಸಂಕಷ್ಟ ಎದುರಿಸುತ್ತಿರುವ ಕಾಫಿ ಕೃಷಿಕರ ಮೇಲೆ ಸಫೇ೯ಸಿ ಕಾಯಿದೆಯು ಮತ್ತೊಂದು ಮಾನಸಿಕ, ಆಥಿ೯ಕ ಹೊಡೆತದಂತಿತ್ತು, ಕಾಫಿ ಕೖಷಿಕರು ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ವಸೂಲಾತಿಗೆ ಸಫೇ೯ಸಿ ಕಾಯಿದೆ ಬಳಸಿಕೊಂಡು ಸಾಲಗಾರ ಕೖಷಿಕನ ಕಾಫಿ ತೋಟವನ್ನು ಬ್ಯಾಂಕ್ ಗಳು ಜಪ್ತಿ ಮಾಡುವ ಮೂಲಕ ಕೖಷಿಕರ ಆತಂಕಕ್ಕೆ ಕಾರಣವಾಗಿತ್ತು, ಕಾಯಿದೆಯನ್ನನ ಬ್ಯಾಂಕಿಂಗ್ ವಲಯವು ಜಾರಿಗೊಳಿಸುತ್ತಿದ್ದ ಹಿನ್ನಲೆಯಲ್ಲಿ ಅನೇಕ ಕಾಫಿ ಬೆಳೆಗಾರರು ತಮ್ಮ ಅಮೂಲ್ಯ ಕಾಫಿ ತೋಟಗಳನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗಿತ್ತು, ಸಂಸತ್ತಿನ ಅಧಿವೇಶನದಲ್ಲಿ ಸಂಸದ…
ನಾಪೋಕ್ಲು ಡಿ.5 NEWS DESK : ಕಕ್ಕುಂದಕಾಡು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಡಿ.7 ರಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜನರುಗಲಿದೆ. ಮಧ್ಯಾಹ್ನ 12.30 ಗಂಟೆಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಸೇವೆ ನೆರವೇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ವರದಿ : ದುಗ್ಗಳ ಸದಾನಂದ.
ಮಡಿಕೇರಿ, ಡಿ.5 NEWS DESK : ಜಿಲ್ಲಾ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿಯಾಗಿ ಅಪ್ಪಾರಂಡ ವೇಣು ಪೊನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ವ್ಯಾಲಿ ವ್ಯೂ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಗುಮ್ಮಟಿರ ಕಿಲನ್ ಗಣಪತಿ ಮಾತನಾಡಿ, ರಾಜ್ಯದಲ್ಲಿ ಸಂಘಟನೆ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಮದ್ಯ ಮಾರಾಟಗಾರರು ಹಲವು ಸಮಸ್ಯೆಗಳ ನಡುವೆ ವ್ಯಾಪಾರ ಮಾಡಬೇಕಾದ ಸಂದಿಗ್ಧತೆ ಇದೆ. ರಾಜ್ಯಕ್ಕೆ ಅತೀ ಹೆಚ್ಚು ಆದಾಯ ಅಬಕಾರಿ ವಲಯ ಮೂಲಕ ಬರುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಸ್ಪಂದನ, ಸಮಸ್ಯೆಗಳು ಪರಿಹಾರವಾಗದಿರುವುದು ವಿಪರ್ಯಾಸ ಎಂದು ವಿಷಾದಿಸಿದರು. ಸನ್ನದುದಾರರ ಬೇಡಿಕೆ ಈಡೇರಿಕೆಗೆ ನಿರಂತರ ಹೋರಾಟ ನಡೆಯುತ್ತಿದ್ದು, ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲವರ್ಧನೆಗೊಳಿಸಲಾಗುತ್ತಿದೆ. ಈಗಾಗಲೇ ವಿರಾಜಪೇಟೆ ತಾಲೂಕಿನಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅಬಕಾರಿ ವ್ಯಾಪ್ತಿಯ ಮೂರು ವಿಭಾಗದಲ್ಲಿ ಸಮಿತಿ ರಚನೆ ಮಾಡಲಾಗುವುದು. ಒಗ್ಗಟ್ಟಿನಿಂದ ಮುಂದುವರೆದರೆ ಸಮಸ್ಯೆಗಳ ಪರಿಹಾರ ಸಾಧ್ಯ. ಭ್ರಷ್ಟಾಚಾರ…
ಮಡಿಕೇರಿ ಡಿ.5 NEWS DESK : ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಶಿಕ್ಷಕಿ ಎಂದು ಪದನಾಮೀಕರಿಸಲು ಮತ್ತು ಡಿ.ದರ್ಜೆಯ ಸರ್ಕಾರಿ ನೌಕರರು ಎಂದು ಪರಿಗಣಿಸಲು ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತರ ಸಂಘ ಮನವಿ ಮಾಡಿದೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರ ಮೂಲಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣನವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಸ್ವೀಕರಿಸಿದ ಎ.ಎಸ್.ಪೊನ್ನಣ್ಣ, ಅಂಗನವಾಡಿ ಕಾರ್ಯಕರ್ತೆಯರು ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಅವರ ಕೋರಿಕೆ ನ್ಯಾಯ ಸಮ್ಮತವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವ ಭರವಸೆ ನೀಡಿದರು.
ಮಡಿಕೇರಿ ಡಿ.5 NEWS DESK : ಅನ್ಯಾಯ, ಹಿಂಸಾಚಾರ ಮಾಡುವವರನ್ನು ತಡೆಯುವುದು ಪ್ರವಾದಿಯವರ ಬೋಧನೆಯ ಒಂದು ಭಾಗವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಎಡಪಲಾ ಹೇಳಿದರು. ಸಿದ್ದಾಪುರದ ಮದರಸ ಆವರಣದಲ್ಲಿ ಕೊಡಗು ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಕಲೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯಾಯದ ವಿರುದ್ಧ ಹೋರಾಡಲು ಕಲೆ ಮತ್ತು ಸಾಹಿತ್ಯವನ್ನು ಬಳಸಿಕೊಳ್ಳಬೇಕು. ಕಲೋತ್ಸವು ಯುವ ಪ್ರತಿಭೆಗಳಿಗೆ ಒಳ್ಳೆಯ ಅವಕಾಶವಾಗಿದೆ ಎಂದು ಅವರು ಹೇಳಿದರು. ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ಕೊಳಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಉಪಾಧ್ಯಕ್ಷ ಸೈಯದ್ ಫಕ್ರುದ್ದೀನ್ ತಂಗಳ್ ಮುಖ್ಯ ಭಾಷಣ ಮಾಡಿದರು. ರಫೀಕ್ ಬಾಖವಿ, ಆರಿಫ್ ಫೈಝಿ, ಸಿಪಿಎಂ ಬಶೀರ್ ಹಾಜಿ, ಯು.ಎಂ.ಮುಸ್ತಫಾ ಹಾಜಿ, ಅಬ್ದುಲ್ ರವೂಫ್ ಹಾಜಿ, ಅಶ್ರಫ್ ಫೈಝಿ, ರವೂಫ್ ಹುದವಿ, ತಮ್ಲೀಕ್ ದಾರಿಮಿ, ಜಮ್ಶೀರ್ ವಾಫಿ…
ಮಡಿಕೇರಿ ಡಿ.5 NEWS DESK : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಸಕ್ತ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಇಲಾಖೆ ಪ್ರಮುಖ ಕಾರ್ಯಕ್ರಮಗಳಾದ ಯುವಜನ ಮೇಳ ಹಾಗೂ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಠಿಯಿಂದ ಪರಿಶಿಷ್ಟ ಜಾತಿ ಯುವ ಜನರಿಗೆ ಜಾನಪದ ಕಲಾ ಪ್ರಾಕಾರಗಳ ತರಬೇತಿ ಶಿಬಿರವನ್ನು 50 ಶಿಬಿರಾರ್ಥಿಗಳಿಗೆ ಡಿ.10 ರಿಂದ 17 ರವರೆಗೆ 8 ದಿನಗಳ ಕಾರ್ಯಕ್ರಮವನ್ನು ನಿಯಮಾನುಸಾರ ಮಾರ್ಗಸೂಚಿಗಳನ್ವಯ ಆಯೋಜನೆ ಮಾಡಲು ಕೇಂದ್ರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅದರಂತೆ ತರಬೇತಿ ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ ಯುವ ಜನರಿಗೆ ತರಬೇತಿ ಶಿಬಿರಗಳ ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಈ ಕಚೇರಿಯಿಂದ ಪಡೆದು ಡಿ.8 ರೊಳಗೆ ಅರ್ಜಿಗಳನ್ನು ಈ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-2220986 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ…
ಮಡಿಕೇರಿ ಡಿ.5 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಶಾಖೆಗೆ ನಡೆದ (2024 2029 ರ ಅವಧಿಯ) ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅರುಣ್ ಮುಕ್ಕಾಟಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪುಲಿಯಂಡ ಡಿ.ರಾಜೇಶ್, ರಾಜ್ಯ ಪರಿಷತ್ ಸದಸ್ಯರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಿ.ಎಂ.ಬಾಬು ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಡಿಕೇರಿ ಡಿ.5 NEWS DESK : ಕುಶಾಲನಗರದಲ್ಲಿ ಶ್ರೀ ಗಣಪತಿ ರಥೋತ್ಸವದ ಪ್ರಯುಕ್ತ ಕರ್ನಾಟಕ ಅಮೇಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನ್ಯೂಜೆನ್ ಫಿಟ್ನೆಸ್ ಕುಶಾಲನಗರ ಮತ್ತು ಟೀಮ್ ಕಾವೇರಿ ಕ್ಲಾಸಿಕ್ ಸಹಯೋಗದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ “ಕಾವೇರಿ ಕ್ಲಾಸಿಕ್” (ರಾಜ್ಯಮಟ್ಟ) ವಿಭಾಗದಲ್ಲಿ ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ಮೈಸೂರಿನ ನಜೀಬುಲ್ಲಾ ಖಾನ್ ಪಡೆದುಕೊಂಡರು. ಮೋಸ್ಟ್ ಮಸ್ಕ್ಯೂಲ್ ಮ್ಯಾನ್ ಪ್ರಶಸ್ತಿಯನ್ನು ಮೈಸೂರಿನ ಎಬ್ನೆಜರ್ ಕೆ ಪಡೆದುಕೊಂಡರು. ಕಾವೇರಿ ಕ್ಲಾಸಿಕ್ ಟೈಟಲ್ ಪ್ರಶಸ್ತಿಯನ್ನು ದಾವಣಗೆರೆಯ ಬಿ.ಕೆ.ಸುಶಿಲ್ ಕುಮಾರ್ ಪಡೆದುಕೊಂಡರು. ಕಾವೇರಿ ಕ್ಲಾಸಿಕ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದ 25ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮಿಸ್ಟರ್ ಕಾವೇರಿ ಮೆನ್ಸ್ ಫಿಸಿಕ್ಸ್ ಸ್ಪರ್ಧೆಯಲ್ಲಿ ಟೈಟಲ್ ವಿನ್ನರ್ ಪ್ರಶಸ್ತಿಯನ್ನು ಫ್ಯೂಚರ್ ಫಿಟ್ನೆಸ್ ಹಾಸನ ಜಿಲ್ಲೆಯ ಸ್ಪರ್ಧಿ ಇರ್ಫಾನ್ ಎ. ಪಡೆದುಕೊಂಡರು. ರನ್ನರ್ಸ್ ಪ್ರಶಸ್ತಿಯನ್ನು ಬೆಂಗಳೂರಿನ ಶ್ರೆಡ್ ಫಿಟ್ನೆಸ್ ಎಂ. ಶರತ್ ಕುಮಾರ್ ಪಡೆದುಕೊಂಡರು. ಮಿಸ್ಟರ್ ಕಾವೇರಿ ಮೆನ್ಸ್ ಫಿಸಿಕ್ಸ್ ನಲ್ಲಿ ರಾಜ್ಯದ ವಿವಿಧ…






